ಭಾರತ ಗೆದ್ದಿರುವ ಒಲಂಪಿಕ್ಸ್ ಪದಕಗಳಲ್ಲಿ ಬಹುತೇಕ ಈಶಾನ್ಯ ಭಾರತದವರೇ ಗೆಲ್ಲವುದರ ಹಿಂದಿನ ಕಾರಣವೇನು ಗೊತ್ತೆ??

ಭಾರತ ಗೆದ್ದಿರುವ ಒಲಂಪಿಕ್ಸ್ ಪದಕಗಳಲ್ಲಿ ಬಹುತೇಕ ಈಶಾನ್ಯ ಭಾರತದವರೇ ಗೆಲ್ಲವುದರ ಹಿಂದಿನ ಕಾರಣವೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ಭಾರತ ಪ್ರತಿ ಭಾರಿ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಾಗ ಪದಕ ಗೆಲ್ಲುವುದು ಕಡಿಮೆ. ಆದರೇ ಇದೇ ಮೊದಲ ಭಾರಿಗೆ ಏಳು ಪದಕಗಳನ್ನು ಗೆದ್ದಿದೆ. ಆದರೇ ಅದರಲ್ಲಿ ವಿಂಗಡಿಸಿದರೇ ಅದರಲ್ಲಿ ಈಶಾನ್ಯ ಭಾರತೀಯರೇ ಹೆಚ್ಚು. ಅಂದರೇ ಮೀರಾಬಾಯಿ ಚಾನು, ಬಾಕ್ಸರ್ ಲೊವೆಲಿನಾ ಹೀಗೆ ಈಶಾನ್ಯ ಭಾರತದ ಆಟಗಾರರ ಪ್ರತಿಶತಃ ಶೇಕಡಾ 38 ರಷ್ಟಿದೆ. ಈ ಹಿಂದೆ ಈಶಾನ್ಯ ಭಾರತದ ಮೇರಿ ಕೋಮ್, ಬೈಚುಂಗ್ ಭುಟಿಯಾ ಹೀಗೆ ಹಲವಾರು ಆಟಗಾರರು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಈಶಾನ್ಯ ಭಾರತೀಯ ಕ್ರೀಡಾಪಟುಗಳ ಯಶಸ್ಸಿನ ಹಿಂದಿನ ರಹಸ್ಯ ಹೊರಬಿದ್ದಿದೆ. ಬನ್ನಿ ಅದೆನೆಂದು ತಿಳಿಯೋಣ.

ಹವಾಮಾನ – ಸಂಪೂರ್ಣ ಭಾರತಕ್ಕೆ ಪರಿಗಣಿಸಿದರೇ ಈಶಾನ್ಯ ಭಾರತದ ಹವಾಮಾನ ಉತ್ತಮವಾಗಿರುತ್ತದೆ. ಇಲ್ಲಿ ಅತಿಯಾದ ಉಷ್ಣ ಅಥವಾ ಶೀತ ಇರುವುದಿಲ್ಲ. ಕ್ರೀಡಾಪಟುಗಳು ಉತ್ತಮ ತರಬೇತಿಯನ್ನು ಪಡೆಯಲು ಉಪಯುಕ್ತವಾಗಿರುವಂತಹ ಹವಾಮಾನವಿರುತ್ತದೆ. ಹಾಗಾಗಿ ಹವಾಮಾನ ಸಹ ಕ್ರೀಡಾಪಟುಗಳಿಗೆ ವರದಾನವಾಗಿದೆ.

ಆಹಾರ ಶೈಲಿ – ಈಶಾನ್ಯ ಭಾರತದಲ್ಲಿ ಬೆಳೆಯುವ ಆಹಾರ ಪದಾರ್ಥಗಳು ಸಂಪೂರ್ಣ ಸಾವಯುವವಾಗಿರುತ್ತವೆ‌. ಇಲ್ಲಿ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಆದಲ್ಲದೇ ಇಲ್ಲಿ ಚಿಕನ್ ಪದಾರ್ಥಗಳನ್ನು ತುಳಸಿ ಎಲೆಗಳಿಂದ ಬೇಯಿಸಲಾಗುತ್ತದೆ. ಈ ಪ್ರದೇಶದ ಮುಖ್ಯ ಆಹಾರವಾಗಿ ಚಿಕನ್, ಮಟನ್, ಗೋ ಮಾಂಸ ಹಾಗೂ ಹಂದಿ ಮಾಂಸವನ್ನ ಬಳಸುತ್ತಾರೆ. ಅತಿ ಹೆಚ್ಚು ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳನ್ನು ಬಳಸುವ ಕಾರಣ ಇಲ್ಲಿಯ ಕ್ರೀಡಾಪಟುಗಳು ದೈಹಿಕವಾಗಿ ಬಹಳಷ್ಟು ಸಮರ್ಥರಿರುತ್ತಾರೆ. ಅದಲ್ಲದೇ ಅಕ್ಕಿಯನ್ನು ಸಹ ಇಲ್ಲಿ ತರಕಾರಿ ಹಾಗೂ ಸೊಪ್ಪುಗಳಿಂದ ಬೇಯಿಸಲಾಗುತ್ತದೆ. ದಿನವೊಂದಕ್ಕೆ ಕ್ರೀಡಾಪಟುಗಳು 2500 ರಿಂದ 3000 ಕ್ಯಾಲೋರಿಯಷ್ಟು ಆಹಾರವನ್ನು ಸೇವಿಸಬೇಕಾಗುತ್ತದೆ. ಅಷ್ಟು ಪ್ರಮಾಣದ ಕ್ಯಾಲೋರಿ ಈಶಾನ್ಯ ಭಾರತದ ಆಹಾರ ಕ್ರಮದಲ್ಲಿರುವ ಕಾರಣ ಈಶಾನ್ಯ ಭಾರತದ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ.

ಸ್ಪರ್ಧಾತ್ಮಕತೆ – ಹೇಳಿ ಕೇಳಿ ಗುಡ್ಡಗಾಡು ಪ್ರದೇಶ. ಪ್ರಕೃತಿಯೊಂದಿಗೆ ಸದಾ ಹೊರಾಡುತ್ತಲೇ ಬದುಕು ಕಟ್ಟಿಕೊಂಡ ಜನ. ಇವರು ಅಷ್ಟು ಬೇಗ ಸೋಲೊಪ್ಪಿಕೊಳ್ಳುವುದಿಲ್ಲ. ಕೊನೆಯ ಕ್ಷಣದವರೆಗೂ ಪ್ರಯತ್ನಿಸುತ್ತಾರೆ. ಹಾಗಾಗಿ ಇವರಿಗೆ ಕ್ರೀಡೆಯಲ್ಲಿ ಯಶಸ್ಸು ಜಾಸ್ತಿ.

ಪ್ರಾತಿನಿಧ್ಯ – ಈ ಭಾಗದ ಜನರು ದೇಶ ಹಾಗೂ ರಾಜ್ಯಗಳನ್ನು ಪ್ರತಿನಿಧಿಸಲು ಇತರ ಭಾಗದ ಜನರಿಗಿಂತ ಹೆಚ್ಚು ಉತ್ಸುಕರಾಗಿರುತ್ತಾರೆ. ಇನ್ನು ಗುಡ್ಡಗಾಡು ಪ್ರದೇಶವಾಗಿರುವ ಕಾರಣ ಬಾಲ್ಯದಿಂದಲೇ ಶಾಲೆ ಇನ್ನಿತರ ಅಗತ್ಯತೆಗಳಿಗಾಗಿ ಇಪ್ಪತ್ತು ಕಿಲೋ ಮೀಟರ್ ನಡೆಯುತ್ತಿರುತ್ತಾರೆ. ಇದು ಸಹಜವಾಗಿಯೇ ಅವರಿಗೆ ಕ್ರೀಡಾಪಟುಗೆ ಬೇಕಾದ ದೇಹ ಸಾಮರ್ಥ್ಯವನ್ನು ಒದಗಿಸಿರುತ್ತದೆ. ಎಲ್ಲಕ್ಕಿಂತ ಮುಖ್ಯ ಇವರು ಪ್ರಕೃತಿಯೊಂದಿಗೆ ಬೆರೆತು ಜೀವನ ನಡೆಸುತ್ತಿರುತ್ತಾರೆ. ಅದುವೇ ಇವರ ಯಶಸ್ಸಿನ ಹಿಂದಿನ ಕೀಲಿ ಕೈ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ತಿಳಿಸಿ.