ಶ್ರೀಲಂಕಾ ಸರಣಿಯ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದ ಆಟಗಾರರು ಯಾರು ಗೊತ್ತೇ?? ಬಹುತೇಕ ಇವರು ಮತ್ತೆ ಅವಕಾಶ ಪಡೆಯುವುದೇ ಅನುಮಾನ.

ಶ್ರೀಲಂಕಾ ಸರಣಿಯ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದ ಆಟಗಾರರು ಯಾರು ಗೊತ್ತೇ?? ಬಹುತೇಕ ಇವರು ಮತ್ತೆ ಅವಕಾಶ ಪಡೆಯುವುದೇ ಅನುಮಾನ.

ನಮಸ್ಕಾರ ಸ್ನೇಹಿತರೇ ಶ್ರೀಲಂಕಾ ವಿರುದ್ದ ನಡೆದ ಮೂರು ಏಕದಿನ ಹಾಗೂ ಮೂರು ಟಿ 20 ಸರಣಿ ಹಲವಾರು ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನ ತೋರಲು ಅವಕಾಶ ನೀಡಿತ್ತು. ಅದರಲ್ಲೂ ಹಲವಾರು ಅನ್ ಕ್ಯಾಪ್ಢ್ ಆಟಗಾರರೂ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದರೇ, ಮತ್ತೆ ಕೆಲವರು ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳಬಹುದಿತ್ತು. ಆದರೇ ತಂಡದಲ್ಲಿ ಆಡುವ ಅವಕಾಶ ಸಿಕ್ಕರೂ ಕಳಪೆ ಪ್ರದರ್ಶನ ನೀಡಿ , ಸದ್ಯ ಈಗ ತಂಡದಿಂದಲೇ ಗೇಟ್ ಪಾಸ್ ಪಡೆಯುವ ಸಾಧ್ಯತೆ ಈ ಕೆಳಗಿನ ಮೂರು ಆಟಗಾರರಿಗೆ ಕಾಡುತ್ತಿದೆ. ಬನ್ನಿ ಆ ಮೂವರು ಆಟಗಾರರು ಯಾರು ಎಂಬುದನ್ನ ತಿಳಿದುಕೊಳ್ಳೋಣ.

ಮನೀಶ್ ಪಾಂಡೆ – ಕನ್ನಡಿಗ ಮನೀಶ್ ಪಾಂಡೆಗೆ ಶ್ರೀಲಂಕಾ ಪ್ರವಾಸ ಮರುಹುಟ್ಟು ನೀಡುವ ಎಲ್ಲಾ ಅವಕಾಶ ಇತ್ತು. ಆ ಲೆಕ್ಕಾಚಾರಕ್ಕೆ ತಕ್ಕಂತೆ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಿಕ್ಕಿತು. ಹೀರೋ ಆಗುವ ಎಲ್ಲಾ ಅವಕಾಶಗಳಿದ್ದರೂ, ಮನೀಶ್ ಪಾಂಡೆ ತಮ್ಮ ಕಳಪೆ ಫಾರ್ಮ್ ನಿಂದ ಮೂರು ಏಕದಿನ ಪಂದ್ಯಗಳಿಂದ ವಿಫಲರಾದರು. ಈ ಕಾರಣಕ್ಕೆ ಟಿ 20 ತಂಡದ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗಲೇ ಇಲ್ಲ. 32 ವರ್ಷದ ಪಾಂಡೆಗೆ ಇದೇ ಕೊನೆಯ ಅಂತರಾಷ್ಟ್ರೀಯ ಸರಣಿ ಆದರೂ ಅಚ್ಚರಿ ಪಡಬೇಕಿಲ್ಲ.

ಸಂಜು ಸ್ಯಾಮ್ಸನ್ – ಕೇರಳದ ವಿಕೇಟ್ ಕೀಪರ್ ಬ್ಯಾಟ್ಸಮನ್ ಗೂ ಈ ಸರಣಿ ಮಹತ್ವದ್ದು ಎಂದು ಹೇಳಲಾಗಿತ್ತು. ಮೊದಲ ಪಂದ್ಯಗಳನ್ನು ಇಂಜುರಿ ಕಾರಣ ತಪ್ಪಿಸಿಕೊಂಡರೇ, ಕೊನೆಗೆ ಸಿಕ್ಕ ಅವಕಾಶಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇನ್ನು ಟಿ 20 ಪಂದ್ಯಗಳಲ್ಲಂತೂ ತೀರಾ ಕಳಪೆ ಎಂಬಂತಹ ಪ್ರದರ್ಶನ ಸಂಜು ಬ್ಯಾಟಿಂದ ಬಂತು. ಇನ್ನು ವಿಕೇಟ್ ಕೀಪಿಂಗ್ ನಲ್ಲೂ ಸಹ ಸಂಜು ಹಲವಾರು ಕ್ಯಾಚ್ ಹಾಗೂ ಸ್ಟಂಪಿಂಗ್ ಅವಕಾಶಗಳನ್ನ ಕೈ ಚೆಲ್ಲಿದರು. ಸದ್ಯ ತಂಡದಲ್ಲಿ ರಿಷಭ್ ಪಂತ್, ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಸಂಜು ಮತ್ತೊಂದು ಅವಕಾಶಕ್ಕೆ ಹಲವಾರು ದಿನ ಕಾಯಲೇಬೇಕು‌.

ನೀತಿಶ್ ರಾಣಾ – ಕೆಕೆಆರ್ ತಂಡದ ಬ್ಯಾಟ್ಸಮನ್ ರಾಣಾಗೆ ಇದು ಮೊದಲ ಅಂತರಾಷ್ಟ್ರೀಯ ಸರಣಿ. ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕರೂ ರಾಣಾ ಭರವಸೆಯಂತಹ ಆಟ ಆಡಲಿಲ್ಲ. ಎರಡಂಕೆಯನ್ನು ಸಹ ತಲುಪಲಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಲು ನೀತಿಶ್ ರಾಣಾ ಮತ್ತಷ್ಟು ಪಂದ್ಯಗಳನ್ನು ಆಡುವುದಕ್ಕೆ ಖಂಡಿತ ಕಾಯಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.