ಸೂರ್ಯ ಮೇಲೆ ಮುನಿಸಿಕೊಂಡ ದ್ರಾವಿಡ್. ಮೊದಲ ಬಾರಿಗೆ ಬಹಿರಂಗ ಅಸಮಾಧಾನ ವ್ಯಕ್ತ ಪಡಿಸಿದ ದ್ರಾವಿಡ್, ಯಾಕೆ ಗೊತ್ತೇ??

ಸೂರ್ಯ ಮೇಲೆ ಮುನಿಸಿಕೊಂಡ ದ್ರಾವಿಡ್. ಮೊದಲ ಬಾರಿಗೆ ಬಹಿರಂಗ ಅಸಮಾಧಾನ ವ್ಯಕ್ತ ಪಡಿಸಿದ ದ್ರಾವಿಡ್, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೂರ್ಯ ಕುಮಾರ್ ಯಾದವ್ ಭಾರತ ತಂಡದ ಉದಯೋನ್ಮುಖ ಬ್ಯಾಟ್ಸಮನ್. ವಯಸ್ಸು ಮೂವತ್ತು ಆದ ನಂತರ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ಹಿರಿಯ ಆಟಗಾರ. ಕಳೆದ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಟಿ 20 ಪಂದ್ಯದಲ್ಲಿ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆತ್ತಿ ಅಂತರಾಷ್ಟ್ರೀಯ ಕರಿಯರ್ ನಲ್ಲಿ ತಮ್ಮ ರನ್ನುಗಳ ಖಾತೆಯನ್ನ ಆರಂಭಿಸಿದ್ದರು. ನಂತರ ಸಿಕ್ಕ ಅವಕಾಶಗಳೆಲ್ಲವನ್ನು ಸಮರ್ಥವಾಗಿ ಬಳಸಿಕೊಂಡ ಸೂರ್ಯ ಕುಮಾರ್ ಯಾದವ್ ಸದ್ಯ ಶ್ರೀಲಂಕಾ ಪ್ರವಾಸದಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ರನ್ ಗಳಿಸಿದ್ದ ಸೂರ್ಯ ಕುಮಾರ್ ಯಾದವ್ ಸದ್ಯ ಶ್ರೀಲಂಕಾ ವಿರುದ್ದ ಮೊದಲ ಟಿ 20 ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿರುವಾಗ ಬ್ಯಾಟಿಂಗ್ ಗೆ ಆಗಮಿಸಿ ಆಕರ್ಷಕ ಅರ್ಧ ಶತಕ ಗಳಿಸಿದರು.

ಈ ಇನ್ನಿಂಗ್ಸ್ ನಲ್ಲಿ ಭಾರತ ತನ್ನ ಮೊದಲ ಎಸೆತದಲ್ಲೇ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ ವಿಕೇಟ್ ಕಳೆದುಕೊಂಡಿತ್ತು. ಈ ವೇಳೆ ಏರಡನೇ ವಿಕೇಟ್ ಗೆ ಸಂಜು ಸ್ಯಾಮ್ಸನ್ ಹಾಗೂ ನಾಯಕ ಶಿಖರ್ ಧವನ್ ಐವತ್ತು ರನ್ನುಗಳ ಜೊತೆಯಾಟ ಆಡಿದರು. ಆದರೇ ಸಂಜು ವಿಕೇಟ್ ಪತನದ ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಸೂರ್ಯ ಕುಮಾರ್ ಯಾದವ್ ತಮ್ಮ ಅತ್ಯಾಕರ್ಷಕ ಹೊಡೆತಗಳಿಂದ ಕೇವಲ ಮೂವತ್ತೈದು ಎಸೆತಗಳಲ್ಲಿ ಐವತ್ತು ರನ್ ಭಾರಿಸುವ ಮೂಲಕ ತಂಡದ ರನ್ ರೇಟ್ ಏರಿಸಿದ್ದಷ್ಟಲ್ಲದೇ ತಂಡಕ್ಕೆ ಉತ್ತಮ ಸ್ಪರ್ಧಾತ್ಮಕ ಮೊತ್ತ ಏರಿಸಲು ಸಹಾಯ ಮಾಡಿದರು.

ಆದರೇ ಐವತ್ತು ರನ್ ಭಾರಿಸಿದ ಬಳಿಕ ಸೂರ್ಯ ಕುಮಾರ್ ಯಾದವ್ ಹಸರಂಗಾ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಪ್ರಯತ್ನ ಮಾಡಿ ಲಾಂಗ್ ಆನ್ ನಲ್ಲಿ ತಮ್ಮ ವಿಕೇಟ್ ನ್ನು ಒಪ್ಪಿಸಿದರು. ಸೂರ್ಯ ಔಟಾದಾಗ ಭಾರತಕ್ಕೆ ಇನ್ನು ನಾಲ್ಕು ಓವರ್ ಇತ್ತು. ಸೂರ್ಯ ಔಟಾದ ರೀತಿಗೆ ರಾಹುಲ್ ದ್ರಾವಿಡ್ ಬಹಿರಂಗವಾಗಿ ಅಸಮಾಧಾನಪಡಿಸಿದ ವೀಡಿಯೋ ಬಹಳಷ್ಟು ವೈರಲ್ ಆಗಿತ್ತು. ಸೂರ್ಯ ಇನ್ನಿಂಗ್ಸ್ ನ ಕೊನೆಯ ಎಸೆತದ ತನಕ ಬ್ಯಾಟಿಂಗ್ ನಲ್ಲಿ ಮುಂದುವರೆದಿದ್ದರೇ ಭಾರತ 180 ರನ್ನುಗಳ ಬೃಹತ್ ಟಾರ್ಗೇಟ್ ಫಿಕ್ಸ್ ಮಾಡಿಕೊಳ್ಳಬಹುದಿತ್ತು. ಆದರೇ ಸೂರ್ಯ ಕುಮಾರ್ ಯಾದವ್ ತಮ್ಮ ಗುರುತರ ಜವಾಬ್ದಾರಿ ಮರೆತು ವಿಕೇಟ್ ಒಪ್ಪಿಸಿದಕ್ಕೆ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.