ಟ್ರಾಫಿಕ್ ಪೊಲೀಸರಿಗೆ ಮತ್ತೊಂದು ಶಾಕ್ ನೀಡಿದ ಗೃಹ ಸಚಿವರು, ವಾಹನ ಸವಾರರಿಗೆ ಬಿಗ್ ರಿಲೀಫ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಗರ ಪ್ರದೇಶದ ವಾಹನ ಸವಾರರಿಗೆ ಎರೆಡೆರೆಡು ಕಿರಿಕಿರಿ. ಒಂದು ಟ್ರಾಫಿಕ್, ಇನ್ನೊಂದು ರಸ್ತೆ ಮಧ್ಯದ ಗುಂಡಿಗಳು. ಇವೆರೆಡನ್ನೂ ಹೇಗೋ ಸಂಭಾಳಿಸಿಕೊಂಡು ಗಾಡಿ ಓಡಿಸಿ, ಮಧ್ಯ ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋದರೇ , ಟೋಯಿಂಗ್ ಸಿಬ್ಬಂದಿಗಳ ಕಾಟ. ಈ ಮೂರರಲ್ಲಿ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದರು. ಅದಲ್ಲದೇ ಈ ನಿಯಮಗಳನ್ನ ಜಾರಿಗೆ ತಂದ ಸರ್ಕಾರದ ವಿರುದ್ದ ಹಿಡಿಹಿಡಿ ಶಾಪ ಹಾಕುತ್ತಿದ್ದರು.

ಟೋಯಿಂಗ್ ಸಿಬ್ಬಂದಿಗಳ ಕಿರಿಕಿರಿಗೆ ತೀವ್ರ ಬೇಸತ್ತ ಸಾರ್ವಜನಿಕರು, ಕೆಲವು ದಿನಗಳ ಹಿಂದೆ ಟೋಯಿಂಗ್ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಧರ್ಮದೇಟು ನೀಡಿರುವುದು ಉಂಟು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಅದಲ್ಲದೇ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೋಯಿಂಗ್ ನಿಷೇಧಿಸಿ ಎಂಬ ಅಭಿಯಾನದ ಕೂಗು ಜೋರಾಗಿ ಕೇಳಿ ಬಂದಿತ್ತು. ಆದರೇ ಆ ಕೂಗಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಟೋಯಿಂಗ್ ಸಿಬ್ಬಂದಿಗಳಿಗೆ ಖಡಕ್ ಆದೇಶ ನೀಡಿ ಸಾರ್ವಜನಿಕರಿಗೆ ಸಂತಸ ತಂದಿದ್ದಾರೆ. ಬನ್ನಿ ಆ ಆದೇಶ ಏನೆಂಬುದನ್ನು ತಿಳಿಯೋಣ.

ಟೋಯಿಂಗ್ ನಿಂದ ಜನಸಾಮಾನ್ಯರು ಅನುಭವಿಸುತ್ತಿದ್ದ ನೋವಿಗೆ ಸ್ಪಂದಿಸಿರುವ ಆರಗ, ಇನ್ಮುಂದೆ ಟೋಯಿಂಗ್ ಮಾಡುವಾಗ ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು. ವಾಹನಗಳಿಗೆ ವ್ಯರ್ಥಹಾನಿ ಮಾಡಬಾರದು. ಅದಲ್ಲದೇ ಟೋಯಿಂಗ್ ಮಾಡುವ ಸಂದರ್ಭದಲ್ಲಿ ವಾಹನದ ಮಾಲೀಕ ಆ ಸ್ಥಳದಲ್ಲಿದ್ದರೇ, ಆ ವಾಹನವನ್ನ ಟೋಯಿಂಗ್ ಮಾಡಬೇಡಿ. ಬದಲಿಗೆ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ದಂಡ ವಿಧಿಸಿ ಎಂದು ಹೇಳಿದ್ದಾರೆ. ಅದಲ್ಲದೇ ಟೋಯಿಂಗ್ ಸಿಬ್ಬಂದಿಗಳು ಸಾರ್ವಜನಿಕರ ಜೊತೆ ಸ್ನೇಹ ಮತ್ತು ಸೌಜನ್ಯದಿಂದ ವರ್ತಿಸಬೇಕು. ಮತ್ತು ಟೋಯಿಂಗ್ ಮಾಡುವ ಮುನ್ನ ಮೈಕ್ ನಲ್ಲಿ ಎರಡರಿಂದ ಮೂರು ಭಾರಿ ಆ ಗಾಡಿಯ ಬಗ್ಗೆ ಹೇಳಬೇಕು. ಆಗಲು ಮಾಲೀಕ ಬಾರದಿದ್ದಲ್ಲಿ ಮಾತ್ರ ಟೋಯಿಂಗ್ ಮಾಡಿ ಎಂದು ಹೇಳಿದ್ದಾರೆ. ಗೃಹ ಸಚಿವರ ಈ ಕ್ರಮದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav