7 ಲಕ್ಷ ಕೋಟಿ ಮಾರುಕಟ್ಟೆ ಹೊಂದಿರುವ ಕ್ಷೇತ್ರಕ್ಕೆ ಲಗ್ಗೆ ಇಡಲು ಐತಿಹಾಸಿಕ ಹೆಜ್ಜೆ ಇಟ್ಟ ನಮೋ. ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ದೇಶವು ವಿವಿಧ ಕ್ಷೇತ್ರಗಳಲ್ಲಿ ಆತ್ಮ ನಿರ್ಭರ್ ಎಂಬ ಆಲೋಚನೆಯೊಂದಿಗೆ ವಿಶ್ವದ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೇ, ವಿದೇಶಗಳಿಗೆ ಇಲ್ಲಿಯೇ ವಿವಿಧ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ರಫ್ತ್ತು ಮಾಡುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಆಲೋಚನೆಯನ್ನು ಹೊಂದಿದೆ. ಈ ಸಮಯದಲ್ಲಿ ಇದೀಗ ಭಾರತ ಮತ್ತೊಂದು ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡಲು ಭರ್ಜರಿ ಸಿದ್ಧತೆ ನಡೆಸಿದೆ.

ಈ ಹೆಜ್ಜೆಯಿಂದ ಭಾರತ ಬರೋಬ್ಬರಿ 7 ಲಕ್ಷ ಕೋಟಿ ಮಾರುಕಟ್ಟೆಯಲ್ಲಿ ಲಗ್ಗೆ ಇತ್ತು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದು, ಅದೇ ಸಮಯದಲ್ಲಿ ಈ ಕ್ಷೇತ್ರದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡುತ್ತಿರುವ ಚೀನಾಗೆ ಕೂಡ ಶಾಕ್ ನೀಡಲು ಸಿದ್ಧತೆ ನಡೆಸುತ್ತಿದೆ. ಹೌದು ಸ್ನೇಹಿತರೇ. ಆ ಕ್ಷೇತ್ರ ಮತ್ಯಾವುದು ಅಲ್ಲ, ಅದುವೇ ಆಟಿಕೆ. ಆಟಿಕೆ ಕ್ಷೇತ್ರದಲ್ಲಿ ಇಷ್ಟೊಂದು ಮಹತ್ವ ಹಾಗೂ ಹಣವಿದೆಯೇ ಎಂದು ನೀವು ಆಲೋಚನೆ ಮಾಡಬಹುದು, ಆದರೆ ಆಟಿಕೆ ಕ್ಷೇತ್ರ ನಿಜಕ್ಕೂ ನಾವಂದು ಕೊಂಡಿದ್ದಕ್ಕಿಂತಲೂ ಬಹಳ ದೊಡ್ಡದಾಗಿದೆ. ಆದ ಕಾರಣ ಈ ಮಾರುಕಟ್ಟೆಯಲ್ಲಿ ಭಾರತವನ್ನು ಬಲಪಡಿಸಲು ಇದೀಗ ಕೇಂದ್ರ ಮುಂದಾಗಿದ್ದು,

ಸ್ಥಳೀಯವಾಗಿ ಆಟಿಕೆ ತಯಾರು ಮಾಡಲು ಹಾಗೂ ಬಳಸಲು ಉತ್ತೇಜನ ನೀಡಿ, ಹಾಗೂ ನಮ್ಮ ಗಮನವು ಭಾರತೀಯತೆಯ ಪ್ರತಿಯೊಂದು ಅಂಶವನ್ನು ಆಸಕ್ತಿದಾಯಕ, ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವ ಆಟಗಳನ್ನು ಅಭಿವೃದ್ಧಿಪಡಿಸುವುದರತ್ತ ಇರಬೇಕು ಎಂದು ಹೇಳಿದ್ದಾರೆ. ಸುಮಾರು 80 ಪ್ರತಿಶತದಷ್ಟು ಆಟಿಕೆಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ, ಇದರಿಂದಾಗಿ ಕೋಟ್ಯಂತರ ರೂಪಾಯಿಗಳು ವಿದೇಶಕ್ಕೆ ಹೋಗುತ್ತವೆ ಇದನ್ನು ತಡೆಯಲು ಆಟಿಕೆಗಳನ್ನು ಉತ್ಪಾದಿಸಲು 3 ದಿನ ಟಾಯ್‌ಕಾಥಾನ್ 2021 ನಲ್ಲಿ ಪರಿಸರ ಸ್ನೇಹಿ, ಸ್ಥಳೀಯ, ಮರುಬಳಕೆಯ ವಸ್ತುಗಳನ್ನು ಬಳಸಿ ಆಟಿಕೆ ತಯಾರಿಸುವ ಕುರಿತು ಗಮನ ಹರಿಸಲು ಸೂಚಿಸಿದರು.

Post Author: Ravi Yadav