ಕೊನೆಗೂ ಸರಿಗಮಪ ಶೋನಲ್ಲಿ ರಾಜೇಶ್ ರವರ ಸ್ಥಾನಕ್ಕೆ ಆಯ್ಕೆಯಾದ ಖ್ಯಾತ ಗಾಯಕ ಯಾರು ಗೊತ್ತೇ?? ಅಧಿಕೃತವಾಗಿ ಆಯ್ಕೆಯಾಗಿದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಒಂದು ಚಿತ್ರಕ್ಕೆ ನಾಯಕ ನಟ ನಿರ್ದೇಶಕ ನಿರ್ಮಾಪಕ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹಾಡುಗಳು ಕೂಡ ಆಗಿರುತ್ತವೆ. ಇನ್ನು ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಹಲವಾರು ಸಿಂಗಿಂಗ್ ಶೋಗಳು ಪ್ರಸಾರವಾಗುತ್ತಿವೆ ಅವುಗಳು ಕೂಡ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಕೂಡ ಕಾರಣವಾಗಿದೆ. ಇನ್ನು ಸರಿಗಮಪ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಸಿಂಗಿಂಗ್ ಶೋ. ರಾಜೇಶ್ ಕೃಷ್ಣನ್ ಅವರು ಇಲ್ಲಿಯವರೆಗೆ ಈ ಕಾರ್ಯಕ್ರಮದಲ್ಲಿ ಮೂರು ಜನ ತೀರ್ಪುಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದರು.

ರಾಜೇಶ್ ಕೃಷ್ಣನ್ ರವರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮೇಲೋಡಿಯಸ್ ಕಿಂಗ್ ಎಂದೇ ಖ್ಯಾತರಾಗಿರುವ ಗಾಯಕ. ತಮ್ಮ ಮೇಲೋಡಿಯಸ್ ಮನೆಯಿಂದಲೇ ಪ್ರೇಕ್ಷಕರ ಮನಗೆಲ್ಲ ಬಲ್ಲಂತಹ ಪ್ರತಿಭಾನ್ವಿತ ಗಾಯಕ. ಇನ್ನು ಹಲವಾರು ಭಾಷೆಗಳಲ್ಲಿ ಸೇರಿಸಿ ಇದುವರೆಗೆ ಗಾಯಕ ರಾಜೇಶ್ ಕೃಷ್ಣನ್ ಅವರು ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. ಇನ್ನು ಇದುವರೆಗೂ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ರಾಜೇಶ್ ಕೃಷ್ಣನ್ ರವರು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜೇಶ್ ಕೃಷ್ಣನ್ ಅವರಿಂದ ತೆರವಾಗಿರುವ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು ಅದಕ್ಕೆ ಕೊನೆಗೂ ಕೂಡ ಉತ್ತರ ಸಿಕ್ಕಿದೆ. ಹೌದು ಸ್ನೇಹಿತರೆ ರಾಜೇಶ್ ಕೃಷ್ಣನ್ ರವರು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ರಘುದೀಕ್ಷಿತ್ ಹಾಗೂ ವಿ ಹರಿಕೃಷ್ಣ ರವರೊಂದಿಗೆ ತೀರ್ಪುಗಾರರಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ಆರಂಭವಾಗಲಿದ್ದು ರಾಜೇಶ್ ಕೃಷ್ಣನ್ ರವರ ಸ್ಥಾನವನ್ನು ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾಗಿರುವ ಹೇಮಂತ್ ಕುಮಾರ್ ರವರು ಬರ್ತಿ ಮಾಡಲಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav