ರಾತ್ರಿ ರೌಂಡ್ಸ್ ವೇಳೆ ಚಳಿಯಲ್ಲಿದ್ದ ಭಿಕ್ಷುಕನನ್ನು ಜೀಪ್ ಹತ್ತಿಸಿದಾಗ ಆತ ಯಾರೆಂದು ತಿಳಿದು ಕಣ್ಣೀರು ಹಾಕಿದ ಪೊಲೀಸ್ ಅಧಿಕಾರಿಗಳು, ಆತ ಯಾರಾಗಿದ್ದ ಗೊತ್ತಾ??

ನಮಸ್ಕಾರ ಸ್ನೇಹಿತರೇ ಯಾರಿಗೆ ಯಾವ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಬಂದು ಒದಗತ್ತೆ ಅಂತ ಹೇಳೋಕಾಗಲ್ಲ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಹೇಳ್ತಿವಿ ಕೇಳಿ. ನವೆಂಬರ್ 10, 2020 ಸ್ಥಳ ಮಧ್ಯಪ್ರದೇಶದ ಗ್ವಾಲಿಯರ್ ನಗರ. ಇಲ್ಲಿ ಆ ದಿನ ನಡೆದಿದ್ದು ಒಂದು ವಿಚಿತ್ರ ಘಟನೆ. ಆಗಷ್ಟೇ ವಿಧಾನ ಸಭಾ ಚುನಾವಣೆ ಮುಗಿದು, ಕೌಂಟಿಂಗ್ ಶುರುವಾಗಿತ್ತು. ಈ ಸಂದರ್ಭದಲ್ಲಿ ಯಾಉದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಗ್ವಾಲಿಯರ್ ನಗರದ ಪೂರ್ತಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಡಿವೈಎಸ್ ಪಿಗಳಾದ ರತ್ನೇಶ್ ಸಿಂಗ್ ಹಾಗೂ ಅರ್ಜುನ್ ಬಧೋರಿಯಾ ಎಂಬ ಇಬ್ಬರು ಅಧಿಕಾರಿಗಳು. ಈ ಅಧಿಕಾರಿಗಳು ಮಧ್ಯರಾತ್ರಿ ತಮ್ಮ ಕೆಲಸ ಮುಗಿಸಿ ಹೊರಡುವಾಗ ಅಚಾನಕ್ ಆಗಿ ಒಂದು ಘಟನೆ ನಡೆಯುತ್ತೆ.

ಪೋಲಿಸ್ ಅಧಿಕಾರಿಗಳು ತಮ್ಮ ಸರ್ಕಾರಿ ವಾಹನದಲ್ಲಿ ಹೋಗುತ್ತಿದ್ದಾಗ ಅವರಿಗೆ ರಸ್ತೆ ಬದಿಯಲ್ಲಿ ಒಬ್ಬ ಭಿಕ್ಷುಕ ಕಾಣಿಸುತ್ತಾನೆ. ಆ ಭಿಕ್ಷುಕ ಅಷ್ಟಾಗಿ ಬಟ್ಟೆಯನ್ನೂ ಧರಿಸದೇ ಚಳಿಯಲ್ಲಿ ನಡುಗುತ್ತಿದ್ದ. ಇದನ್ನು ನೋಡಿದ ಅಧಿಕಾರಿಗಳು ಮಮ್ಮಲ ಮರುಗುತ್ತಾರೆ. ತಾವು ತಮ್ಮ ಜೀಪ್ ನಿಂದ ಇಳಿದು ಭಿಕ್ಷುಕನ ಹತ್ತಿರ ಹೋಗುತ್ತಾರೆ. ಆ ಭಿಕ್ಷುಕನಿಗೆ ತಮ್ಮ ಪೋಲಿಸ್ ಕೋಟ್ ನ್ನು ಕೊಟ್ಟು ತಮ್ಮ ಜೀಪ್ನಲ್ಲಿಯೇ ಕುರಿಸುತ್ತಾರೆ. ಆ ವರೆಗೆ ಸುಮ್ಮನೆ ಇದ್ದ ಭಿಕ್ಷುಕ ಒಮ್ಮೆಲೆ ಪ್ರಜ್ಞೆ ತಪ್ಪಿದವನಿಗೆ ಪ್ರಜ್ಞೆ ಬಂದಂತೆ ಎದ್ದು ಕೂರುತ್ತಾನೆ ಹಾಗೂ ಆ ಅಧಿಕಾರುಗಳ ಹೆಸರನ್ನು ಥೋಮರ್ ಮತ್ತು ಭದೋರಿಯಾ ಎಂದು ಕರೆಯುತ್ತಾನೆ. ಇದರಿಂದ ಆಶ್ಚರ್ಯಗೊಂಡ ಪೋಲಿಸ್ ಅಧಿಕಾರಿಗಳು, ತಮ್ಮ ಹೆಸರನ್ನು ಕರೆಯುವ ಈ ಭಿಕ್ಷುಕ ಯಾರು ಎಂದು ದಂಗಾಗುತ್ತಾರೆ.

ನಂತರ ಸ್ಪಲ್ಪ ಮುಖಕ್ಕೆ ಬೆಳಕು ಬಿಟ್ಟು ನೋಡಿದರೆ, ಆತನನ್ನು ಏಲ್ಲೋ ನೋಡಿದ ನೆನಪಾಗುತ್ತದೆ. ನಂತರ ಸರಿಯಾಗಿ ಗುರುತು ಹಿಡಿದಾಗ ಅವರಿಗೆ ಕಾದಿತ್ತು ಶಾಖ್. ಆತ ಮತ್ಯಾರೂ ಅಲ್ಲ, 1999ರ ಬ್ಯಾಚ್ ನಲ್ಲಿ ಇದೇ ರತ್ನೇಶ್ ಹಾಗೂ ಅರ್ಜುನ್ ಅವರ ಜೊತೆಗೆ ಇದ್ದ ಚಾಲಾಕಿ ಪೋಲಿಸ್ ಅಧಿಕಾರಿ ಮನೀಶ್ ಮಿಶ್ರಾ. ಆ ಬ್ಯಾಚ್ ನಲ್ಲಿ ಮನೀಶ್ ಅವರಷ್ಟು ಉತ್ತಮವಾಗಿ, ಪರ್ಫೆಕ್ಟ್ ಆಗಿ ಪಿ ಸ್ತುಲ ಚಲಾಯಿಸಲು ಬೇರೆ ಯಾರಿಗೂ ಸಾಧ್ಯವೇ ಇರಲಿಲ್ಲ. ಮನೀಶ್ 1999 ರಿಂದ 2005ರ ವರೆಗೂ ಪೋಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಅದೇನಾಯ್ತೋ ಗೊತ್ತಿಲ್ಲ ನಿಧಾನವಾಗಿ ತಮ್ಮ ಮಾನಸಿಕ ಸ್ಪಾಸ್ಥ್ಯವನ್ನು ಕಳೆದುಕೊಳ್ಳುತ್ತಾ ಹೋದರು. ಅವರ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದರು. ಇದರ ಜೊತೆಗೆ ಕೆಲಸದ ಟೆನ್ಶನ್ ಸೇರಿ ಮನೀಶ್ ನೆಮ್ಮದಿಯನ್ನು ಕಳೆದುಕೊಂಡು ಕೆಲಸವನ್ನು ಬಿಟ್ಟರು.

ಅಂದಹಾಗೆ ಮನೀಶ್ ಮಿಶ್ರಾ ಅವರು ಅಂತಿಂಥ ಕುಟುಂಬದಿಂದ ಬಂದವರಲ್ಲ, ಅವರ ತಂದೆ ಸಹೋದರ, ಸಹೋದರಿ ಎಲ್ಲರೂ ಕೂಡ ಪೋಲೀಸ್ ಸೇವೆ ಸಲ್ಲಿಸಿದವರೆ. ಮನೀಶ್ ಅವರನ್ನು ಮತ್ತೆ ಮೊದಲಿನಂತಾಗಿಸಲು ಮನೆಯವರೂ ಕೂಡ ಪ್ರಯತ್ನಪಟ್ಟರು. ಅವರಿಗೆ ಚಿಕಿತ್ಸೆಯನ್ನೂ ಕೂಡ ಕೊಡಿಸಿದರು. ಆದರೆ ಇದ್ಯಾವುದೂ ಪರಿಣಾಮ ಬೀರಲಿಲ್ಲ. ಯಾವ ಚಿಕಿತ್ಸೆಯನ್ನೂ ಪೂರ್ತಿಯಾಗಿ ತೆಗೆದುಕೊಳ್ಳದೇ ಪಲಾಯನವಾಗುತ್ತಿದ್ದರು ಮನೀಶ್. ಇದರಿಂದ ತಂದೆ ತಾಯಿ ಮಾತ್ರವಲ್ಲದೆ ಅವರ ಹೆಂಡತಿ ಕೂಡ ಅವರಿಂದ ದೂರವಾದರು.

ಇದಾದ ಬಳಿಕ ಮನೀಶ್ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಇದೀಗ ಮತ್ತೆ ತಮ್ಮ ಸ್ನೇಹಿತರ ಕೈಗೆ ಸಿಕ್ಕರು ಮನೀಶ್. ಮನೀಶ್ ಅವರನ್ನು ಕರೆದುಕೊಂಡು ಹೋಗಿ ಅವರನ್ನು ಶುದ್ಧವಾದ ಬತ್ಟೆ ತೊಡುವಂತೆ ಮಾಡಿ ಒಬ್ಬ ಮಾಮೂಲಿ ವ್ಯಕ್ತಿಯಂತೆ ಮಾಡಿದರು. ಆದರೆ ಅವರ ಮಾನಸಿಕ ಸ್ವಾಸ್ಥ್ಯವನ್ನು ಮರುಕಳಿಸಲು ಅವರ ದೂರದ ಸಹೋದರನೊಬ್ಬ ಅವರ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ನಮ್ಮ ಬ್ಯಾಚ್ ನಲ್ಲಿದ್ದ ಒಬ್ಬನೇ ಒಬ್ಬ ದಕ್ಷ ಅಧಿಕಾರಿ ಎಂದರೆ ಅದು ಮನೀಶ್ ಮಿಶ್ರಾ ಅವನು ಯಾಕೆ ಹೀಗಾದ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರತ್ನೇಶ್. ಇನ್ನು ಎನ್ ಡಿ ಟಿವಿ ರಿಪೋರ್ಟರ್ ಅನುರಾಗ್ ದ್ವಾರಿ ಇವರ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಆದಷ್ಟು ಬೇಗ ಪೋಲಿಸ್ ಅಧಿಕಾರಿಯಾಗಿದ್ದ ಮನೀಶ್ ಮಿಶ್ರಾ ಮೊದಲಿನಂತಾಗಲಿ ಎನ್ನುವುದೇ ಅವರ ಸ್ನೇಹಿತರಾದ ರತ್ನೇಶ್ ಹಾಗೂ ಅರ್ಜುನ್ ಅವರ ಆಶಯ.

Post Author: Ravi Yadav