ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಾಳ ಸಂಗಾತಿ ಆಯ್ಕೆ ಮಾಡುವಾಗ ಸಾಕಷ್ಟು ಎಚ್ಚರ ಇರಲಿ, ಇಲ್ಲದಿದ್ದರೆ ಹೀಗೆ ನಡೆಯುವುದು, ಈ ಜನಪ್ರಿಯ ನಟಿಯ ಜೀವನದಲ್ಲಿ ಏನಾಗಿದೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ನಾವು ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ಖಂಡಿತವಾಗಿಯೂ ಸಮಗ್ರವಾಗಿ ಪರಿಶೀಲಿಸಿ ಅವರೊಂದಿಗೆ ನಮ್ಮ ಹೊಂದಾಣಿಕೆ ಹೇಗಿದೆ ಎಂಬುದನ್ನು ನೋಡಿಕೊಂಡು ಮದುವೆಯಾಗಬೇಕು ಆದರೆ ಇಂದಿನ ದಿನಗಳಲ್ಲಿ ಯುವ ಜನತೆಯ ನೋಡಿದಾಕ್ಷಣ ಪ್ರೀತಿಯಾಯಿತು ಪ್ರೀತಿಯ ಕೂಡಲೇ ಮದುವೆ ಆಗಲೇಬೇಕೆಂಬ ನೀತಿಯಿಂದಾಗಿ ಅವಸರದಲ್ಲಿ ಮದುವೆಯಾಗುವುದು ಹಾಗೂ ನಂತರ ಅದು ಕೈಕೊಡುವುದು ಇದ್ದಿದ್ದೆ.

ಇಂದಿನ ವಿಚಾರದಲ್ಲಿ ನಾವು ಹೇಳುತ್ತಿರುವ ಘಟನೆ ಕೂಡ ಇದಕ್ಕೆ ಸಂಬಂಧಪಟ್ಟಿದ್ದೆ. ಹೌದು ಸ್ನೇಹಿತರೆ ತಮಿಳು ಕಿರುತೆರೆಯಲ್ಲಿ ಖ್ಯಾತ ನಿರೂಪಕಿ ಹಾಗೂ ನಟಿಯಾಗಿದ್ದಂತಹ ಚಿತ್ರ ರವರು ಇತ್ತೀಚೆಗೆ ತಮ್ಮ ಜೀವನವನ್ನು ಕೊನೆಗಾಣಿಸಿ ಕೊಂಡಿದ್ದಾರೆ. ಹೌದು ಸ್ನೇಹಿತರೆ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ತಮಿಳು ಕಿರುತೆರೆಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಹೆಸರನ್ನು ಮಾಡಿಕೊಂಡಿದ್ದ ಯುವನಟಿ ಹಾಗೂ ನಿರೂಪಕಿ. ಚಿತ್ರ ರವರು ಹೇಮಂತ್ ರಾಜ್ ಎಂಬ ಸ್ಥಳೀಯ ಉದ್ಯಮಿಯನ್ನು ಮದುವೆಯಾಗುತ್ತಾರೆ. ಇಬ್ಬರು ಮದುವೆಯಾಗಿದ್ದು ಇಬ್ಬರ ಮನೆಯವರಿಗೂ ಕೂಡ ಇಷ್ಟವಿರಲಿಲ್ಲ. ಇನ್ನು ಬರಬರುತ್ತಾ ಚಿತ್ರ ರವರ ಮೇಲೆ ಅವರ ಪತಿಯಾಗಿದ್ದಂತಹ ಹೇಮಂತ್ ರಾಜ್ ಅವರು ಸಾಕಷ್ಟು ಸಂಶಯ ಪಡಲು ಪ್ರಾರಂಭಿಸಿದರು. ಇದು ಚಿತ್ರ ರವರಿಗೆ ಸಾಕಷ್ಟು ಮುಜುಗರ ತರಲು ಪ್ರಾರಂಭಿಸಿತು.

ಒಮ್ಮೆಯಂತೂ ಕಾರಿನಲ್ಲಿ ಹೋಗಬೇಕಾದರೆ ಖಾರವಾದ ಮಾತನ್ನು ಪ್ರಾರಂಭಿಸಿ ಚಿತ್ರ ರವರಿಗೆ ಸಾಕಷ್ಟು ಮನಸ್ಸಿಗೆ ತಾಟುವಂತೆ ಮಾತುಗಳನ್ನು ಹೇಮಂತ್ ರಾಜ ರವರು ಆಡುತ್ತಾರೆ. ಯಾವುದೇ ಮೆಸೇಜ್ ಹಾಗೂ ಕಾಲ್ ಬಂದರೂ ಕೂಡ ಚಿತ್ರ ರವರ ಮೇಲೆ ಸಂಶಯದ ದೃಷ್ಟಿಯನ್ನು ಹೇಮಂತ್ ರಾಜ್ ರವರು ಬೀರುತ್ತಿದ್ದರು. ಕೊನೆಗೂ ಕೂಡ ಇದರಿಂದ ತಾಳಲಾರದೆ ಚಿತ್ರ ರವರು ತಮ್ಮ ಜೀವನವನ್ನುತಾವೇ ಕೊನೆಗಾಣಿಸಿ ಕೊಳ್ಳುತ್ತಾರೆ. ಅದಕ್ಕೆ ಹೇಳೋದು ಸ್ನೇಹಿತರೇ ಯಾರನ್ನೇ ಕೂಡ ಮದುವೆಯಾಗಲು ಅವರ ಕುರಿತಂತೆ ಅವರ ಮನಸ್ಸಿನ ಕುರಿತಂತೆ ಸಾಕಷ್ಟು ತಿಳುವಳಿಕೆ ಹೊಂದಿರಬೇಕು ಏಕೆಂದರೆ ಅವರೊಂದಿಗೆ ನೀವು ನಿಮ್ಮ ಇಡೀ ಜೀವನವನ್ನೇ ಕಳೆಯುತ್ತೀರಿ.