ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದ್ರಾವಿಡ್ ಆಗಲ್ಲ, ರವಿ ಶಾಸ್ತ್ರೀ ಬೇಡ ಎಂದ ಮೇಲೆ ಟೀಮ್ ಇಂಡಿಯಾದ ಕೋಚ್ ಸ್ಥಾನಕ್ಕೆ ಅಚ್ಚರಿಯ ಹೆಸರು, ಯಾರಂತೆ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಟೀಂ ಇಂಡಿಯಾ ಸದ್ಯ ವಿಶ್ವ ಕ್ರಿಕೇಟ್ ನ ದೊರೆ ಎನ್ನಬಹುದು. ಸಾಮಾನ್ಯವಾಗಿ ಕ್ರಿಕೇಟ್ ತಂಡಗಳು ತಮ್ಮ ತಾಯ್ನಾಡಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುತ್ತವೆ. ಆದರೇ ವಿದೇಶಿ ನೆಲಗಳಲ್ಲಿ ಮಾತ್ರ ನೀರಿಕ್ಷೆಗೆ ತಕ್ಕಂತ ಪ್ರದರ್ಶನಗಳು ಬರುವುದಿಲ್ಲ. ಕೆಲವು ವರ್ಷಗಳ ಹಿಂದೆ ಭಾರತ ತಂಡದ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಇತ್ತು. ಆದರೇ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನೇ ಮಣಿಸಿದ ನಂತರ ಈಗ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುತ್ತಲಿದೆ.

ಕಳೆದ ತಿಂಗಳು ಅನನುಭವಿ ಆಟಗಾರರ ತಂಡ ಶ್ರೀಲಂಕಾ ನೆಲದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತ್ತು. ಆಗ ಕೇಳಿಬಂದ ಸುದ್ದಿಯೆಂದರೇ, ಕನ್ನಡಿಗ ರಾಹುಲ್ ದ್ರಾವಿಡ್, ಭಾರತ ತಂಡದ ಮುಂದಿನ ಕೋಚ್ ಆಗಬೇಕು ಎಂಬುದು. ಸದ್ಯ ಕೋಚ್ ಆಗಿರುವ ರವಿಶಾಸ್ತ್ರಿಯವರ ಅವಧಿ ಇದೇ ಅಕ್ಟೋಬರ್ ಗೆ ಮುಗಿಯಲಿದೆ. ಆ ನಂತರ ಭಾರತ ತಂಡದ ಕೋಚ್ ಹುದ್ದೆಯನ್ನು ರಾಹುಲ್ ದ್ರಾವಿಡ್ ನಿರ್ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಆದರೇ ಎನ್.ಸಿ.ಎ ಮುಖ್ಯಸ್ಥ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ದ್ರಾವಿಡ್ ತಾವು ಕೋಚ್ ಹುದ್ದೆಯಿಂದ ಹಿಂದೆ ಸರಿಯುತ್ತಿರುವವರಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಹಾಗಾಗಿ ಈಗ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅಚ್ಚರಿಯ ಹೆಸರೊಂದು ಕೇಳಿ ಬರುತ್ತಿದೆ.

ಹೌದು ಅವರು ಬೇರಾರೂ ಅಲ್ಲ, ಹಾಲಿ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್. ಬ್ಯಾಟಿಂಗ್ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ವಿಕ್ರಮ್ ಸದ್ಯ ಮುಖ್ಯ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅದಲ್ಲದೇ ವಿಕ್ರಮ್ ರಾಥೊರ್ ನಾಯಕ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಪೂಜಾರ, ರಿಷಭ್ ಪಂತ್ ಹೀಗೆ ಭಾರತ ತಂಡದ ಎಲ್ಲಾ ಆಟಗಾರರ ಜೊತೆ ಈಗಾಗಲೇ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅದು ಇವರಿಗೆ ಮುಖ್ಯ ಕೋಚ್ ಹುದ್ದೆಗೇರಲು ಸಹಕಾರಿಯಾಗಬಹುದು ಎಂದು ಹೇಳಲಾಗಿದೆ.

ಮುಖ್ಯ ಕೋಚ್ ಅಲ್ಲದೇ ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ, ಬೌಲಿಂಗ್ ಕೋಚ್ ಹಾಗೂ ಫಿಲ್ಡೀಂಗ್ ಕೋಚ್ ಇರುತ್ತಾರೆ. ಜೊತೆಗೆ ಒಬ್ಬ ಫಿಸಿಯೋ ಮತ್ತು ಸಹಾಯಕ ಸಿಬ್ಬಂದಿ ಹಾಗೂ ನೆಟ್ ಬೌಲರ್ ಗಳು ಮತ್ತು ಥ್ರೋ ಡೌನ್ ಸ್ಪೆಷಲಿಸ್ಟ್ ಎಂಬ ಸಿಬ್ಬಂದಿ ಸಹ ಭಾರತ ತಂಡದ ಜೊತೆ ಇರುತ್ತಾರೆ. ರವಿಶಾಸ್ತ್ರಿ ನಂತರ ಭಾರತ ತಂಡದ ಮುಖ್ಯ ಕೋಚ್ ಯಾರಾಗಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.