ಪಂದ್ಯ ಸೋತರೂ, ಕನ್ನಡಿಗ ದೇವದತ್ ಪಡಿಕ್ಕಲ್ ನಿರ್ಮಿಸಿದ ಹೊಸ ದಾಖಲೆ ಏನು ಗೊತ್ತೇ?? ಇದಪ್ಪ ನಮ್ಮ ಹುಡುಗ ಅಂದ್ರೆ.

ಪಂದ್ಯ ಸೋತರೂ, ಕನ್ನಡಿಗ ದೇವದತ್ ಪಡಿಕ್ಕಲ್ ನಿರ್ಮಿಸಿದ ಹೊಸ ದಾಖಲೆ ಏನು ಗೊತ್ತೇ?? ಇದಪ್ಪ ನಮ್ಮ ಹುಡುಗ ಅಂದ್ರೆ.

ನಮಸ್ಕಾರ ಸ್ನೇಹಿತರೇ ಈ ಮೊದಲೇ ಶ್ರೀಲಂಕಾಕ್ಕೆ ಭಾರತ ಬಿ ತಂಡವನ್ನು ಕಳುಹಿಸಿದೆ ಎಂದು ಶ್ರೀಲಂಕಾದ ಹಿರಿಯ ಆಟಗಾರರು ಸರಣಿಗೂ ಮುನ್ನ ದೂರಿದ್ದರು. ಆದರೇ ತಂಡದ ಪ್ರಮುಖ ಎಂಟು ಆಟಗಾರರು ಐಸೋಲೆಷನ್ ಗೆ ಒಳಗಾಗಿದ್ದ ಪರಿಣಾಮ ಭಾರತ ತಂಡ ನಿನ್ನೆ ಶ್ರೀಲಂಕಾ ವಿರುದ್ದ ಸಿ ತಂಡವನ್ನೇ ಕಣಕ್ಕಿಳಿಸಿತು ಎಂದು ಹೇಳಬಹುದು. ಒಟ್ಟು ನಾಲ್ವರು ಆಟಗಾರರು ಈ ಪಂದ್ಯದಲ್ಲಿ ಭಾರತದ ಪದಾರ್ಪಣೆ ಮಾಡಿದರು. ಐವರು ತಜ್ಞ ಬ್ಯಾಟ್ಸಮನ್ ಗಳು ಹಾಗೂ ಆರು ಬೌಲರ್ ಗಳೊಂದಿಗೆ ಕಣಕ್ಕಿಳಿದ ಶಿಖರ್ ಧವನ್ ಪಡೆ ಕೊನೆಯ ಓವರ್ ನಲ್ಲಿ ಸೋಲೊಪ್ಪಿಕೊಂಡಿತು.

ಪೃಥ್ವಿ ಶಾ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್ ಮತ್ತು ನಾಯಕ ಶಿಖರ್ ಧವನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ಲ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಆರ್ಭಟಿಸಲು ಶುರು ಮಾಡಿದರು. ಆದರೇ ನಂತರ ಬಂದ ಬ್ಯಾಟ್ಸಮನ್ ಗಳ ಕಳಪೆ ಪ್ರದರ್ಶನದಿಂದ ಭಾರತ 132 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ನಂತರ ಬೌಲಿಂಗ್ ನಲ್ಲಿ ಸಹ ಭಾರತದ ಪರ ಸ್ಪಿನ್ನರ್ ಗಳು ಉತ್ತಮ ಪ್ರದರ್ಶನ ನೀಡಿದರೂ, ಕೊನೆಯ ಎರಡು ಓವರ್ ಗಳಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಚೇತನ್ ಸಾಕರಿಯಾ ಸುಲಭವಾಗಿ ರನ್ ಬಿಟ್ಟು ಕೊಟ್ಟ ಕಾರಣ ಭಾರತ ಈ ಪಂದ್ಯ ಸೋಲಬೇಕಾಯಿತು. ತಂಡದಲ್ಲಿದ್ದ ಮತ್ತೊಬ್ಬ ವೇಗಿ ನವದೀಪ್ ಸೈನಿ ಒಂದು ಓವರ್ ಮಾಡದೇ ಇದ್ದಿದ್ದು ಸ್ವಲ್ಪ ಸೋಜಿಗ ಎನಿಸಿತು.

ಇನ್ನು ಈ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಒಂದು ವಿನೂತನ ದಾಖಲೆ ನಿರ್ಮಿಸಿದ್ದಾರೆ. ದೇವದತ್ ಪಡಿಕ್ಕಲ್ ಜನಿಸಿದ್ದು ಜುಲೈ 4 2000 ದಲ್ಲಿ. ಈಗ ಅವರಿಗೆ 21 ವರ್ಷ ವಯಸ್ಸು.ಈ ಮೂಲಕ 21 ನೇ ಶತಮಾನದಲ್ಲಿ ಜನಿಸಿದ್ದ ಕ್ರಿಕೇಟಿಗರೊಬ್ಬರು ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀರ ಎಂಬ ದಾಖಲೆ ನಿರ್ಮಿಸಿದರು. ಈ ಹಿಂದೆ ಭಾರತೀಯ ಮಹಿಳಾ ಕ್ರಿಕೇಟರ್ ಗಳಾದ 2004 ರಲ್ಲಿ ಜನಿಸಿದ ಶೆಫಾಲಿ ವರ್ಮಾ ಮತ್ತು 2001 ರಲ್ಲಿ ಜನಿಸಿದ್ದ ಜೆಮಿಯಾ ರೋಡ್ರಿಗಸ್ ಪದಾರ್ಪಣೆ ಮಾಡಿ ಮಹಿಳಾ ವಿಭಾಗದಲ್ಲಿ ಈ ದಾಖಲೆ ನಿರ್ಮಿಸಿದ್ದರು.

ಸದ್ಯ 1 – 1 ಸಮಬಲದಲ್ಲಿ ಅಂತ್ಯವಾಗಿರುವ ಸರಣಿಯ ಮೂರನೇ ಹಾಗೂ ಅಂತಿಮ ನಿರ್ಣಾಯಕ ಪಂದ್ಯ ಇಂದು ರಾತ್ರಿ ಕೋಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ನಿನ್ನೆಯ ಪಂದ್ಯದ ತಪ್ಪುಗಳನ್ನ ಪುನರಾವರ್ತಿಸದೇ, ಇಂದಿನ ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ನೀರಿಕ್ಷೆಯಲ್ಲಿ ಸದ್ಯ ಭಾರತ ತಂಡ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.