ನೂರಾರು ಪುರುಷ ಅಧಿಕಾರಿಗಳು ಹಿಡಿಯಲು ಸಾದ್ಯವಾಗದವನನು ಈ ಲೇಡಿ ಪೊಲೀಸ್ ಏನೆಲ್ಲ ರಿಸ್ಕ್ ತೆಗೆದು ಹಿಡಿದು ಕಂಬಿ ಎನಿಸುವಂತೆ ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ತಾವು ಹಲವು ತಪ್ಪುಗಳನ್ನ ಮಾಡಿಯೂ ಯಾರಿಗೂ ಸಿಗದೆ ಪೋಲೀಸರ ಕೈಯಿಂದಲೂ ತಪ್ಪಿಸಿಕೊಂಡು ಮತ್ತಷ್ಟು ಅನಗತ್ಯ ಕೆಲಸಗಳನ್ನು ಮಾಡುವ ಸಾಕಷ್ಟು ಪುಂಡರ ಬಗ್ಗೆ ನಾವು ಕೆಳಿರುತ್ತೇವೆ. ಇಲ್ಲಿ ನಾವೀಗ ಹೇಳ ಹೊರಟಿರುವ ವಿಷ್ಯ ಒಬ್ಬ ಮಹಾನ್ ಮೋಸದ ವ್ಯಕ್ತಿಯ ಬಗ್ಗೆ. ಈತ ಲೂಟಿ, ಪ್ರಾಣ ತೆಗೆಯುವುದು, ಕಳ್ಳತನ ಇನ್ನೂ ಅನೇಕ ತಪ್ಪುಗಳನ್ನು ಮಾಡಿಯೂ ಮೂರು ರಾಜ್ಯಗಳ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವ್ಯಕ್ತಿ. ಯಾರವನು ? ಬನ್ನಿ ಹೇಳ್ತಿವಿ.

ಸ್ನೇಹಿತರೆ ಇದು ಒಬ್ಬ ಕೆಟ್ಟ ಮನುಷ್ಯನ ಬಗ್ಗೆ ಇರುವ ಒಂದು ರೋಚಕ ಕಥೆ. ಈ ವ್ಯಕ್ತಿ ಮೂರು ರಾಜ್ಯದ ಪೋಲೀಸ್ ಗೆ ಬೇಕಾಗಿದ್ದವನು. ಈ ವರೆಗೆ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡಿದ್ದ ಈ ವ್ಯಕ್ತಿಯನ್ನು ಹಿಡಿಯಲು ಎಂಥ ಗಟಾನುಗಟಿ ಅಧಿಕಾರಿಗಳು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇನ್ನು ಕೆಲವು ಪೋಲೀಸರಿ ಪ್ರಯತ್ನಿಸಿಯೂ ಫಲ ಸಿಗದೆ ಈತನ ಫೈಲ್ ಕ್ಲೋಸ್ ಮಾಡಿ ಬಿಟ್ಟಿದ್ದರು. ಹಾಗಾಗಿ ಈ ವ್ಯಕ್ತಿ ಆರಾಮಾಗಿ ಮತ್ತೆ ಮತ್ತೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಇದ್ದ. ಆದರೆ ಈತನ ಪಾಪದ ಕೊಡ ನಿಜಕ್ಕೂ ತುಂಬಿತು. ಕೊನೆಗೂ ಒಂದು ದಿನ ಸಿಕ್ಕಿ ಬಿದ್ದ, ಅದೂ ಒಬ್ಬ ಮಹಿಳಾ ಪೋಲಿಸ್ ಅಧಿಕಾರಿ ಕೈಗೆ.

ಗಾರೋಲಿಯಾ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೋಲೀಸ್ ಅಧಿಕಾರಿ ಮಾಧವಿ ಅಗ್ನಿಹೋತ್ರಿ. ಈಕೆಯನ್ನು ಸಿಂಹಿಣಿ, ಲೇಡಿ ಟೈಗರ್ ಎಂದೇ ಕರೆಯಲಾಗುತ್ತಿತ್ತು. ಯಾಕೆಂದರೆ ಅವರು ಮಾಡಿರುವ ಕೆಲಸಗಳು ಅಷ್ಟು ದೈರ್ಯವಂತ ಕೆಲಸ. ಯಾವ ಅಧಿಕಾರಿಯಿಂದಲೂ ಬಗೆಹರಿಸಲಾಗದ ಕೆಲವು ಸಮಸ್ಯೆಗಳನ್ನು ಆಕೆ ಬಗೆ ಹರಿಸಿದ್ದಳು. ಇದೀಗ ಈ ವ್ಯಕ್ತಿಯ ಫೈಲ್ ಮಾಧವಿಯವರ ಕೈ ಸೇರಿತ್ತು. ಮಾಧವಿ ಹುಡುತ್ತಿದ್ದ ವ್ಯಕ್ತಿಯ ಹೆಸರು ಬಾಲಕೃಷ್ಣ ಚೌಬೆ. ಈತಗಿಗೆ 55 ವರ್ಷ ವಯಸ್ಸು. ಸಾಕಷ್ಟು ಕೇಸುಗಳಲ್ಲಿ ಈತನ ಹೆಸರು ಕೇಳಿಬಂದಿತ್ತು ಆದರೂ ಕೂಡ ಈತ ಪೋಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಮಾಧವಿ ಅಗ್ನಿಹೋತ್ರಿ ಇವನ ಬಗ್ಗೆ ಸರಿಯಾಗಿ ಅಧ್ಯಯನ ಮಾಡಲು ಶುರು ಮಾಡುತ್ತಾರೆ.

ಬಾಲಕೃಷ್ಣ ನ ವೀಕ್ನೆಸ್ ನ್ನು ಮೊದಲು ಕಂಡು ಹಿಡಿಯುತ್ತಾರೆ ಮಾಧವಿ. ಬಾಲಕೃಷ್ಣ ನಿಗೆ ಹೆಂಗಸರ ಸಂಗ ಅಪಾರ. ಆದ ತನ್ನ ದೈಹಿಕ ವಾಂಛೆ ತೀರಿಸ್ಕೊಳ್ಳಲು ಲೋಧಿ ಎಂಬ ಹೆಂಗಸಿನ ಸಹವಾಸ ಮಾಡಿದ್ದ. ಇದನ್ನು ಗೊತ್ತು ಪಡಿಸಿಕೊಂಡ ಪೋಲೀಸ್ ಅಧಿಕಾರಿ ಮಾಧವಿಯವರು ಲೋಧಿಯ ಮೂಲಕವೇ ಬಾಲಕೃಷ್ಣನನು ಹಿಡಿಯಲು ಪ್ರಯತ್ನಿಸಿದರು. ಹೇಗೇ ಮುಂದೆ ಓದಿ.

ಬಾಲಕೃಷ್ಣ ಲೋಧಿಯ ಬಳಿ ಬರುವುದು ಮಾಧವಿಯವರಿಗೆ ಗೊತ್ತಾಗಿತ್ತು. ಅದಕ್ಕಾಗಿ ತಾನು ರಾಧಾ ಎಂಬ ಹೆಸರಿನಲ್ಲಿ ಫೋಟೊಗಳನ್ನು ತೆಗೆಸಿಕೊಂಡು ಲೋಧಿಗೆ ಕಳುಹಿಸುತ್ತಾಳೆ. ಲೋಧಿಯ ಮೂಲಕ ಈ ಫೋಟೊಗಳು ಬಾಲಕೃಷ್ಣನ ಕೈ ಸೇರುತ್ತವೆ. ನಂತರ ಮಾಧವಿಗೆ ಬೇರೆಯದೇ ಹೆಸರಿನಲ್ಲಿ ಖಾಸಗಿ ನಂ. ನಿಂದ ಪೋನಾಯಿಸುತ್ತಾನೆ ಬಾಲಕೃಷ್ಣ. ಮಾಧವಿ ಯವರ ಬಳಿ ಕೆಟ್ಟದಾಗಿ, ಸಂಸ್ಕಾರರಹಿತನಾಗಿ ಮಾತನಾಡುತ್ತಾನೆ. ಆದರೆ ಇದಕ್ಕೆಲ್ಲ ಅ’ನುಮಾನ ಬರದ ರೀತಿಯಲ್ಲಿ ಉತ್ತರಿಸುತ್ತಾರೆ ಮಾಧವಿ. ಹೀಗೆ ಮಾತು ಕತೆಗಳು ಮುಂದುವರೆದು ಒಂದು ದಿನ ಬಾಲಕೃಷ್ಣ ಮಾಧವಿಯನ್ನು ಸಂಪೂರ್ಣವಾಗಿ ನಂಬಿ ತನ್ನ ನಿಜವಾದ ಹೆಸರನ್ನು ಹೇಳುತ್ತಾನೆ. ಇದರಿಂದ ಮಾಧವಿಯವರ ಕೆಲಸ ಸುಲಭವಾಗುತ್ತದೆ.

ನಂತರ ಮಾಧವಿಯವರು ಬಾಲಕೃಷ್ಣನ ಬಳಿ ತಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎನ್ನುತ್ತಾರೆ. ಮೊದಲೇ ಚಪಲಚೆನ್ನಿಗರಾಯ ಈ ಬಾಲಕೃಷ್ಣ. ಮದುವೆಯಾಗಿ ಮಕ್ಕಳಿದ್ದರೂ ಕೂಡ ಮಾಧವಿ ಮಾತಿಗೆ ಒಪ್ಪಿ ತಾವೇ ಮದುವೆ ಸ್ಥಳವನ್ನು ಗೊತ್ತು ಮಾಡಿ ಅಲ್ಲಿಗೆ ಬರಲು ಹೇಳುತ್ತಾನೆ. ಮದುವೆಗೆ ರೆಡಿಯಾಗಿ ಬಂದ ಬಾಲಕೃಷ್ಣನನ್ನು ಹಿಡಿಯಲು ಮಾಧವಿ ಮೊದಲೇ ಪೋಲೀಸರನ್ನು ಆ ಸ್ಥಳಕ್ಕೆ ಮಾರುವೇಷದಲ್ಲಿ ಬರಲು ತಿಳಿಸುತ್ತಾರೆ. ಅಲ್ಲಿಗೆ ಬಂದ ಬಾಲಕೃಷ್ಣನನ್ನು ಮದುವೆ ಉಡುಪಿನಲ್ಲಿಯೇ ಇದ್ದ ಮಾಧವಿ ನೇರವಾಗಿ ಹಿಡಿಯುತ್ತಾರೆ. ಮಾಧವಿಯವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಇಷ್ಟು ವರ್ಷ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಬಾಲಕೃಷ್ಣ ಸಿಕ್ಕಿ ಬೀಳುತ್ತಾನೆ.

ಇನ್ನು ಯಾವ ಪುರುಷ ಪೋಲೀಸ್ ಅಧಿಕಾರಿಯೂ ಮಾಡಲಾಗದ ಸಾಹಸವನ್ನು ತಮ್ಮನ್ನು ತಾವು ಒತ್ತೆ ಇಟ್ಟು ಮಾಡಿದ ಪೋಲೀಸ್ ಅಧಿಕಾರಿ ಮಾಧವಿ ಅಗ್ನಿಹೋತ್ರಿಯವರಿಗೆ ಸಾಕಷ್ಟು ಪುರಸ್ಕಾರಗಳನ್ನು ಕೂಡ ನೀಡಲಾಗುತ್ತದೆ. ಅವರಿರುವ ಭಾಗದಲ್ಲಿ ಜನರು ನಿಶ್ಚಿಂತೆಯಿಂದ ಬದುಕುವಂತಾದರೆ ತಪ್ಪುಮಾಡುವವರು ಮಾಧವಿ ಹೆಸರು ಕೇಳಿದರೇ ಸಾಕು ಹಿಂ’ದೇಟು ಹಾಕುತ್ತಾರೆ. ಇಂಥ ಖಡಕ್ ಪೋಲೀಸ್ ಅಧಿಕಾರಿ ಪ್ರತಿ ರಾಜ್ಯದಲ್ಲಿಯೂ ಇರಬೇಕು ಅಲ್ಲವೇ???

Post Author: Ravi Yadav