ವಿಡಿಯೋ ವೈರಲ್: ಕೊನೆಯದಾಗಿ ಇಹಲೋಕ ತ್ಯಜಿಸುವ ಮುನ್ನ ವಿಡಿಯೋ ಮಾಡಿದ್ದ ಜಯಂತಿ ಅಮ್ಮನವರು ಹೇಳಿದ್ದೇನು ಗೊತ್ತೇ??
ವಿಡಿಯೋ ವೈರಲ್: ಕೊನೆಯದಾಗಿ ಇಹಲೋಕ ತ್ಯಜಿಸುವ ಮುನ್ನ ವಿಡಿಯೋ ಮಾಡಿದ್ದ ಜಯಂತಿ ಅಮ್ಮನವರು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಜಯಂತಿ ಅಮ್ಮನವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ದುಃಖದ ಮಡುವಿಗೆ ಬಿದ್ದಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಕಾರಣ ಜಯಂತಿ ಅಮ್ಮನವರು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇಷ್ಟವಾದ ವ್ಯಕ್ತಿತ್ವದವರಾಗಿದ್ದರು. ಕನ್ನಡ ಚಿತ್ರರಂಗ ಸೇರಿದಂತೆ ಆರು ಭಾಷೆಗಳಲ್ಲಿ ಸುಮಾರು 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ತಮ್ಮ ನಟನೆಯನ್ನು ಸಾಬೀತು ಪಡಿಸಿಕೊಂಡು ಅಂತಹ ಅತ್ಯಂತ ಅಮೂಲ್ಯ ನಟಿಯೆಂದರೆ ಜಯಂತಿ ಅಮ್ಮನವರು.
ಇನ್ನು ಜಯಂತಿ ಅಮ್ಮನವರು ಹಲವಾರು ವರ್ಷಗಳಿಂದ ಅಸ್ತಮ ದಿಂದಾಗಿ ಬಳಲುತ್ತಿದ್ದರು. ಇದನ್ನು ವಾಸಿಮಾಡಲು ಹಲವಾರು ಬಾರಿ ವಿಕ್ರಮ್ ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಯನ್ನು ಕೂಡ ಪಡೆದಿದ್ದರು. ಇನ್ನು ಈ ಬಾರಿ ಲಾಕ್ಡೌನ್ ವಿಧಿಸಿದ್ದ ರಿಂದ ಅವರು ಹಂಪಿಯಲ್ಲಿ ಉಳಿಯುವಂತಾಗಿತ್ತು. ನಂತರ ಅಧಿಕಾರಿಗಳ ನೆರವಿನಿಂದಾಗಿ ವಾಪಾಸು ಬೆಂಗಳೂರಿಗೆ ಬರುವಂತಾಗಿತ್ತು. ಇನ್ನು ಬೆಂಗಳೂರಿಗೆ ಬಂದ ನಂತರ ಅವರ ಉಸಿರಾಟದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ಇದಕ್ಕಾಗಿ ಮತ್ತೊಮ್ಮೆ ಜಯಂತಿ ಅಮ್ಮನವರನ್ನು ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಜಯಂತಿ ಅಮ್ಮನವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಹೀಗಾಗಿ ಜಯಂತಿ ಅಮ್ಮನವರ ಆರೋಗ್ಯದಲ್ಲಿ ಕ್ಷಿಪ್ರವಾಗಿ ಸಕಾರಾತ್ಮಕ ಬದಲಾವಣೆ ಮೂಡುವಂತಿತ್ತು.
ಇನ್ನು ಜಯಂತಿ ಅಮ್ಮನವರ ಆರೋಗ್ಯವು ಬೇಗ ಗುಣಮುಖರಾಗಲೆಂದು ಬಾಮಾ ಹರೀಶ್ ರವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮವನ್ನು ಕೂಡ ನಡೆಸಲಾಗಿತ್ತು. ಈ ಕುರಿತಂತೆ ತಮ್ಮ ಕೊನೆಯ ವಿಡಿಯೋದಲ್ಲಿ ಜಯಂತಿ ಅಮ್ಮನವರು ನನ್ನ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು ನನಗೆ ಪುನರ್ಜನ್ಮ ಸಿಕ್ಕಿದೆ ಮತ್ತೊಮ್ಮೆ ಭೇಟಿಯಾಗೋಣ ಎಂದು ಹೇಳಿದ್ದರು. ಅದೇ ಅವರ ಕೊನೆಯ ವಿಡಿಯೋ ಆಗಿತ್ತು ಹಾಗೂ ಮಾತು ಕೂಡ ಆಗಿತ್ತು. ಅದಾದ ನಂತರ ಮೊನ್ನೆ ಜಯಂತಿ ಅಮ್ಮನವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಅವರು ಎಲ್ಲೇ ಇದ್ದರೂ ಅವರ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತವೆ. ಸದಾಕಾಲ ಅವರು ಕನ್ನಡ ಚಿತ್ರರಂಗದ ಅಭಿನಯ ಶಾರದೆ ಆಗಿರುತ್ತಾರೆ ಎಂಬುದೇ ಎಲ್ಲರ ಆಸೆ.