ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪಿ ತಪ್ಪಿಯೂ ಕೂಡ ವಿರಾಟ್ ಗೆ ನನ್ನ ರೀತಿ ಚಾಲೆಂಜ್ ಹಾಕಬೇಡಿ ಎಂದ ಗಂಗೂಲಿ ಯಾಕಂತೆ ಗೊತ್ತೆ??

2

ನಮಸ್ಕಾರ ಸ್ನೇಹಿತರೇ ಭಾರತ ತಂಡದ ಯಶಸ್ವಿ ನಾಯಕ ಸೌರವ್ ಗಂಗೂಲಿ. ಭಾರತ ತಂಡ ಮೊದಲ ಭಾರಿಗೆ ದೇಶವನ್ನು ಹೊರದೇಶದಲ್ಲಿಯೂ ಸಹ ಸರಣಿ ಗೆಲ್ಲುವುದು ಶುರುವಾಗಿದ್ದೇ ಸೌರವ್ ಗಂಗೂಲಿ ನಾಯಕತ್ವದಲ್ಲಿ. ನಂತರ ವಿಶ್ವಕಪ್ ಫೈನಲ್ ತಲುಪಿದ್ದು, ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದ್ದು, ಹೀಗೆ ಸಾಲು ಸಾಲು ಯಶಸ್ಸುಗಳು ನಾಯಕ ಸೌರವ್ ಗಂಗೂಲಿಯವರನ್ನ ಹುಡುಕಿಕೊಂಡು ಬಂದಿದ್ದವು. ಇನ್ನು ಆರಂಭಿಕ ಬ್ಯಾಟ್ಸಮನ್ ವಿರೇಂದ್ರ ಸೆಹ್ವಾಗ್ ತಂಡಕ್ಕೆ ಬಂದ ನಂತರ, ತಂಡದ ರನ್ ಗತಿ ಏರತೊಡಗಲು ಶುರುವಾಯಿತು.

ಮೊದಲ ಹದಿನೈದು ಓವರ್ ಗಳಲ್ಲಿ ಭಾರತ ತಂಡ ಹೆಚ್ಚು ರನ್ನುಗಳಿಸಲು ಶುರುವಾಗಿದ್ದೇ ವಿರೇಂದ್ರ ಸೆಹ್ವಾಗ್ ರ ಆರ್ಭಟದ ನಂತರವೇ. ಇನ್ನು ಭಾರತ ತಂಡದ ಮಾಜಿ ಆರಂಭಿಕ ಜೋಡಿ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಇತ್ತೀಚೆಗಷ್ಟೇ ನಡೆದ ಕೌನ್ ಬನೇಗಾ ಕರೋಡ್ ಪತಿಯ ಮೊದಲ ಏಪಿಸೋಡ್ ನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಬರೋಬ್ಬರಿ 25 ಲಕ್ಷ ರೂಪಾಯಿಯನ್ನು ಈ ಜೋಡಿ ಗೆದ್ದು ಬೀಗಿತು. ಈ ನಡುವೆ ಆಟ ನಡೆಯುತ್ತಿದ್ದ ವೇಳೆ ಬಿಗ್ ಬಿ ಅಮಿತಾಭ್ ಹಲವಾರು ಪ್ರಶ್ನೆಗಳನ್ನ ಕೇಳಿದರು. ಈ ಮಧ್ಯೆ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈಗಿನ ನಾಯಕ ವಿರಾಟ್ ಕೊಹ್ಲಿಗೆ ಹಾಕಿದ ಸವಾಲು ಸದ್ಯ ಚರ್ಚೆಯ ವಿಷಯವಾಗಿದೆ.

ಬಿಗ್ ಬಿ ಅಮಿತಾಭ್, ಸೌರವ್ ಗಂಗೂಲಿಯವರಿಗೆ 2002ರ ನಾಟ್ ವೆಸ್ಟ್ ಸರಣಿ ಜಯಿಸಿದಾಗ , ನೀವು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರ ಬಗ್ಗೆ ಹೇಳಿ ಎಂದರು. ಅದಕ್ಕೆ ಗಂಗೂಲಿ, ನಾನು ಇಪ್ಪತ್ತು ಸಾವಿರ ರನ್ ಭಾರಿಸಿದ್ದೇನೆ, ಕವರ್ ಡ್ರೈವ್ ಹೊಡೆಯುತ್ತೇನೆ. ಹಾಗಾಗಿ ನಾನು ತಂಡ ಗೆದ್ದಾಗ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದೆ. ಯಾರೂ ನನಗೆ ಸವಾಲು ಹಾಕಿದರೂ, ನಾನದನ್ನ ತೀರಿಸಿಯೇ ಬಿಡುತ್ತೇನೆ ಎಂದರು. ಅದಲ್ಲದೇ ಮುಂದುವರೆದು, ನೀವು ಶರ್ಟ್ ಬಿಚ್ಚುವ ಚಾಲೆಂಜ್ ನ್ನು ಈಗಿನ ನಾಯಕ ವಿರಾಟ್ ಕೊಹ್ಲಿಗೆ ಹಾಕಬೇಡಿ. ಆತ ಬೇಕಿದ್ದರೇ ಶರ್ಟ್ ಇಲ್ಲದೇ, ಲಂಡನ್ ನ ಆಕ್ಸ್ ಫರ್ಡ್ ಸ್ಟ್ರೀಟ್ ಗೆ ಬೇಕಾದರೇ ಹೋಗುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅದಲ್ಲದೇ ನಾಯಕ ವಿರಾಟ್ ಕೋಹ್ಲಿ ಬಹು ಆಕ್ರಮಣಕಾರಿ ಸ್ವಭಾವದವರು, ಅವರು ಎಂತಹ ಸವಾಲನ್ನ ಬೇಕಾದರೂ, ಸ್ವೀಕರಿಸಿ ಜಯಿಸಿಬಿಡುತ್ತಾರೆ ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ. ಸದ್ಯ ಭಾರತ ಇಂಗ್ಲೆಂಡ್ ನ ನಾಲ್ಕನೇ ಟೆಸ್ಟ್ ನ ಅಂತಿಮ ದಿನದ ಆಟ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ಗೆದ್ದರೂ ಐತಿಹಾಸಿಕ, ಭಾರತ ಗೆದ್ದರೂ ಐತಿಹಾಸಿಕ ಟೆಸ್ಟ್ ಎನಿಸಲಿದೆ‌.