ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸುದೀಪ್ ರವರ ಮೊದಲ ಯಶಸ್ಸು ಹುಚ್ಚ ಸಿನೆಮಾವನ್ನು ತಿರಸ್ಕರಿಸಿದ ಟಾಪ್ ಇಬ್ಬರು ನಟರು ಯಾರ್ಯಾರು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ರವರು ಇಂದು ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪ್ಯಾನ್ ಇಂಡಿಯಾ ನಟರಾಗಿದ್ದಾರೆ ಎಂದರೆ ತಪ್ಪಾಗದು. ಆದರೆ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪರಿಶ್ರಮ ಹಾಗೂ ಅವಮಾನಗಳನ್ನು ತಡೆದುಕೊಂಡು ಈ ಮಟ್ಟಕ್ಕೆ ಬೆಳೆದು ನಿಂತವರು. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರಿಗೆ ಮೊದಲ ಯಶಸ್ಸು ತಂದುಕೊಟ್ಟ ಚಿತ್ರವೆಂದರೆ ಅದು ಹುಚ್ಚ ಚಿತ್ರ. ಈ ಹುಚ್ಚ ಚಿತ್ರವನ್ನು ನಿರ್ಮಾಣ ಮಾಡಿದ್ದು ರೆಹಮಾನ್ ಹಾಗೂ ನಿರ್ದೇಶನ ಮಾಡಿದ್ದು ಓಂ ಪ್ರಕಾಶ್ ರಾವ್.

ಇನ್ನು ಈ ಚಿತ್ರ ಮೊದಲು ಕಿಚ್ಚ ಸುದೀಪ್ ರವರಿಗೆ ಬಂದಿದ್ದಲ್ಲ. ಈ ಚಿತ್ರ ಕನ್ನಡದ ಖ್ಯಾತ ಇಬ್ಬರು ನಟರು ತಿರಸ್ಕರಿಸಿದ ಮೇಲೆ ಕಿಚ್ಚ ಸುದೀಪ್ ರವರಿಗೆ ಸಿಕ್ಕಿತು. ಇಬ್ಬರು ನಟರು ಯಾರು ಹಾಗೂ ಯಾಕೆ ಆ ಸಿನಿಮಾವನ್ನು ತಿರಸ್ಕರಿಸಿದರು ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಈ ಚಿತ್ರವನ್ನು ಮೊದಲು ಮಾಡಬೇಕಾಗಿದ್ದು ಹ್ಯಾಟ್ರಿಕ್ ಹೀರೋ ಶಿವಣ್ಣ ನವರು. ಆದರೆ ಈ ಪಾತ್ರದಲ್ಲಿ ತಲೆಯನ್ನು ಬೋಳಿಸಬೇಕಿಗಿದ್ದರಿಂದ ಶಿವಣ್ಣ ಹಾಗೂ ಅವರ ಪತ್ನಿ ಗೀತಾರವರು ಇಬ್ಬರು ಕೂಡ ತಿರಸ್ಕರಿಸುತ್ತಾರೆ.

ನಂತರ ನಿರ್ಮಾಪಕ ರೆಹಮಾನ್ ರವರು ಈ ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ರವರು ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ರಿಯಲ್ ಸ್ಟಾರ್ ಉಪೇಂದ್ರ ರವರು ಆ ಕಾಲದಲ್ಲಿ ತಮ್ಮ ವಿಭಿನ್ನ ನಟನೆ ಹಾಗೂ ನಿರ್ದೇಶನದ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದರು. ತಲೆಬೋಳಿಸುವುದು ಕೂಡ ಒಪ್ಪಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ರವರು ಈ ಚಿತ್ರದಲ್ಲಿ ನಾನು ನಟಿಸುತ್ತೇನೆ ಎಂಬುದಾಗಿ ಮೊದಲು ಹೇಳುತ್ತಾರೆ. ನಂತರ ನಿರ್ಮಾಪಕ ರಹಮಾನ್ ರವರು ಈ ಚಿತ್ರದ ಹೆಸರು ಹುಚ್ಚ ಎಂಬುದಾಗಿ ಇಟ್ಟಿದ್ದೇನೆ ಎಂದು ಹೇಳಿದಾಗ ಈ ಚಿತ್ರದಲ್ಲಿ ನಾನು ನಟಿಸುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿದೆ ಉಪೇಂದ್ರರವರು ಹೇಳುತ್ತಾರೆ ಕಾರಣ ಚಿತ್ರದ ಟೈಟಲ್. ನನ್ನನ್ನು ಮೊದಲೇ ಕನ್ನಡ ಚಿತ್ರರಂಗದಲ್ಲಿ ಹುಚ್ಚ ಎಂದು ಕರೆಯುತ್ತಾರೆ ನೀವು ಚಿತ್ರದ ಹೆಸರನ್ನು ಹುಚ್ಚ ಎಂದು ಇಟ್ಟಿದ್ದೀರಿ ನಾನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಹೀಗೆ ಇವರಿಬ್ಬರು ಬಿಟ್ಟಂತಹ ಚಿತ್ರವನ್ನು ಹಿಡಿದ ಕಿಚ್ಚ ಸುದೀಪ್ ಅವರು ಇದೀಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.