ಬಾಹುಬಲಿಯಂತಹ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೈ ಬಿಟ್ಟ ಟಾಪ್ 7 ಕಲಾವಿದರು, ಯಾರ್ಯಾರು ಗೊತ್ತೇ??

ಬಾಹುಬಲಿಯಂತಹ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೈ ಬಿಟ್ಟ ಟಾಪ್ 7 ಕಲಾವಿದರು, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಯಶಸ್ವಿ ಕಂಡ ಚಿತ್ರವೆಂದರೆ ಎಲ್ಲರ ಅಭಿಪ್ರಾಯ ಒಂದೇ ಆಗಿರುತ್ತದೆ ಅದು ತೆಲುಗು ಚಿತ್ರರಂಗದಲ್ಲಿ ಮೂಡಿ ಬಂದಂತಹ ಬಾಹುಬಲಿ ಸರಣಿಯ ಚಿತ್ರಗಳು. ರಾಜಮೌಳಿ ಅವರ ಅದ್ಭುತ ಕಲ್ಪನೆಯಲ್ಲಿ ಮೂಡಿ ಬಂದಂತಹ ಈ ಚಿತ್ರಕ್ಕೆ ಕೇವಲ ಭಾರತ ದೇಶಿಯರು ಮಾತ್ರವಲ್ಲದೆ ವಿದೇಶಿ ವೀಕ್ಷಕರು ಕೂಡ ಜೈ ಬಾಹುಬಲಿ ಎಂದು ಉದ್ಘೋಷ ಮಾಡಿದ್ದಾರೆ. ಆ ಶ್ರೀಮಂತ ಶೈಲಿಯ ಚಿತ್ರೀಕರಣ ಯಾವುದೇ ಹಾಲಿವುಡ್ ಸಿನಿಮಾಗಳಿಗಿಂತ ಕಮ್ಮಿ ಇಲ್ಲದಂತೆ ಮೂಡಿಬಂದು ಹಾಲಿವುಡ್ ನ್ನೇ ನಾಚಿಸುವಂತಿದೆ.

ಕೇವಲ ರಾಜಮೌಳಿಯವರ ನಿರ್ದೇಶನ ಮಾತ್ರವಲ್ಲದೆ ಚಿತ್ರದಲ್ಲಿ ನಟಿಸಿರುವ ಪ್ರಭಾಸ್ ರಾಣಾ ದಗ್ಗುಬಾಟಿ ರಮ್ಯಾ ಕೃಷ್ಣನ್ ಅನುಷ್ಕಾ ಶೆಟ್ಟಿ ತಮನ್ನಾ ಭಾಟಿಯಾ ಸತ್ಯರಾಜ ಹೀಗೆ ಹಲವಾರು ನಟರ ಸಂಘಟಿತ ಪ್ರಯತ್ನ ಈ ಚಿತ್ರ ಇಷ್ಟರಮಟ್ಟಿಗೆ ಯಶಸ್ವಿಯಾಗಲು ಕಾರಣವಾಯಿತು ಎಂದರೆ ತಪ್ಪಾಗಲಾರದು. ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಈ ಚಿತ್ರ ಪ್ರಾರಂಭವಾಗುವುದಕ್ಕೂ ಮುನ್ನ ಈ ಚಿತ್ರಕ್ಕೆ ಪಾತ್ರಗಳನ್ನು ಬೇರೆಯವರನ್ನು ನಿರ್ಣಯಿಸಲಾಗಿದ್ದು ಆದರೆ ಆ ನಟರು ಈ ಪಾತ್ರಗಳನ್ನು ತಿರಸ್ಕರಿಸಿದ್ದರು. ಹಾಗಿದ್ದರೆ ಆ ತಿರಸ್ಕರಿಸಿದ ಏಳು ನಟರು ಹಾಗೂ ನಟಿಯರು ಯಾರೆಂದು ಹೇಳುತ್ತೇವೆ ಬನ್ನಿ.

ಮೊದಲಿಗೆ ಹೃತಿಕ್ ರೋಷನ್ ಮೊದಲಿಗೆ ನಿರ್ದೇಶಕ ರಾಜಮೌಳಿ ಅವರು ಬಾಹುಬಲಿ ಪಾತ್ರಕ್ಕಾಗಿ ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ರವರನ್ನು ಕೇಳಿಕೊಂಡರು ಆದರೆ ಒಂದು ಶರತು ಕೂಡ ಇತ್ತು. ಆಶರತು ಏನೆಂದರೆ ಈ ಚಿತ್ರ ಮುಗಿಯುವ ತನಕ ಬೇರೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬುದು. ಇದಕ್ಕಾಗಿ ಹೃತಿಕ್ ರೋಷನ್ ರವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ ಅದರ ಬದಲಾಗಿ ಅವರು ಅಶುತೋಷ್ ಗೋವರಿಕರ್ ನಿರ್ದೇಶನದ ಮೊಹೆಂಜೋದಾರೋ ಚಿತ್ರದಲ್ಲಿ ನಟಿಸಿದರು.

ಜಾನ್ ಅಬ್ರಹಮ್ ತಮ್ಮ ನೀಲಕಾಯ ಹಾಗೂ ದೃಢಕಾಯರಾಗಿ ಹೆಸರಾಗಿರುವ ಬಾಲಿವುಡ್ ನಟ ಜಾನ್ ಅಬ್ರಹಮ್ ರವರನ್ನು ಬಲ್ಲಾಳದೇವ ಪಾತ್ರಕ್ಕಾಗಿ ರಾಜಮೌಳಿಯವರು ಕಾಯ್ದಿರಿಸಿದ್ದರು. ಸ್ಕ್ರಿಪ್ಟ್ ಅನ್ನು ರೆಡಿ ಮಾಡಿ ರಾಜಮೌಳಿಯವರು ಜಾನ್ ಅಬ್ರಹಾಂಗೆ ಕಳಿಸಿದ್ದರು ಆದರೆ ಅವರಿಂದ ಯಾವುದೇ ಉತ್ತರ ಮರಳಿ ಸಿಗದಿದ್ದಾಗ ಆ ಪಾತ್ರವನ್ನು ರಾಣಾ ದಗ್ಗುಬಾಟಿ ಅವರಿಗೆ ನೀಡಿದರು.

ಮೋಹನ್ ಲಾಲ್ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ರವರನ್ನು ಕಟ್ಟಪ್ಪ ಪಾತ್ರಕ್ಕಾಗಿ ನಿಗದಿಪಡಿಸಲಾಗಿತ್ತು. ಆದರೆ ಮೋಹನ್ ಲಾಲ್ ರವರಿಂದ ಬೇಕಾದಷ್ಟು ದಿನಗಳು ಸಿಗದಿದ್ದಾಗ ಆ ಪಾತ್ರವನ್ನು ಸತ್ಯರಾಜ್ ರವರಿಗೆ ನೀಡಲಾಯಿತು ಅವರು ಕೂಡ ಈ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.

ವಿವೇಕ್ ಒಬೆರಾಯ್ ಹಿಂದಿ ಚಿತ್ರರಂಗದ ಖ್ಯಾತ ನಟ ವಿವೇಕ್ ಒಬೆರಾಯ್ ರವರಿಗೆ ಮೊದಲಿಗೆ ಬಲ್ಲಾಳದೇವ ಪಾತ್ರವನ್ನು ನಡೆಸಲಾಯಿತು ಆದರೆ ವಿವಿಧ ಕಾರಣಗಳಿಂದಾಗಿ ವಿವೇಕ್ ಒಬೆರಾಯ್ ರವರಿಗೆ ಪಾತ್ರವನ್ನು ನಟಿಸಲಾಗಲಿಲ್ಲ. ನಂತರ ಈ ಪಾತ್ರವನ್ನು ರಾಣಾ ದಗ್ಗುಬಾಟಿ ಸಂಪೂರ್ಣ ಶ್ರದ್ಧೆಯಿಂದ ನಟಿಸಿ ಎಲ್ಲರ ಮನಗೆದ್ದರು.

ಸೋನಂ ಕಪೂರ್ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಂ ಕಪೂರ್ ಬಾಹುಬಲಿ ಚಿತ್ರದ ಅವಂತಿಕ ಪಾತ್ರಕ್ಕಾಗಿ ಆಯ್ಕೆಯಾಗಿದ್ದರು ಮಾತ್ರವಲ್ಲದೆ ಈ ಪಾತ್ರಕ್ಕಾಗಿ ರಾಜಮೌಳಿಯವರು ಸೋನಂ ಕಪೂರ್ ಅವರಲ್ಲಿ ಎರಡು ವರ್ಷದ ಅವಧಿಯನ್ನು ಕೇಳಿದ್ದರು. ಇದನ್ನು ಒಪ್ಪದಿದ್ದಾಗ ಈ ಪಾತ್ರವನ್ನು ತಮನ್ನಾ ಭಾಟಿಯಾ ಅವರು ನಟಿಸಿ ಎಲ್ಲರ ಮನಗೆದ್ದು ಜನಪ್ರಿಯರಾದರು.

ಶ್ರೀದೇವಿ ರಮ್ಯಕೃಷ್ಣ ರವರು ನಟಿಸಿದ್ದ ಶಿವಗಾಮಿ ಪಾತ್ರವನ್ನು ಮೊದಲು ರಾಜಮೌಳಿಯವರು ಶ್ರೀದೇವಿ ಅವರು ನಟಿಸಬೇಕು ಎಂದು ಕೇಳಿಕೊಂಡಿದ್ದರು. ಅದಕ್ಕೆ ಶ್ರೀದೇವಿ ಅವರು ಕೂಡ ಒಪ್ಪಿಕೊಂಡಿದ್ದರು ಆದರೆ ಅವರು ಕೇಳಿದ್ದ ಭಾರಿ ಸಂಭಾವನೆ ಹಾಗೂ ಅವರ ಉಳಿದುಕೊಳ್ಳುವಿಕೆ ಹಾಗೂ ಸಂಚಾರದ ಖರ್ಚುಗಳು ಬಜೆಟ್ ಗೂ ಮೀರಿದ್ದಾಗಿತ್ತು. ಇದರಿಂದಾಗಿ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಲಿಲ್ಲ.

ನಯನತಾರ ಅನುಷ್ಕಾ ಶೆಟ್ಟಿ ಅವರು ನಟಿಸಿದ್ದ ದೇವಸೇನಾ ಪಾತ್ರವನ್ನು ಮೊದಲು ದಕ್ಷಿಣ ಭಾರತದ ಅತ್ಯಂತ ಬಹುಬೇಡಿಕೆಯ ನಟಿ ನಯನತಾರಾ ರವರು ನಟಿಸುವ ನಿರ್ಧಾರವಾಗಿತ್ತು. ಆದರೆ ಡೇಟ್ಸ್ ನ ಹೊಂದಾಣಿಕೆ ಮಾಡುವಲ್ಲಿ ವಿಫಲರಾದ ರಿಂದ ಅನುಷ್ಕಾ ಶೆಟ್ಟಿ ಅವರೇ ಈ ಪಾತ್ರವನ್ನು ಮಾಡಿ ಎಲ್ಲರ ಮನಗೆದ್ದರು. ಸ್ನೇಹಿತರೆ ನೋಡಿದ್ರಲ್ಲ ಬಾಹುಬಲಿಯಲ್ಲಿ ಯಾರು ನಡೆಸ ಬಾರದಿತ್ತು ಯಾರು ನಡೆಸಬೇಕಿತ್ತು ಎಂಬುದು ನಿಮಗೆ ಈಗ ಸಂಪೂರ್ಣವಾಗಿ ತಿಳಿದಿದೆ ಎಂದು ಭಾವಿಸುತ್ತೇವೆ. ನಿಮಗೆ ಗೊತ್ತಿಲ್ಲದ ಈ ವಿಷಯಗಳನ್ನು ನಾವು ನಿಮ್ಮ ಮುಂದೆ ಸಂಪೂರ್ಣವಾಗಿ ತೆರೆದಿದ್ದೇವೆ. ತಪ್ಪದೇ ಶೇರ್ ಮಾಡಿ ಮಾತ್ರವಲ್ಲದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.