ಅತಿ ಸುಲಭವಾಗಿ ಬಾರಿ ಚಪ್ಪರಿಸಿ ತಿನ್ನುವಂತಹ ನುಗ್ಗೆಕಾಯಿ ಗೊಜ್ಜು ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ನುಗ್ಗೆಕಾಯಿ ಗೊಜ್ಜು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನುಗ್ಗೆಕಾಯಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು: 6 ನುಗ್ಗೆಕಾಯಿ, 2 ಈರುಳ್ಳಿ, 3 ಟೊಮೆಟೊ, 4 ಚಮಚ ಹುರಿದ ಕಡಲೆಬೀಜ, 2 ಗಡ್ಡೆ ಬೆಳ್ಳುಳ್ಳಿ, 4 – 5 ಚಮಚ ತೆಂಗಿನ ಕಾಯಿತುರಿ, 3 ಚಮಚ ಸಾಂಬಾರ್ ಪುಡಿ, 4 ಚಮಚ ಎಣ್ಣೆ, ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ನುಗ್ಗೆ ಕಾಯಿ ಗೊಜ್ಜು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸಿಪ್ಪೆ ತೆಗೆದು ಹಚ್ಚಿದ ನುಗ್ಗೆಕಾಯಿ, ನುಗ್ಗೆಕಾಯಿ ಬೇಯುವಷ್ಟು ನೀರು, ನುಗ್ಗೆಕಾಯಿ ಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ನುಗ್ಗೆಕಾಯಿಯನ್ನು ಬೇಯಿಸಿಕೊಂಡು ಗ್ಯಾಸ್ ಅಪ್ ಮಾಡಿಕೊಂಡು ನುಗ್ಗೆಕಾಯಿಯನ್ನು ನೀರಿನಿಂದ ಬೇರ್ಪಡಿಸಿ.

ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಕಡಲೆ ಬೀಜವನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ತೆಂಗಿನಕಾಯಿತುರಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮತ್ತೆ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ 30 ಸೆಕೆಂಡ್ ಗಳ ಕಾಲ ಬೆಳ್ಳುಳ್ಳಿಯನ್ನು ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಟೊಮ್ಯಾಟೋ ಸಾಫ್ಟ್ ಆಗುವವರೆಗೂ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಾಂಬಾರ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನುಗ್ಗೆಕಾಯಿಯನ್ನು ಬೇಯಿಸಿಕೊಂಡ 1 ಬಟ್ಟಲು ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡ ನುಗ್ಗೆಕಾಯಿ, ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ತೆಂಗಿನಕಾಯಿ ತುರಿ ಪೇಸ್ಟ್ ಹಾಗೂ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 1 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಇದಕ್ಕೆ ಕಡಲೆ ಬೀಜದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು 1 – 2 ನಿಮಿಷಗಳ ಕಾಲ ಕುದಿಸಿಕೊಂಡರೆ ನುಗ್ಗೆ ಕಾಯಿ ಗೊಜ್ಜು ಸವಿಯಲು ಸಿದ್ಧ.

Post Author: Ravi Yadav