ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಬೆಸ್ಟ್ ಕೋಚ್ ಎಂಬುದಕ್ಕೆ ಸಿಕ್ಕ ಸಾಕ್ಷಿಗಳಾವುವು ಗೊತ್ತಾ??

ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಬೆಸ್ಟ್ ಕೋಚ್ ಎಂಬುದಕ್ಕೆ ಸಿಕ್ಕ ಸಾಕ್ಷಿಗಳಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತದ ಎರಡು ತಂಡಗಳು ಸದ್ಯ ಕ್ರಿಕೇಟ್ ಆಡುತ್ತಿರುವುದು ನಿಮ್ಮ ಗಮನದಲ್ಲಿರುವ ವಿಷಯ.ಹಿರಿಯ ಹಾಗೂ ಅನುಭವಿ ಆಟಗಾರರಿರುವ ತಂಡಕ್ಕೆ ರವಿಶಾಸ್ತ್ರಿ ಕೋಚ್ ಆಗಿದ್ದರೇ, ಕಿರಿಯ ಹಾಗೂ ಅನನುಭವಿ ಆಟಗಾರರಿರುವ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಆಗಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಈ ಹಿಂದೆ ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ಎ ತಂಡ, ಅಂಡರ್ 19 ತಂಡ ಹಾಗೂ ಎನ್.ಸಿ.ಎ ಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕೋರೋನಾ ಕಾರಣ ಆಟಗಾರಲು ಸರಣಿ ಆರಂಭಕ್ಕೂ ಮುನ್ನ ಬಯೋ ಬಬಲ್ ಪ್ರವೇಶಿಸಬೇಕು. ಹಾಗಾಗಿ ಭಾರತ ಎರಡು ತಂಡಗಳನ್ನ ಒಟ್ಟಿಗೆ ಆಪರೇಟ್ ಮಾಡುವ ಅನಿವಾರ್ಯತೆಗೆ ಸಿಲುಕಿತು.

ಆಗ ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ರಂತಹ ಹಿರಿಯ ಅನುಭವಿ ಆಟಗಾರರ ಜೊತೆಗೆ ಹಲವಾರು ಅನಕ್ಯಾಪ್ಡ್ ಆಟಗಾರರು ಸಹ ಇದ್ದರು. ಹೀಗಾಗಿ ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿ ಭಾರತ ತಂಡ ಶ್ರೀಲಂಕಾ ಕ್ಕೆ ಪ್ರವಾಸ ಮಾಡಿತು. ಮೊದಲ ಏಕದಿನ ಪಂದ್ಯದಲ್ಲೇ ದಿಗ್ವಿಜಯ ಸಾಧಿಸಿದ ತಂಡ, ಏರಡನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಹೆಚ್ಚು ಅನನುಭವಿಗಳಿಗೆ ಆಡುವ ಅವಕಾಶ ನೀಡಿದಕ್ಕೆ ಸೋತರೂ ಸರಣಿ ವಶಪಡಿಸಿಕೊಂಡಿತು. ಇನ್ನು ಟಿ20 ಸರಣಿಯಲ್ಲಿಯೂ ಮೊದಲ ಪಂದ್ಯವನ್ನು ಹೋರಾಟದ ಮೂಲಕ ಗೆದ್ದಿತಾದರೂ, ಏರಡನೇ ಹಾಗೂ ಮೂರನೇ ಪಂದ್ಯದಲ್ಲಿ ತಂಡದ ಹಲವು ಆಟಗಾರರು ಐಸೋಲೆಶನ್ ಗೆ ಒಳಗಾದ ಕಾರಣಕ್ಕೆ ಸೋಲಬೇಕಾಯಿತು. ಈ ಮಧ್ಯೆ ದ್ರಾವಿಡ್ ಉತ್ತಮ ಕೋಚ್ ಎನ್ನುವುದಕ್ಕೆ ಹಲವಾರು ವಿಡಿಯೋ ದಾಖಲೆಗಳು ಈ ಸರಣಿಯಲ್ಲಿ ಲಭ್ಯವಾದವು.

ಎರಡನೇ ಏಕದಿನ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ದೀಪಕ್ ಚಾಹರ್ ಏಕಾಂಗಿ ಹೋರಾಟ ನಡೆಸುತ್ತಿದ್ದಾಗ , ರಾಹುಲ್ ದ್ರಾವಿಡ್ 12 ನೇ ಆಟಗಾರ ರಾಹುಲ್ ಚಾಹರ್ ಮೂಲಕ ನಿಯಮಿತವಾದ ಟಿಪ್ಸ್ ಗಳನ್ನ ದೀಪಕ್ ಗೆ ನೀಡುತ್ತಿದ್ದರು. ಈ ವಿಡಿಯೋ ಸಹ ವೈರಲ್ ಆಯಿತು. ಇನ್ನು ದೀಪಕ್ ಚಾಹರ್ ಗೆ ಬ್ಯಾಟಿಂಗ್ ನಲ್ಲಿ ಬಡ್ತಿ ನೀಡಿದ್ದು, ಮೊನಚು ಕಳೆದುಕೊಂಡಿದ್ದ ಕುಲ್-ಚಾ ಜೋಡಿಗೆ ಆತ್ಮ ವಿಶ್ವಾಸ ತುಂಬಿದ್ದು, ತಂಡದಲ್ಲಿ ಸ್ಥಾನ ಪಡೆದಿದ್ದ ಎಲ್ಲಾ ಆಟಗಾರರಿಗೂ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವಂತೆ ಮಾಡಿದ್ದು, ಇವೆಲ್ಲವೂ ರಾಹುಲ್ ದ್ರಾವಿಡ್ ಕೋಚ್ ಎಂಬುದಕ್ಕೆ ಸಾಕ್ಷಿಯಾದ ಘಟನೆಗಳಾಗಿವೆ. ಈ ಸರಣಿಯಲ್ಲಿ ಒಟ್ಟು ಒಂಬತ್ತು ಆಟಗಾರರು ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದರು.ಬಹುಷಃ ಎಂಟು ಆಟಗಾರರು ಐಸೋಲೆಷನ್ ಗೆ ಒಳಗಾಗಿ ತಂಡದಿಂದ ಹೊರಬೀಳದಿದ್ದರೆ, ಟಿ20 ಸರಣಿಯನ್ನು ಸಹ ಭಾರತವೇ ಗೆಲ್ಲುತ್ತಿತ್ತು ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಇದು ರಾಹುಲ್ ದ್ರಾವಿಡ್ ರವರ ಕಲಾತ್ಮಕ ಶೈಲಿಯ ಕೋಚಿಂಗ್ ಗೆ ಇರುವ ಉದಾಹರಣೆಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.