ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶಿವಣ್ಣ ನಟನೆಯ ಮುಂದಿನ ಚಿತ್ರಕ್ಕೆ ಕನ್ನಡಕ್ಕೆ ಬರುತ್ತಿರುವ ತೆಲುಗಿನ ಟಾಪ್ ಸುಂದರಿ ಯಾರು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಎವರ್ಗ್ರೀನ್ ನಟ ಎಂದು ಯಾರು ಎಂದರೆ ಎಲ್ಲರೂ ಕೈ ತೋರಿಸುವುದು ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣರವರ ಕಡೆಗೆ. ವಯಸ್ಸು 59 ಆದರೂ ಕೂಡ ನವಯುವಕ ನಂತರ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳು ಡೈಲಾಗ್ ಡೆಲಿವರಿ ನಟನೆ ಎಲ್ಲರನ್ನೂ ಕೂಡ ನಾಚಿಸುವಂತೆ ಲವಲವಿಕೆಯಿಂದಿದ್ದಾರೆ. ಇತ್ತೀಚಿಗಷ್ಟೇ ಶಿವಣ್ಣನವರ ಜನ್ಮದಿನದ ಪ್ರಯುಕ್ತ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಭಜರಂಗಿ 2 , ಬೈರಾಗಿ ಹಾಗೂ ಕೆಲ ಚಿತ್ರಗಳ ಅನೌನ್ಸ್ಮೆಂಟ್ ಕೂಡ ನಡೆದಿತ್ತು.

ಅದರಲ್ಲೂ ಇತ್ತೀಚೆಗಷ್ಟೇ ಶಿವಣ್ಣ ನಟನೆಯ ಮುಂದಿನ ಹೆಸರಿಡದ ಚಿತ್ರದ ಕೆಲ ಮಾಹಿತಿಗಳು ಹೊರಬಿದ್ದಿದೆ. ಬಾಲ ಶ್ರೀರಾಮ್ ಸ್ಟುಡಿಯೋ ನಿರ್ಮಾಣದಲ್ಲಿ ಪ್ರೊಡಕ್ಷನ್ 1 ಎಂಬ ವರ್ಕಿಂಗ್ ಟೈಟಲ್ ನಲ್ಲಿ, ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಘೋಷಣೆಯಾಗಿರುವ ಚಿತ್ರ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದಲ್ಲಿ ಶಿವಣ್ಣ ಆರ್ಮಿ ಆಫೀಸರ್ ಆಗಿ 2 ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ಈ ಚಿತ್ರದ ನಾಯಕಿಯ ಕುರಿತಂತೆ ಕೂಡ ಘೋಷಣೆಯಾಗಿದೆ.

ಹೌದು ಸ್ನೇಹಿತರೆ ಶಿವಣ್ಣ ನಟನೆಯ ಈ ಚಿತ್ರಕ್ಕೆ ಟಾಲಿವುಡ್ ನಲ್ಲಿ ನಾಯಕ ನಟಿಯಾಗಿ ಖ್ಯಾತಿ ಪಡೆದಿರುವ ಮೆಹರಿನ್ ಪಿರ್ಜಾದ ಆಯ್ಕೆಯಾಗಿದ್ದಾರೆ. ಇದು ಇವರ ಕನ್ನಡದ ಚೊಚ್ಚಲ ಚಿತ್ರವಾಗಿದ್ದು ಮೊದಲ ಚಿತ್ರದಲ್ಲಿ ಶಿವಣ್ಣ ಅವರ ಸಿನಿಮಾದಲ್ಲಿ ನಟನೆ ಮಾಡುವುದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಉತ್ತಮ ಆರಂಭ ಸಿಗುತ್ತದೆ ಎಂದು ಭಾವಿಸಲಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.