ವಿರಾಟ್ ಕೊಹ್ಲಿ ರವರ ಕೆಟ್ಟ ಅಭ್ಯಾಸಗಳ ಬಗ್ಗೆ ತಿಳಿಸಿದ ಕೆ ಎಲ್ ರಾಹುಲ್, ಹೇಳಿದ್ದೇನು ಗೊತ್ತೇ???

ವಿರಾಟ್ ಕೊಹ್ಲಿ ರವರ ಕೆಟ್ಟ ಅಭ್ಯಾಸಗಳ ಬಗ್ಗೆ ತಿಳಿಸಿದ ಕೆ ಎಲ್ ರಾಹುಲ್, ಹೇಳಿದ್ದೇನು ಗೊತ್ತೇ???

ನಮಸ್ಕಾರ ಸ್ನೇಹಿತರೇ, ವಿರಾಟ್ ಕೊಹ್ಲಿ ರವರು ಎಂತಹ ಟಾಪ್ ಆಟಗಾರ ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ತನ್ನದ ಜೀವನವೇ ಕ್ರಿಕೆಟ್ ಎಂದು ಕೊಂಡಿರುವ ವಿರಾಟ್ ಕೊಹ್ಲಿ ರವರು ಕ್ರಿಕೆಟ್ ಆಟಕ್ಕಾಗಿ ಎಷ್ಟೆಲ್ಲ ತಯಾರಿ ಮಾಡಿ ಕಣಕ್ಕೆ ಇಳಿಯುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಷ್ಟೆಲ್ಲ ತಯಾರಿ ಮಾಡಿದ ಮೇಲೆ ಸಿಗುವ ಫಲ ಕೂಡ ಅಷ್ಟೇ ಇದೆ, ಯಾಕೆಂದರೆ ಕೊಹ್ಲಿ ರವರನ್ನು ಎಷ್ಟೇ ಜನ ಟ್ರೋಫಿ ಗೆದ್ದಿಲ್ಲ ಎಂದು ಟ್ರಾಲ್ ಮಾಡಿದರೂ ಕೂಡ ಅವರ ಆಟದ ಸಂಖ್ಯೆ ಗಳು, ಗೆಲುವಿನ ನಾಗಾಲೋಟ, ವಿದೇಶಗಳಲ್ಲಿ ಸರಣಿಗಳ ಮೇಲೆ ಸರಣಿಗಳ ಗೆಲುವು ಅವರ ಟ್ರಾಲ್ ಮಾಡುವವರ ಬಾಯಿ ಮುಚ್ಚಿಸುತ್ತವೆ.

ಇನ್ನು ಹೀಗೆ ವಿರಾಟ್ ಕೊಹ್ಲಿ ರವರು ನಾಯಕನಾಗಿ ಮಿಂಚುತ್ತಿರುವಾಗ ಮುಂದಿನ ನಾಯಕ ಎಂದೇ ಹೆಸರು ಪಡೆದುಕೊಂಡಿರುವ ಕೆ ಎಲ್ ರಾಹುಲ್ ರವರು ಕೂಡ ವಿರಾಟ್ ಕೊಹ್ಲಿ ರವರ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಈಗಾಗಲೇ ರೋಹಿತ್ ಶರ್ಮ ರವರ ಅನುಪಸ್ಥಿತಿಯಲ್ಲಿ ಉಪನಾಯಕನ ಜವಾಬ್ದಾರಿ ಎಂದಿಗೂ ಕೆ ಎಲ್ ರಾಹುಲ್ ರವರ ಹೆಗಲ ಮೇಲೆ ಇರುತ್ತದೆ. ಇವರನ್ನು ಭವಿಷ್ಯದ ಕ್ಯಾಪ್ಟನ್ ಎಂದೇ ಹೇಳಲಾಗುತ್ತದೆ.

ಇನ್ನು ಇವರಿಬ್ಬರ ನಡುವೆ ಬಾಂದವ್ಯ ಕೂಡ ಗಟ್ಟಿಯಾಗಿದ್ದು, ವಿರಾಟ್ ಕೊಹ್ಲಿ ರವರಿಂದ ಸಾಕಷ್ಟು ಕಲಿತ್ತಿದ್ದೇನೆ, ಫಾರ್ಮ್ ಕಳೆದುಕೊಂಡಾಗ ನನ್ನ ಮೇಲೆ ನಂಬಿಕೆ ಇಟ್ಟದ್ದು ಕೊಹ್ಲಿ ಹಾಗೂ ಗಂಗೂಲಿ ಮಾತ್ರ, ಇವರಿಬ್ಬರು ಇಲ್ಲದಿದ್ದರೆ ನಾನು ಕ್ರಿಕೆಟ್ ತಂಡದಲ್ಲಿ ಇರಲು ಸಾದ್ಯವಾಗುತ್ತಿರಲ್ಲ ಎಂದು ಹೇಳಿದ್ದಾರೆ ಕೆ ಎಲ್ ರಾಹುಲ್. ಇನ್ನು ಹೀಗೆ ಇಷ್ಟೆಲ್ಲ ಸ್ನೇಹ ವಿರುವಾಗ ಇತ್ತೀಚಿಗೆ ಕೆ ಎಲ್ ರಾಹುಲ್ ರವರನ್ನು ವಿರಾಟ್ ಕೊಹ್ಲಿ ರವರ ಉತ್ತಮ ಅಭ್ಯಾಸ ಹಾಗೂ ಕೆಟ್ಟ ಅಭ್ಯಾಸದ ಬಗ್ಗೆ ಹೇಳಿ ಎಂದಾಗ ಆತ ಉತ್ತಮ ಆಟಗಾರ, ಬಹಳ ಫಿಟ್ ಆಗಿದ್ದಾರೆ, ಅದಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ, ಅದು ಅವರ ಒಳ್ಳೆಯ ಅಭ್ಯಾಸ ಇನ್ನು ಕೆಟ್ಟ ಅಭ್ಯಾಸ ಏನು ಎಂದರೆ, ಶೋ ಆಫ್. ಹೌದು ಶರ್ಟ್ ಇಲ್ಲದೆ ತನ್ನ ಪ್ಯಾಕ್ಸ್ ಗಳನ್ನು ಎಲ್ಲರಿಗೂ ತೋರಿಸಿಕೊಂಡು ಡ್ರೆಸ್ಸಿಂಗ್ ರೂಮ್ ನಲ್ಲಿ ಸದಾ ಓಡಾಡುತ್ತಾರೆ, ಫೋನ್ ಜೊತೆ ಶರ್ಟ್ ಇಲ್ಲದೆ ಇರುವುದೇ ಅವರ ಕೆಟ್ಟ ಅಭ್ಯಾಸ ಎಂದಿದ್ದಾರೆ.