ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಗಮಣಿ ಹೇಗೆ ಉತ್ಪತ್ತಿಯಾಗುತ್ತೆ ಗೊತ್ತೇ?? ಇದಕ್ಕೆ ಯಾಕೆ ಕೋಟಿ ಕೋಟಿ ಬೆಲೆ?? ಇದರ ಹಿಂದಿರುವ ರಹಸ್ಯವಾದರೂ ಏನು ಗೊತ್ತೇ??

31

ನಮಸ್ಕಾರ ಸ್ನೇಹಿತರೇ ನಮ್ಮ ಸನಾತನ ಧರ್ಮದಲ್ಲಿ ಅನಾದಿಕಾಲದಿಂದಲೂ ಹಲವಾರು ಆಚರಣೆಗಳು ಹಾಗೂ ನಂಬಿಕೆಗಳು ಜಾರಿಯಾಗಿ ಕಂಡುಬಂದಿವೆ. ಹಲವಾರು ನಂಬಿಕೆಗಳು ಇಂದಿಗೂ ಕೂಡ ವೈಜ್ಞಾನಿಕವಾಗಿ ಮೂಢನಂಬಿಕೆಯ ಪಟ್ಟವನ್ನು ಕಂಡುಕೊಂಡರು ಸಹ ಜನರು ಇಂದೂ ಕೂಡ ಅದನ್ನು ಪಾಲಿಸುತ್ತಾರೆ. ಇನ್ನು ಅದರಲ್ಲಿ ಒಂದು ಹಾವಿನ ತಲೆಯಲ್ಲಿರುವ ನಾಗಮಣಿಯ ಕುರಿತಂತೆ.

ಹೌದು ಸ್ನೇಹಿತರೆ ಮೊದಲಿನ ಕಾಲದಿಂದಲೂ ಕೂಡ ಹಾವಿನ ತಲೆಯಲ್ಲಿ ನಾಗಮಣಿ ಇರುತ್ತದೆ ಅದು ಹುಣ್ಣಿಮೆಯ ಸಂದರ್ಭದಲ್ಲಿ ಅದರ ಪ್ರಕಾಶಮಾನ ಕ್ಕೆ ತಲೆದೂಗಿ ಮಲಗುತ್ತದೆ ಎಂಬುದೆಲ್ಲ ಕಥೆಗಳು ಈಗಾಗಲೇ ಸಾಕಷ್ಟು ಬಾರಿ ಹರಡಿರುವುದು ನಿಮಗೆಲ್ಲಾ ಗೊತ್ತಾಗಿದೆ. ಇಂದು ಅದರ ಸತ್ಯಾಸತ್ಯತೆಗಳನ್ನು ನಿಮ್ಮ ಎದುರು ಬಿಚ್ಚಿಡುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಹೌದು ಸ್ನೇಹಿತರೆ ಪೂರ್ವಕಾಲದಿಂದಲೂ ಹಲವಾರು ನಾಗಮಣಿಗಳ ಉಲ್ಲೇಖಗಳು ಪುರಾಣದಲ್ಲಿ ನಡೆದಿದ್ದರೂ ಸಹ ಇಂದಿನ ದಿನದ ವಿಷಯಕ್ಕೆ ಬರುವುದಾದರೆ ಇವೆಲ್ಲ ವೈಜ್ಞಾನಿಕವಾಗಿ ಎಲ್ಲೂ ಕೂಡ ಕಂಡುಬಂದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ನಾಗರಹಾವಿನ ತಲೆಯಲ್ಲಿ ಕಪ್ಪು ಮಣಿಯನ್ನು ಹೊರತೆಗೆದು ಅದನ್ನು ಕೋಟ್ಯಂತರ ರೂಪಾಯಿ ಬೆಲೆಗೆ ಮಾರಾಟ ಮಾಡುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ.

ಆದರೆ ಇದರ ನಿಜಾಂಶವನ್ನು ನಾವು ಇಂದು ನಿಮಗೆ ಸಂಪೂರ್ಣ ವಿವರವಾಗಿ ಹೇಳಿಕೊಡುತ್ತೇವೆ ಬನ್ನಿ. ಹೌದು ಸ್ನೇಹಿತರೆ ನಾಗರ ಹಾವಿನ ತಲೆಯಲ್ಲಿ ಇರುವ ಕಪ್ಪು ಮಣಿ ಇನ್ಯಾವುದೋ ಅಲ್ಲ ಮನುಷ್ಯರೇ ಕೃತಕವಾಗಿ ನಿರ್ಮಿಸಿರುವ ಕಪ್ಪು ಬಣ್ಣದ ಸ್ಪಟಿಕ ದಂತಿರುವ ಮಣಿಯನ್ನು ಅವರೇ ನಾಗರಹಾವಿನ ತಲೆಯ ಚರ್ಮವನ್ನು ಸ್ವಲ್ಪ ಮಟ್ಟಿಗೆ ಕು’ಯ್ದು ನಂತರ ಸ್ವಲ್ಪ ದಿನಗಳ ನಂತರ ಅದು ನಾಗರಹಾವಿನ ತಲೆಯಲ್ಲಿ ಸೇರಿಕೊಂಡ ಮೇಲೆ ಅದನ್ನು ಜನರೆದುರು ತಂದು ಚರ್ಮವನ್ನು ಸರಿಸಿ ಅಲ್ಲಿ ಮಣಿ ಇದೆ ಎಂದು ನಂಬಿಸಿ ಕೋಟ್ಯಾಂತರ ರೂಪಾಯಿಗೆ ಮಾರುತ್ತಾರೆ. ಹಣದಾಸೆಗಾಗಿ ಮೂಕಪ್ರಾಣಿಗಳ ನೆಮ್ಮದಿಯನ್ನು ಕೆಡಿಸುವ ಇಂತಹವರನ್ನು ಏನು ಮಾಡಬೇಕು ಸ್ನೇಹಿತರೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.