ಬಿಗ್ ನ್ಯೂಸ್: ವಿಚ್ಚೇದನ ಅರ್ಜಿಯ ಬೆನ್ನಲ್ಲೇ, ಮೂರನೇ ಮದುವೆಗೆ ಸಿದ್ದವಾದ ಅಮಿರ್ ಖಾನ್, ಆ ಟಾಪ್ ನಟಿ ಯಾರು ಗೊತ್ತೇ??

ಬಿಗ್ ನ್ಯೂಸ್: ವಿಚ್ಚೇದನ ಅರ್ಜಿಯ ಬೆನ್ನಲ್ಲೇ, ಮೂರನೇ ಮದುವೆಗೆ ಸಿದ್ದವಾದ ಅಮಿರ್ ಖಾನ್, ಆ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಾಲಿವುಡ್ ಚಿತ್ರರಂಗದ ನಟರಲ್ಲಿ ಒಬ್ಬರಾಗಿರುವ ಅಮಿರ್ ಖಾನ್ ರವರು ಕಿರಣ್ ರಾವ್ ರವರ ಜೊತೆ ತಮ್ಮ 16 ವರ್ಷಗಳ ಮದುವೆಯ ಸಂಬಂಧವನ್ನು ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದಾರೆ. ಹಾಗೂ ಅದೇ ಕಾರಣಕ್ಕಾಗಿ ಕಿರಣ್ ರಾವ್ ಹಾಗೂ ಅಮಿರ್ ಖಾನ್ ರವರು ಇದೀಗ ವಿಚ್ಚೇದನಕ್ಕೆ ಕೂಡ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಒಪ್ಪಿಗೆ ನೀಡಿರುವ ಕಾರಣ ಕಿರಣ್ ರಾವ್ ಹಾಗೂ ಅಮಿರ್ ಖಾನ್ ರವರಿಗೆ ಬಹಳ ಸುಲಭವಾಗಿ ವಿಚ್ಚೇದನ ದೊರೆಯಲಿದೆ.

ಈ ಸುದ್ದಿ ಇದೀಗ ಇಡೀ ಭಾರತದಲ್ಲಿ ಸದ್ದು ಮಾಡಲು ಆರಂಭಿಸಿದೆ. ಕಿರಣ್ ರಾವ್ ಹಾಗೂ ಅಮಿರ್ ಖಾನ್ ದಂಪತಿಗಳು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ತಕ್ಷಣ ಬಾರಿ ಸದ್ದು ಮಾಡಲು ಆರಂಭಿಸಿದ್ದು, ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಇದು ಅಮಿರ್ ಖಾನ್ ರವರಿಗೆ ಎರಡನೇ ಬಾರಿಯ ವಿಚ್ಚೇದನವಾಗಿದ್ದು ಈ ಮೊದಲು ರಿನಾ ದತ್ತ ರವರೊಂದಿಗೆ ಮದುವೆಯಾಗಿದ್ದ ಅಮಿರ್ ಖಾನ್ ರವರು ಎರಡು ಮಕ್ಕಳ ನಂತರ ವಿಚ್ಚೇದನ ಪಡೆದುಕೊಂಡಿದ್ದರು. ಹೀಗೆ ಎರಡನೇ ವಿಚ್ಚೇದನದ ಬೆನ್ನಲ್ಲೇ ಅಮಿರ್ ಖಾನ್ ರವರು ಮೂರನೇ ಮದುವೆಗೆ ಸಿದ್ಧವಾಗಿದ್ದಾರೆ ಹಾಗೂ ಅದು ಟಾಪ್ ನಟಿಯ ಜೊತೆಗೆ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಸೃಷ್ಟಿಯಾಗಿದೆ.

ಅಷ್ಟಕ್ಕೂ ಆ ಟಾಪ್ ನಟಿ ಯಾರು, ಹಾಗೂ ಆಕೆ ಹಾಗೂ ಅಮಿರ್ ಖಾನ್ ರವರ ಬಗ್ಗೆ ಕೇಳಿ ಬಂದಿರುವ ಸುದ್ದಿಯಾದರು ಏನು ಎಂಬುದನ್ನು ತಿಳಿಸುತ್ತೇವೆ ಕೇಳಿ. ಸ್ನೇಹಿತರೇ, ಥುಗ್ಸ್ ಆಫ್ ಹಿಂದೂಸ್ತಾನಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಅಮಿರ್ ಖಾನ್ ಹಾಗೂ ಫಾತಿಮಾ‌ ಸೈನಾ ಶೇಖ್ ರವರ ನಡುವೆ ಸಂಬಂಧವಿದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಈ ಸುದ್ದಿಗಳಿಗೆ ಮೊದಲು ಫಾತಿಮಾ‌ ಸೈನಾ ಶೇಖ್ ಉತ್ತರ ನೀಡಿರಲಿಲ್ಲ, ಈ ಚಿತ್ರವಾದ ಬಳಿಕ ದಂಗಾಲ್ ಸಿನಿಮಾದಲ್ಲಿ ಅಮಿರ್ ಖಾನ್ ರವರಿಗೆ ಮಗಳಾಗಿ ಫಾತಿಮಾ‌ ಸೈನಾ ಶೇಖ್ ನಟಿಸಿದ್ದಾರೆ. ಈ ಚಿತ್ರದ ಬಳಿಕ ಈ ಸುದ್ದಿ ಬಾರಿ ಜೋರಾಯಿತು, ಆದರೆ ಇದನ್ನು ಫಾತಿಮಾ‌ ಸೈನಾ ಶೇಖ್ ತಳ್ಳಿಹಾಕಿದರೂ, ಅಮಿರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಇವರರಿಬ್ಬರ ನಡುವೆ ಪ್ರೀತಿ ಇದ್ದು ಅದೇ ಕಾರಣಕ್ಕೆ ಅಮಿರ್ ಖಾನ್ ವಿಚ್ಚೇದನ ಪಡೆಯುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಶುರುವಾಗಿದೆ.