ದಿವ್ಯ ಬೇಡಿದರೂ ಕ್ಯಾರೇ ಎನ್ನದೇ ಖಡಕ್ ಆಗಿ ಮಾತನಾಡಿ ಮಾತುಬಿಟ್ಟ ಅರವಿಂದ್, ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಿಗ್ ಬಾಸ್ ಎಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಪಿಆರ್ಪಿ ವಿಷಯವಾಗಲಿ ಅಥವಾ ಬೇರೆ ಯಾವುದೇ ವಿಷಯದಲ್ಲೂ ತೆಗೆದುಕೊಂಡರೂ ಸಹ ಬಿಗ್ ಬಾಸ್ ಕನ್ನಡದ ಮಟ್ಟಿಗೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತರ ರಿಯಾಲಿಟಿ ಶೋ ಆಗಿ ಎಂಟು ವರ್ಷಗಳಿಂದಲೂ ಕಿರುತೆರೆಯಲ್ಲಿ ರಾಜನಂತೆ ಮರೆಯುತ್ತಿದೆ.

ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು ಈಗಾಗಲೇ ಇದು ಸಾಕಷ್ಟು ವಿಷಯಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿ ಮಾರ್ಪಾಡಾಗಿದೆ. ಅದರಲ್ಲಿ ಈ ಬಾರಿ ಬಿಗ್ ಬಾಸ್ ಲಾಕ್ಡೌನ್ ಕಾರಣದಿಂದಾಗಿ ಅರ್ಧಕ್ಕೆ ನಿಂತು ಮತ್ತೆ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಈಗಾಗಲೇ ಕಲರ್ಸ್ ಕನ್ನಡದ ಕಿರುತೆರೆ ವಾಹಿನಿಗೆ ಮರುಕಳಿಸಿದೆ.

ಇನ್ನು ಈ ಬಾರಿ ಹಲವಾರು ವಿಷಯಗಳಿಗೆ ಬಿಗ್ಬಾಸ್ ಜನಪ್ರಿಯತೆ ಪಡೆದುಕೊಂಡಿದ್ದರು ಸಹ ಅಧಿಕವಾಗಿ ಎಲ್ಲರೂ ಈ ಬಾರಿಯ ಬಿಗ್ ಬಾಸ್ ಅನ್ನು ನೋಡುತ್ತಿರುವುದು ಅರವಿಂದ ಕೆ ಪಿ ಹಾಗೂ ದಿವ್ಯ ಉರುಡುಗ ರವರ ಲವ್ ಕಹಾನಿ ನೋಡೋಕೆ. ಹೌದು ಸ್ನೇಹಿತರೆ ಪರಿಚಯವಿಲ್ಲದೆ ಬಿಗ್ಬಾಸ್ ಮನೆಗೆ ಕಾಲಿಟ್ಟ ಇವರಿಬ್ಬರು ನಂತರದ ದಿನಗಳಲ್ಲಿ ಜೋಡಿ ಟಾಸ್ಕ್ ಮಾಡುವ ಮೂಲಕ ಪರಿಚಿತರಾಗಿ ಸ್ನೇಹಿತರಾಗಿ ಈಗ ಸ್ನೇಹಕ್ಕೂ ಮಿಗಿಲಾದ ಸಂಬಂಧವನ್ನು ಹೊಂದಿದ್ದಾರೆ.

ಅರವಿಂದ್ ರವರು ದಿವ್ಯ ರವರನ್ನು ಆಗಲಿ ಅಥವಾ ದಿವ್ಯ ರವರು ಅರವಿಂದ್ರ ವರನಾಗಲಿ ಬಿಗ್ ಬಾಸ್ ಮನೆಯಲ್ಲಿ ಬಿಟ್ಟುಕೊಟ್ಟಿದ್ದೇ ಇಲ್ಲ. ಇಷ್ಟೇ ಯಾಕೆ ಹಿಂದೆ ತಂದೆ ತಮಗೆ ಕೊಟ್ಟಿದ್ದ ಉಂಗುರವನ್ನು ದಿವ್ಯ ರವರು ಅರವಿಂದ್ ರವರಿಗೆ ನೀಡಿದ್ದರು ಇದರಲ್ಲೇ ಗೊತ್ತಾಗುತ್ತದೆ ದಿವ್ಯ ರವರು ಅರವಿಂದ್ ರವರನ್ನು ಹಾಗೂ ಅರವಿಂದ್ ರವರು ದಿವ್ಯಾ ಅವರನ್ನು ಎಷ್ಟರಮಟ್ಟಿಗೆ ಹಚ್ಚಿಕೊಂಡಿದ್ದಾರೆ ಎಂಬುದು. ಟಾಸ್ಕ್ ವಿಚಾರವಾಗಿ ಆದರೂ ಸಹ ಇವರಿಬ್ಬರ ನಡುವೆ ಒಬ್ಬರನ್ನೊಬ್ಬರು ಯಾವತ್ತು ಬಿಟ್ಟುಕೊಟ್ಟಿರಲಿಲ್ಲ.

ಸಾಮಾನ್ಯ ಸಮಯದಲ್ಲೂ ಕೂಡ ಅವರಿಬ್ಬರು ಯಾವಾಗಲೂ ಜೊತೆಯಾಗಿ ಕೂತುಕೊಂಡು ಮಾತನಾಡುತ್ತಿರುತ್ತಾರೆ. ಹೊರಗಡೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವರಿಬ್ಬರ ಅಭಿಮಾನಿಗಳು ಇವರಿಬ್ಬರ ಕುರಿತಂತೆ ಸಾಂಗ್ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿ ಇವರಿಬ್ಬರ ಸಂಬಂಧವನ್ನು ಇನ್ನಷ್ಟು ಪಸರಿಸಿದ್ದಾರೆ. ಇನ್ನು ಬಿಗ್ ಬಾಸ್ ನ ಕೆಲ ಪ್ರೊಮೋ ಗಳನ್ನು ನೀವು ನೋಡಿದರೆ ನಿಮಗೆ ಅರ್ಥವಾಗಬಹುದು ಇವರಿಬ್ಬರ ಭಾಗದ ವಿಡಿಯೋ ಬಂದಾಗ ಅದಕ್ಕೆ ಹಿನ್ನೆಲೆಯನ್ನು ಎಡಿಟ್ ಮಾಡಿ ಪ್ರಸಾರ ಮಾಡುತ್ತಾರೆ ಇದರಿಂದಲೇ ಗೊತ್ತಾಗುತ್ತದೆ ಇವರಿಬ್ಬರನ್ನು ಎಲ್ಲರೂ ಹೈಲೈಟ್ ನಲ್ಲಿ ತೋರಿಸಿದ್ದಾರೆಂದು. ಇಷ್ಟೊಂದು ಜೋಡಿ ಹಕ್ಕಿಗಳಂತೆ ಬಿಗ್ ಬಾಸ್ ಮನೆಯಲ್ಲಿ ಹಾರಾಡಿಕೊಂಡಿದ್ದ ಇವರಿಬ್ಬರು ಮಾತನಾಡುತ್ತಿಲ್ಲ ಎಂಬುದನ್ನು ನೀವು ನಂಬಲೇಬೇಕು.

ಹೌದು ಸ್ನೇಹಿತರೆ ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ರವರ ಮಧ್ಯದಲ್ಲಿ ಇತ್ತೀಚೆಗಷ್ಟೇ ಟಾಸ್ಕ್ ವಿಚಾರವಾಗಿ ಚಿಕ್ಕದಾಗಿ ಕಹಿ ಘಟನೆ ನಡೆದಿದೆ. ಈಗಷ್ಟೇ ಬಿಗ್ ಬಾಸ್ ಮನೆಯ ಹೊಸ ನಾಯಕರ ಆಯ್ಕೆಗಾಗಿ ನಡೆಯುತ್ತಿರುವ ಕೈ ಕೆಸರಾದರೆ ಬಾಯಿ ಮೊಸರು ಎಂಬ ಟಾಸ್ಕ್ ನಲ್ಲಿ ಯಾವಾಗೆಲ್ಲ ಬಜರ್ ಹೊಡೆಯುತ್ತೋ ಆಗೆಲ್ಲ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳು ಕೊಟ್ಟಿರುವ ಮೂರು ಗ್ಲೌಸ್ ಅಲ್ಲಿ ಯಾರು ಮೊದಲು ಬಂದು ಹಾಕಿಕೊಳ್ಳುತ್ತಾರೆ ಆ ಮೂರು ಸ್ಪರ್ಧಿಗಳಿಗೆ ಅವಕಾಶ ನೀಡುತ್ತಾರೆ ಕೆಸರಿನಲ್ಲಿ ಮುತ್ತನ್ನು ಹುಡುಕಲು. ಹೆಚ್ಚುಬಾರಿ ಮುತ್ತನ್ನು ಹುಡುಕಿದ ಸ್ಪರ್ಧಿಗಳನ್ನು ಮುಂದಿನವಾರದ ನಾಯಕರನ್ನಾಗಿ ಮಾಡುವ ಸುವರ್ಣಾವಕಾಶ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ.

ಈ ಕಾರಣಕ್ಕಾಗಿ ಪದೇಪದೇ ವೈಷ್ಣವಿ ಗೌಡ ಶುಭ ಪೂಂಜಾ ಹಾಗೂ ದಿವ್ಯ ಉರುಡುಗ ಮೊದಲ ಬಾರಿ ನಡೆದ ನಂತರವೂ ಕೂಡ ಎರಡನೇ ಬಾರಿ ಗ್ಲೌಸ್ ಗಳನ್ನು ಹಾಕಿಕೊಳ್ಳಲು ಹೋದಾಗ ಅರವಿಂದ್ ರವರು ಅದನ್ನು ವಿರೋಧಿಸಿದರು ಇದಕ್ಕೆ ಮಂಜು ಪಾವಗಡ ರವರು ಕೂಡ ಸಾಥ್ ನೀಡಿದ್ದರು. ನ್ಯಾಯವಾಗಿ ಆಡಬೇಕು ಎನ್ನುತ್ತೀರಾ ಆದರೆ ಪದೇಪದೇ ನೀವೇ ಇರುವ ಅವಕಾಶವನ್ನು ಉಪಯೋಗಿಸಿದರೆ ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಹೇಳಿದಾಗ ದಿವ್ಯ ರವರು, ಯಾರು ಮೊದಲು ಪಡೆದುಕೊಳ್ಳುತ್ತಾರೆ ಅವರಿಗೆ ಅವಕಾಶ ಬೇಕಿದ್ದರೆ ನೀವು ಮೊದಲು ಬಂದು ನಿಂತುಕೊಳ್ಳಿ ಎಂದು ಹೇಳಿದರು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ಅರವಿಂದ್ ರವರು ಖಡಕ್ ಆಗಿ ಹೊರನಡೆದರು. ನಂತರ ರಾತ್ರಿ ಅರವಿಂದ್ ಕೆಪಿ ರವರು ಒಬ್ಬನೇ ಕೂತಿದ್ದಾಗ ದಿವ್ಯ ಬಂದು ಸಮಾಧಾನ ಮಾಡಲು ಪ್ರಯತ್ನಿಸಿದರು ಆಗ ಅರವಿಂದ ಅವರು ನನಗೆ ಮಾತನಾಡಲು ಇಷ್ಟವಿಲ್ಲವೆಂದು ಖಡಕ್ ಆಗಿ ಹೇಳಿದರು. ಸಾಕಷ್ಟು ಬಾರಿ ಮಾತನಾಡಲು ಪ್ರಯತ್ನಿಸಿದರು ಸಹ ಅರವಿಂದ್ ರವರ ಅದಕ್ಕೆ ಸ್ಪಂದಿಸಿರಲಿಲ್ಲ ಅದಕ್ಕಾಗಿ ದಿವ್ಯ ಅವರು ಕೂಡ ಎದ್ದು ಹೊರ ನಡೆದರು. ಇದು ಎಷ್ಟರ ಮಟ್ಟಿಗೆ ಸೀರಿಯಸ್ ಆಗಿದೆ ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ಜೋಡಿ ಮಾತನಾಡುವಂತೆ ಆಗಲಿ ಎಂದು ಆಶಿಸೋಣ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav