ಬರೋಬ್ಬರಿ 20 ಲಕ್ಷ ಹಣ, ಕೆಜಿ ಕೆಜಿ ಚಿನ್ನ, ಕಾರ್ ಕೊಟ್ಟು ಮದುವೆ ಮಾಡಿದರೂ ಆದ್ರೆ ಮೂರೇ ತಿಂಗಳಲ್ಲಿ ನಡೆದ್ದದೇನು ಗೊತ್ತೇ??

ಬರೋಬ್ಬರಿ 20 ಲಕ್ಷ ಹಣ, ಕೆಜಿ ಕೆಜಿ ಚಿನ್ನ, ಕಾರ್ ಕೊಟ್ಟು ಮದುವೆ ಮಾಡಿದರೂ ಆದ್ರೆ ಮೂರೇ ತಿಂಗಳಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಕೇರಳದಲ್ಲಿ ವಿಸ್ಮಯ ರವರ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಈ ಪ್ರಕರಣ ಆರುವ ಮುಂಚೆಯೇ ಇನ್ನೊಂದು ಪ್ರಕರಣ ಅದೇ ದೇವರ ನಾಡಾಗಿರುವ ಕೇರಳದಲ್ಲಿ ನಡೆದಿದ್ದು ಎಲ್ಲರನ್ನೂ ತಲ್ಲಣಗೊಳಿಸಿದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡುವುದು ದೊಡ್ಡ ಕೆಲಸವಾದರೆ ಅದಕ್ಕಿಂತ ದೊಡ್ಡದಾದ ಕೆಲಸವೆಂದರೆ ನಿಭಾಯಿಸಿಕೊಂಡು ಹೋಗುವುದು.

ಆದರೆ ವಧುವಿಗೆ ತಕ್ಕನಾದ ವರನನ್ನು ಹುಡುಕುವುದು ಕೂಡ ಅಷ್ಟೇ ಕಷ್ಟವಾದ ಕೆಲಸವಾಗಿರುತ್ತದೆ ಯಾಕೆಂದರೆ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದು ಈ ಕಾಲದಲ್ಲಿ ಪರಿಶೀಲಿಸುವುದ ಕಷ್ಟವಾಗಿಬಿಟ್ಟಿದೆ. ಹೌದು ಸ್ನೇಹಿತರು ನಾವು ಮಾತನಾಡಲು ಹೊರಟಿರುವುದು ಸುಚಿತ್ರ ಎಂಬ ಹೆಣ್ಣು ಮಗಳ ಕುರಿತಂತೆ. ಒಂದು ಸುಚಿತ್ರ ರವರ ತಾಯಿ ವಿಸ್ಮಯ ರವರ ಪ್ರಕರಣದ ಕುರಿತಂತೆ ಟಿವಿಯಲ್ಲಿ ಅವರ ಸುದ್ದಿಯನ್ನು ನೋಡುತ್ತಿದ್ದ ಸಂದರ್ಭದಲ್ಲಿ,

ಏನೋ ನೆನಪಾಗಿ ವಿಸ್ಮಯ ರವರ ಘಟನೆ ನೆನೆದು ನಮ್ಮ ಮಗಳಾದ ಸುಚಿತ್ರ ರವರಿಗೆ ರಾತ್ರಿ ಕರೆ ಮಾಡುತ್ತಾರೆ. ಮಗಳೊಂದಿಗೆ ಫೋನಿನಲ್ಲಿ ಮಾತನಾಡಿ ನಿದ್ದೆಹೋಗುವ ತಾಯಿ ಬೆಳಗ್ಗೆ ಸುದ್ದಿ ಕೇಳಿ ಹೌಹಾರುತ್ತಾರೆ. ಹೌದು ಸ್ನೇಹಿತರ ಅದಕ್ಕೆ ಕಾರಣ ರಾತ್ರಿಯಷ್ಟೇ ಚೆನ್ನಾಗಿದ್ದ ಮಗಳು ಇಹಲೋಕವನ್ನು ತ್ಯಜಿಸಿದ್ದಳು. ಸ್ನೇಹಿತರೆ ಈ ಕಹಾನಿಯನ್ನು ನಾವು ಮೊದಲಿನಿಂದ ಸವಿಸ್ತಾರವಾಗಿ ಹೇಳುತ್ತೇವೆ ಬನ್ನಿ. ಚಿತ್ರ ಸುಚಿತ್ರ ರವರಿಗೆ ಜಾತಕದಲ್ಲಿ ದೋಷ ಇದ್ದ ಕಾರಣ ಪಂಡಿತರು 19 ವರ್ಷದ ಒಳಗೆ ಮದುವೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮದುವೆಯ ಭಾಗ್ಯ ಇಲ್ಲ ಎಂಬುದಾಗಿ ಹೇಳಿದ್ದಾರೆ.

ಇದಕ್ಕಾಗಿ ಸುಚಿತ್ರ ರವರ ಪೋಷಕರು ಗಂಡಿನ ಹುಡುಕಾಟದಲ್ಲಿ ತೊಡಗಿದ್ದಾಗ ವಿಷ್ಣು ಎಂಬ ಹುಡುಗನ ಬಗ್ಗೆ ತಿಳಿಯುತ್ತದೆ. ವಿಷ್ಣು ಆರ್ಮಿ ಯಲ್ಲಿದ್ದು ಅವರ ಮನೆಯವರು ಸಾಕಷ್ಟು ಸ್ಥಿತಿವಂತರು ಎಂಬುದು ತಿಳಿಯುತ್ತದೆ. ಹೀಗಾಗಿ ಇಬ್ಬರ ಮದುವೆ ಮಾತುಕತೆಯನ್ನು ನಡೆಸಿ ಜಾತಕವೂ ಕೂಡ ಹೊಂದುವಂತೆ ಮಾತನಾಡಿ ಮದುವೆಗೆ ಬಂದು ತಲುಪುತ್ತಾರೆ. ಇನ್ನು ಗಂಡಿನ ಮನೆಯವರು ಒಂದು ಕಾರು ಹಾಗೂ ಲಕ್ಷಾಂತರ ರೂಪಾಯಿಗಳ ಚಿನ್ನದ ಬೇಡಿಕೆಯನ್ನು ಇಡುತ್ತಾರೆ. ಇದಕ್ಕೆ ಒಪ್ಪಿ ಸುಚಿತ್ರಾರವರ ಮನೆಯವರು ಹೇಗೋ ಹೊಂದಿಸಿ ನೀಡುತ್ತಾರೆ ಮದುವೆ ಕೂಡ ನಡೆಯುತ್ತದೆ.

ಮದುವೆಯಾದ ಕೆಲವೇ ದಿನಗಳಲ್ಲಿ ವಿಷ್ಣು ಉತ್ತರಾಖಂಡ್ ಗೆ ತೆರಳುತ್ತಾನೆ. ಇದಾದ ಮಾರನೆಯ ದಿನದಿಂದಲೇ ವಿಷ್ಣುವಿನ ತಾಯಿ ಸುಚಿತ್ರಾಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ. ಕೊಡಬೇಕಾಗಿದ್ದ 10 ಲಕ್ಷ ರೂಪಾಯಿಯನ್ನು ಕೊಡುವುದೆಂದು ದಿನೇದಿನೇ ಕೇಳಲು ಪ್ರಾರಂಭಿಸುತ್ತಾರೆ. ಮಾತ್ರವಲ್ಲದೆ ಸುಚಿತ್ರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಟ್ಟಿದ್ದ ಒಡವೆಗಳ ಲಾಕರ್ ನ ಕೀಯನ್ನು ಕೂಡ ಅತ್ತೆ ತನ್ನ ಬಳಿ ತೆಗೆದುಕೊಳ್ಳುತ್ತಾರೆ.

ಇದನ್ನು ಸುಚಿತ್ರಾ ಅವರು ತಮ್ಮ ತಾಯಿಯಾದ ಸುನೀತಾ ರವರಿಗೆ ಕರೆಮಾಡಿ ತಿಳಿಸುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ವಿಸ್ಮಯ ರವರ ಪ್ರಕರಣ ಕುರಿತಂತೆ ತಿಳಿಯುವ ಸುನೀತಾ ರವರು ಇಂದು ರಾತ್ರಿ ಮಗಳಿಗೆ ಕರೆ ಮಾಡಿರುತ್ತಾರೆ. ಆದರೆ ಬೆಳಗ್ಗೆ ಅಷ್ಟರಲ್ಲಿ ಮಗಳು ಬಾರದ ಲೋಕಕ್ಕೆ ಪ್ರಯಾಣ ಬೆಳೆಸುತ್ತಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ತಾವೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಂದರು ಕೂಡ ಅದಕ್ಕೆ ಕಾರಣ ವಿಷ್ಣುವಿನ ತಂದೆ-ತಾಯಿಯೇ ಎಂದು ಸ್ಪಷ್ಟವಾಗಿ ಎಲ್ಲರಿಗೂ ತಿಳಿದಿರುತ್ತದೆ.