ಭಾರತ ರತ್ನ ಪ್ರಶಸ್ತಿ ನೀಡುವ ವ್ಯಕ್ತಿಗೆ ಸರ್ಕಾರದಿಂದ ಏನೆಲ್ಲಾ ಸಿಗುತ್ತದೆ ಗೊತ್ತಾ?? ಎಷ್ಟೆಲ್ಲ ಸೌಕಾರ್ಯ ಗಳು ಗೊತ್ತೇ??
ಭಾರತ ರತ್ನ ಪ್ರಶಸ್ತಿ ನೀಡುವ ವ್ಯಕ್ತಿಗೆ ಸರ್ಕಾರದಿಂದ ಏನೆಲ್ಲಾ ಸಿಗುತ್ತದೆ ಗೊತ್ತಾ?? ಎಷ್ಟೆಲ್ಲ ಸೌಕಾರ್ಯ ಗಳು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದು ಮಹಾನ್ ಸಾಧಕರಿಗೆ. ಇದು ದೇಶದ ಅತ್ಯುತ್ತಮ ಗೌರವವಾಗಿದೆ. ಭಾರತ ರತ್ನ ಪ್ರಶಸ್ತಿಯನ್ನು ಪಡೆಯಲು ಯಾವುದಾದರೂ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿರಬೇಕು. ಇದುವರೆಗೆ 48 ಸಾಧಕರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಲೆ, ಸಾಹಿತ್ಯ, ಸಾರ್ವಜನಿಕ ಸೇವೆ, ಕ್ರೀಡೆ ಹೀಗೇ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಈ ಗೌರವಕ್ಕಾಗಿ ಆಯ್ಕೆ ಮಾಡಲಾಗುತ್ತದೆ. 1955ರಿಂದ ಮರಣೋತ್ತರವಾಗಿ ಕೂಡ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಯಾವೆಲ್ಲಾ ಅಂಶಗಳನ್ನು ಒಳಗೊಂಡಿದೆ? ಬನ್ನಿ ತಿಳಿಯೋಣ.
ಭಾರತ ರತ್ನ ಪ್ರಶಸ್ತಿ ಇತಿಹಾಸ: 1954 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಲಾಯಿತು. ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೊದಲಿಗರು, ವಿಜ್ಞಾನಿ ಚಂದ್ರಶೇಖರ್ ವೆಂಕಟರಮಣ. ನಂತರ ಸಾಧನೆಗೈದ ಮಹನೀಯರಿಗೆ ಭಾರತ ರತ್ನ ನೀಡಿ ಗೌರವಿಸುತ್ತಾ ಬರಲಾಗಿದೆ. ಎಲ್ಲರ ನೆಚ್ಚಿನ ಎಪಿಜೆ ಅಬ್ದುಲ್ ಕಲಾಂ ಅವರೂ ಭಾರತ ರತ್ನ ಗೌರವಾನ್ವಿತರು. ಇದಲ್ಲದೆ ಸಚಿನ್ ತೆಂಡೂಲ್ಕರ್, ಪಂಡಿತ್ ಭೀಮ್ಸೆನ್ ಜೋಶಿ, ಪ್ರಸಿದ್ಧ ವಿಜ್ಞಾನಿ ಸಿಎನ್ಆರ್ ರಾವ್ ಮೊದಲಾದ ಮಹಾನ್ ಸಾಧಕರಿಗೆ ಭಾರತ ರತ್ನವನ್ನು ನೀಡಿದ್ದು ಅವರಿಗೆ ಮಾತ್ರವಲ್ಲ ದೇಶಕ್ಕೆ ಒಂದು ಹೆಮ್ಮೆಯ ವಿಷಯ. ಇನ್ನು ಭಾರತೀಯರಲ್ಲದೇ ಇದ್ದರೂ ತಮ್ಮ ಸಾಧನೆಗಳಲ್ಲಿ ಉನ್ನತ ಸ್ಥಾನದಲ್ಲಿದ್ದ ಮದರ್ ತೆರೇಸಾ, ಅಬ್ದುಲ್ ಗಫರ್ ಖಾನ್ ಹಾಗೂ ನೆಲ್ಸನ್ ಮಂಡೇಲಾ ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮಹನೀಯರು.
ಭಾರತ ರತ್ನ ಪ್ರಶಸ್ತಿ ಏನೇನನ್ನು ಒಳಗೊಂಡಿದೆ: ಭಾರತ ರತ್ನ ಪ್ರಶಸ್ತಿಯನ್ನು ಯಾವ ಸಾಧಕರಿಗೆ ನೀಡಬೇಕು ಎಂದು ರಾಷ್ಟ್ರಪತಿಗೆ ಪ್ರಧಾನಿ ಶಿಫಾರಸ್ಸು ಕಳುಹಿಸುತ್ತಾರೆ. ನಂತರ ರಾಷ್ಟ್ರಪತಿಯಿಂದ ಅನುಮೋದನೆ ಪಡೆದು ಸಾಧಕರಿಗೆ ಭಾರತ ರತ್ನ ನೀಡಲಾಗುತ್ತದೆ. ಭಾರತ್ ರತ್ನ ಪ್ರಶಸ್ತಿ ಸರ್ಕಾರದ ಪ್ರಮಾಣಪತ್ರವನ್ನು ಒಳಗೊಂಡಿದೆ. ಅಶ್ವಥ ಮರದ ಎಲೆಯ ಆಕಾರದ ಪದಕವನ್ನು ಸಾಧಕರಿಗೆ ನೀಡಲಾಗುತ್ತದೆ. ಭಾರತ್ ರತ್ನ ಪದಕದ ಮೇಲೆ ಒಂದು ಕಡೆ ಸೂರ್ಯನ ಚಿಹ್ನೆಯಿದೆ. ಅದರ ಕೆಳಗೆ ಹಿಂದಿಯಲ್ಲಿ ’ಭಾರತ ರತ್ನ’ ಎಂದು ಬರೆಯಲಾಗಿರುತ್ತದೆ. ಇನ್ನೊಂದು ಕಡೆಗೆ ನಾಲ್ಕು ಮುಖದ(ಮೂರು ಮುಖ ಕಾಣುವಂಥದ್ದು) ಸಿಂಹದ ಚಿಹ್ನೆಯಿದ್ದು ಅದರ ಕೆಳಗೆ ಸತ್ಯಮೇವ್ ಜಯತೆ ಎಂದು ಬರೆಯಲಾಗಿದೆ. ಭಾರತ ರತ್ನ ನಗದು ರೂಪದ ಪ್ರಶಸ್ತಿಯಲ್ಲ. ಬದಲಿಗೆ ಈ ಗೌರವ ಪಡೆದವರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇದಲ್ಲದೆ ದೆಹಲಿ ಸರ್ಕಾರವು ಬಸ್ ಸೇವೆಯನ್ನೂ ಉಚಿತವಾಗಿ ಒದಗಿಸುತ್ತದೆ.