ಉತ್ತಮ ಆಟ ಆಡುವ ಮನಸ್ಥಿತಿಯುಳ್ಳ ಆಟಗಾರರು ತಂಡದಲ್ಲಿರಬೇಕಿತ್ತು – ಕೊಹ್ಲಿ ಹೀಗೆ ಟಾಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ??

ಉತ್ತಮ ಆಟ ಆಡುವ ಮನಸ್ಥಿತಿಯುಳ್ಳ ಆಟಗಾರರು ತಂಡದಲ್ಲಿರಬೇಕಿತ್ತು – ಕೊಹ್ಲಿ ಹೀಗೆ ಟಾಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅತಿ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋತ ನಂತರ ಈಗ ಒಂದೊಂದೆ ಅಸಮಾಧಾನಗಳು ಬುಗಿಲೆದ್ದಿವೆ. ಕೊನೆಯ ದಿನ ಭಾರತ ಬ್ಯಾಟಿಂಗ್ ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ನೀಡಿತ್ತು. ಇನ್ನು ಹತ್ತರಿಂದ ಹದಿನೈದು ಓವರ್ ಗಳನ್ನ ಬ್ಯಾಟಿಂಗ್ ಮಾಡಿದರೂ, ಭಾರತ ಕನಿಷ್ಠ ಪಕ್ಷ ಡ್ರಾ ಮಾಡುವ ಅವಕಾಶ ಹೊಂದಿರುತ್ತಿತ್ತು. ಆದರೇ ಅದಕ್ಕೂ ಕೊನೆಗೆ ಅವಕಾಶ ಸಿಗದೇ ಭಾರತ ಸೋಲುವಂತಾಯಿತು.

ಈ ಮಧ್ಯೆ ಪಂದ್ಯದ ಬಳಿಕ ಮಾತನಾಡಿರುವ ಕ್ಯಾಪ್ಟನ್ ಕೊಹ್ಲಿ , ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರು ತಂಡದಲ್ಲಿ ಇರದಿರುವದೇ ತಂಡದ ಸೋಲಿಗೆ ಕಾರಣ ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ. ಆದರೇ ಈಗ ಆ ಉತ್ತಮ ಮನಸ್ಥಿತಿ ಇಲ್ಲದ ಆಟಗಾರರು ಯಾರು ಎಂಬ ಚರ್ಚೆ ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರವಾಗಿದೆ.

ಎಲ್ಲರೂ ಈಗ ಚೇತೆಶ್ವರ ಪೂಜಾರ ಹಾಗೂ ವೇಗಿ ಜಸ್ಪ್ರಿತ್ ಬುಮ್ರಾರತ್ತ ಬೊಟ್ಟು ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 35 ಎಸೆತ ಎದುರಿಸಿದ ಮೇಲೆ ಮೊದಲ ರನ್ ಗಳಿಸಿದ್ದ ಪೂಜಾರ, ನಂತರ ಎರಡಂಕಿಗೂ ತಲುಪಿರಲಿಲ್ಲ. ಅಗತ್ಯಕ್ಕಿಂತ ನಿಧಾನಗತಿಯಲ್ಲಿ ರನ್ ಗಳಿಸಿದ ಕಾರಣ, ರನ್ ರೇಟ್ ಕುಸಿತವಾಗಿ ಇತರ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಸೃಷ್ಠಿಯಾಯಿತು. ಇನ್ನು ದ್ವೀತಿಯ ಇನ್ನಿಂಗ್ಸನಲ್ಲೂ ಸಹ ಪೂಜಾರ ರನ್ ಗಳಿಗೆ ನೋಡಲೇ ಇಲ್ಲ. ಡಿಫೆನ್ಸ್ ಕೂಡ ಮಾಡದೇ ವಿಕೇಟ್ ಚೆಲ್ಲಿದರು. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ರಾಸ್ ಟೇಲರ್ ರವರ ಸುಲಭದ ಕ್ಯಾಚ್ ನ್ನ ಕೈ ಚೆಲ್ಲಿದರು. ಒಂದು ವೇಳೆ ಪೂಜಾರ ಆ ಕ್ಯಾಚ್ ಪಡೆದಿದ್ದರೇ, ನ್ಯೂಜಿಲೆಂಡ್ ತಂಡದ ಉಳಿದ ಬ್ಯಾಟ್ಸಮನ್ ಗಳಿಗೆ ಒತ್ತ ಹೇರಿ ಡ್ರಾಗಾದರೂ ಪ್ರಯತ್ನ ಪಡಬಹುದಿತ್ತು.

ಇನ್ನು ವೇಗಿ ಜಸ್ಪ್ರಿತ್ ಬುಮ್ರಾ ನೀರಸ ಪ್ರದರ್ಶನ ನೀಡಿದರು. ಬುಮ್ರಾ ಎರಡು ಇನ್ನಿಂಗ್ಸ್ ಸೇರಿ 35 ರಿಂದ 40 ಓವರ್ ಬೌಲಿಂಗ್ ಮಾಡಿದರೂ ಒಂದೇ ಒಂದು ವಿಕೇಟ್ ಪಡೆಯಲಿಲ್ಲ. ಮತ್ತೊಂದೆಡೆ ಹಲವಾರು ರನ್ನುಗಳನ್ನ ಬಿಟ್ಟುಕೊಡುವ ಮೂಲಕ, ಬೇರೆ ಬೌಲರ್ ಗಳು ಹಾಕುತ್ತಿದ್ದ ಪರಿಶ್ರಮ, ಬುಮ್ರಾ ಬೌಲಿಂಗ್ ನಲ್ಲಿ ಬರಲಿಲ್ಲ. ಹಾಗಾಗಿಯೇ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸುವಂತಾಯಿತು. ದ್ವೀತಿಯ ಇನ್ನಿಂಗ್ಸ್ ನಲ್ಲಿ ಇದು ಪುನರಾವರ್ತನೆಯಾಯಿತು. ಸ್ಟಾರ್ ಬೌಲರ್ ಬುಮ್ರಾ ಟೇಲ್ ಎಂಡರ್ ಗಳಿಗೆ ಯಾರ್ಕರ್ ಹಾಕಿಯಾದರೂ ಅವರ ವಿಕೇಟ್ ಪಡೆಯಲಿಲ್ಲ. ಇದು ಸಹ ದುಬಾರಿಯಾಯಿತು.

ಮುಂದೆ ಇಂಗ್ಲೆಂಡ್ ತಂಡದ ಸರಣಿಯಲ್ಲಿ ಪೂಜಾರ ಹಾಗೂ ಬುಮ್ರಾ ಇಬ್ಬರು ಸ್ಥಾನ ಕಳೆದುಕೊಳ್ಳುವ ನೀರಿಕ್ಷೆ ಇದೆ. ಪೂಜಾರ ಬದಲು ಕೆ.ಎಲ್.ರಾಹುಲ್ ಹಾಗೂ ಬುಮ್ರಾ ಬದಲು ಮಹಮದ್ ಸಿರಾಜ್ ಆಡುವ ನೀರಿಕ್ಷೆ ಇದೆ. ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಯಾರು ಎಂಬ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.