ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಕಾಣಲು ಕಾರಣವಾದ ಭಾರತೀಯ ಆಟಗಾರ ಯಾರು ಏನು ತಿಳಿಸಿದ ಬ್ರಾಡ್ ಹಾಗ್. ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷೆ ಹುಟ್ಟಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ಮಳೆಯ ಕಾಟದ ನಡುವೆಯೂ ಫಲಿತಾಂಶದಲ್ಲಿ ಅಂತ್ಯ ಕಂಡಿತು. ಭಾರತ ಹೀನಾಯವಾಗಿ ಸೋತಿತು. ಆದರೇ ಈಗ ಭಾರತದ ಸೋಲಿಗೆ ಯಾರು ಕಾರಣ ಎಂಬ ಪರ-ವಿರೋಧಗಳ ಚರ್ಚೆ ತೀವ್ರವಾಗಿ ಆರಂಭವಾಗಿವೆ. ಸುಲಭವಾಗಿ ಡ್ರಾನಲ್ಲಿ ಅಂತ್ಯವಾಗಬೇಕಿದ್ದ ಪಂದ್ಯಕ್ಕೆ ವಿಲನ್ ಆದ ಆಟಗಾರ ಯಾರು ಎಂಬ ಚರ್ಚೆ ಕಾವೇರುತ್ತಿದೆ.

ಈ ನಡುವೆ ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಸಹ ಭಾರತ ತಂಡದ ಒಬ್ಬ ಆಟಗಾರನೇ, ಭಾರತದ ಸೋಲಿಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಟಗಾರ ತನ್ನ ಸಾಮರ್ಥ್ಯಕ್ಕೆ ತಕ್ಕನಾಗಿ ಬ್ಯಾಟಿಂಗ್ ಮಾಡಲಿಲ್ಲ. ಜೊತೆಗೆ ಟೆಸ್ಟ್ ಕ್ರಿಕೇಟ್ ನಲ್ಲಿ ತನ್ನ ಫೇವರೇಟ್ ಪ್ಲೇಸ್ ನಲ್ಲಿ ಫೀಲ್ಡಿಂಗ್ ಗೆ ನಿಂತರೂ ಅಲ್ಲಿ ಕಳಪೆ ಪ್ರದರ್ಶನದ ಪರಿಣಾಮ ಭಾರತ ತಂಡ ಸೋಲಬೇಕಾಯಿತು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಆ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ ಚೇತೇಶ್ವರ ಪೂಜಾರ. ಹೌದು ಪೂಜಾರ ನ್ಯೂಜಿಲೆಂಡ್ ತಂಡಕ್ಕೆ ಇನ್ನು 50 ರನ್ ಬೇಕಾಗಿದ್ದಾಗ ಬುಮ್ರಾ ಬೌಲಿಂಗ್ ನಲ್ಲಿ ರಾಸ್ ಟೇಲರ್ ರವರ ಸುಲಭದ ಕ್ಯಾಚ್ ಕೈ ಚೆಲ್ಲಿದರು. ಒಂದು ವೇಳೆ ಆ ಕ್ಯಾಚ್ ಹಿಡಿದದ್ದರೇ, ಮುಂದೆ ಬರುವ ಬ್ಯಾಟ್ಸಮನ್ ಅನನುಭವಿಗಳಾಗಿದ್ದರು. ಜೊತೆಗೆ ವಾಟ್ಲಿಂಗ್ ಕೈಗೆ ಗಾಯ ಸಹ ಆಗಿತ್ತು. ಆಗ ಒತ್ತಡಕ್ಕೆ ಸಿಲುಕಿ ಫಲಿತಾಂಶ ಏರುಪೇರಾಗಬಹುದಿತ್ತು. ಆದರೇ ಪೂಜಾರ ಕ್ಯಾಚ್ ಹಿಡಿಯದೇ ಆ ಅವಕಾಶವನ್ನ ಕೈ ಚೆಲ್ಲಿದರು. ಈ ಮೂಲಕ ಭಾರತದ ಸೋಲಿಗೆ ಅಧಿಕೃತವಾಗಿ ಕಾರಣರಾದರು ಎಂದು ಹೇಳಿದರು.

ರಾಸ್ ಟೇಲರ್ ವಿಕೇಟ್ ಪಡೆದಿದ್ದರೇ, ನ್ಯೂಜಿಲೆಂಡ್ ಕೊನೆಗೆ ಪಂದ್ಯ ಡ್ರಾ ಮಾಡಿಕೊಳ್ಳುವತ್ತ ಸಾಗುತ್ತಿತ್ತು. ಆ ಅವಕಾಶವೂ ಭಾರತಕ್ಕೆ ಇಲ್ಲದಾಯಿತು. ಮಹತ್ವದ ಟೂರ್ನಿಗಳಲ್ಲಿ ಅನುಭವಿ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ನೀಡಬೇಕೆ ಹೊರತು, ಮೈದಾನದಲ್ಲಿ ಎಂದಿಗೂ ಮೈಮರೆಯಬಾರದು ಎಂಬ ಕಿವಿಮಾತು ಸಹ ಹೇಳಿದರು. ಬ್ರಾಡ್ ಹಾಗ್ ರವರ ಈ ಹೇಳಿಕೆಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೂ ಭಾರತದ ಸೋಲಿಗೆ ಯಾರು ಕಾರಣ ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav