ತಂದೆಯಾದ 2 ದಿನಗಳಲ್ಲಿ ಬಿಟ್ಟು ಕೇಸ್, ಮದುವೆಯಾಗುವುದಾಗಿ ತಮಿಳು ನಟ ಆರ್ಯ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತಮಿಳಿನ ಖ್ಯಾತ ನಟ ಆರ್ಯ ರವರಿಗೆ ಶುಭ ಸುದ್ದಿಗಳು ಸಾಲುಸಾಲಾಗಿ ಹರಿದುಬರುತ್ತಿವೆ. ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ಅವರ ನಟನೆಯ ಸರ್ ಪಟ್ಟ ಪರಂಬರೈ ಚಿತ್ರ ಅಮೆಜಾನ್ ಪ್ರೈಮ್ ನ್ನಲ್ಲಿ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿತು. ಪ್ರೇಕ್ಷಕರು ಕೂಡ ಈ ಚಿತ್ರವನ್ನು ತುಂಬಾ ಇಷ್ಟಪಟ್ಟರು.

ಇನ್ನು ಇತ್ತೀಚೆಗಷ್ಟೇ ನಟ ಆರ್ಯ ರವರ ಪತ್ನಿಯಾಗಿರುವ ಬಹುಭಾಷಾ ನಟಿ ಸಯ್ಯೇಶಾರವರು ಹೆಣ್ಣು ಮಗುವಿಗೆ ಜನ್ಮ ನೀಡಿ ತಂದೆಯಾಗುವ ಖುಷಿಯನ್ನು ಕೂಡ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಆರ್ಯರ ಅವರ ಜೀವನದಲ್ಲಿ ಶುಭ ಸುದ್ದಿಗಳು ಆಚರಣೆಗಳು ಸಾಲು ಸಾಲಾಗಿ ಬಂದು ಅವರ ಜೀವನ ಸಂತೋಷದಿಂದ ತುಂಬಿ ತುಳುಕಾಡುತ್ತಿದೆ ಎಂದು ಹೇಳಬಹುದು. ಆದರೆ ಈ ಎಲ್ಲಾ ಶುಭ ಸುದ್ದಿಗಳ ನಡುವೆ ಒಂದು ಕಹಿ ಘಟನೆ ಇನ್ನೇನು ಅವರ ಜೀವನದಲ್ಲಿ ಕಾಲಿಡಲು ಕ್ಷಣಗಣನೆ ಮಾಡುತ್ತಿದೆ.

ಹೌದು ಸ್ನೇಹಿತರೆ ಆರ್ಯರ ಅವರ ಮೇಲೆ ಜರ್ಮನ್ ಮೂಲದ ಮಹಿಳೆಯೊಬ್ಬರು ತನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಎಪ್ಪತ್ತು ಲಕ್ಷ ರೂಪಾಯಿ ತೆಗೆದುಕೊಂಡಿರುವ ದೂರನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಕಥೆಯ ಪ್ರಕಾರ ಆರ್ಯ ರವರು ಜರ್ಮನ್ ಮೂಲದ ವಿದ್ಜಾ ಎಂಬ ಮಹಿಳೆಯನ್ನು ಮದುವೆಯಾಗುತ್ತೇನೆಂದು ಹೇಳಿ ಯಾವ ರಿಂದ 70 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ನಂತರ ಆರ್ಯ ರವರು ಸಯ್ಯೇಶಾ ಅವರನ್ನು ಮದುವೆಯಾದ ನಂತರ ವಿದ್ಜಾ ರವರು ನನಗೆ ಏಕೆ ಮೋಸ ಮಾಡಿದ್ದೀರಿ ಎಂದು ಕೇಳಿದಾಗ ಆರ್ಯ ರವರು ನೀವು ಕೊಟ್ಟಿರುವ 70 ಲಕ್ಷ ರೂಪಾಯಿಗಳನ್ನು ನಾನು ವಾಪಸ್ಸು ಹಿಂದಿರುಗಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಆದರೆ ಇದುವರೆಗೂ ಅವರು ಹಣವನ್ನು ವಾಪಸ್ ಕೊಡದಿದ್ದ ಕಾರಣ ಮದ್ರಾಸ್ ಕೋರ್ಟ್ನಲ್ಲಿ ಆರ್ಯ ರವರ ಕುರಿತಂತೆ ದೂರನ್ನು ನೀಡಿದ್ದಾರೆ. ಇನ್ನು ವಿದ್ಜಾ ರವರ ವಕೀಲರ ಪ್ರಕಾರ ಹಣ ಹಿಂದಿರುಗಿಸುವ ವರೆಗೂ ಅವರ ಚಿತ್ರಗಳನ್ನು ಎಲ್ಲಿಯೂ ಕೂಡ ಬಿಡುಗಡೆ ಮಾಡದಂತೆ ತಡೆಯೊಡ್ಡಬೇಕಾಗಿ ಪ್ರಸ್ತಾವನೆಯನ್ನು ನೀಡಿದ್ದಾರೆ. ಇನ್ನು ಈ ಪ್ರಕರಣ ಆಗಸ್ಟ್ 17ಕ್ಕೆ ಮುಂದೂಡಲಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav