ಕರೀನಾ ಬದಲು ಸೀತೆಯ ಪಾತ್ರಕ್ಕೆ ಬದಲಿ ನಟಿಯನ್ನು ಸೂಚಿಸಿದ ರಾಜಮೌಳಿ ತಂದೆ, ಸೂಪರ್ ಆಯ್ಕೆ ಎಂದ ನೆಟ್ಟಿಗರು, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕರೀನಾ ಕಪೂರ್ ರವರು ಇದೀಗ ಸೀತಾ ಪಾತ್ರಕ್ಕೆ ಆಯ್ಕೆ ಆಗುವ ಮುನ್ಸೂಚನೆ ಗಳು ಸಿಗುತ್ತಿರುವ ಸಮಯದಲ್ಲಿ ಬಾರಿ ಚರ್ಚೆಗಳು ಆರಂಭವಾಗಿವೆ. ಹೌದು ಸ್ನೇಹಿತರೇ ಅಲೌಕಿಕ್ ದೇಸಾಯಿ ನಿರ್ದೇಶನ ಮಾಡುತ್ತಿರುವ ಸೀತಾ ಸಿನಿಮಾ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂಬುದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಈ ಚಿತ್ರದ ಪಾತ್ರಗಳ ಆಯ್ಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಹೌದು ಸ್ನೇಹಿತರೇ, ಒಂದು ಕಡೆ ರಾವಣನ ಪಾತ್ರಕ್ಕೆ ರಣವೀರ್ ಸಿಂಗ್ ರವರನ್ನು ಒಪ್ಪಿಸಲು ಮಾತುಕತೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಸೀತಾ ಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ರವರನ್ನು ಸಂಪರ್ಕ ಮಾಡಲಾಗಿದೆ ಹಾಗೂ ಕರೀನಾ ಕಪೂರ್ ರವರು ಈ ಪಾತ್ರಕ್ಕೆ ಬರೋಬ್ಬರಿ 12 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದು ಕೂಡ ಸಾಕಷ್ಟು ಚರ್ಚೆಗೆ ಗುರಿಯಾಗುತ್ತಿದೆ.

ಇದೇ ಸಮಯದಲ್ಲಿ ಕರೀನಾ ಕಪೂರ್ ರವರನ್ನು ಸೀತಾ ಮಾತೆಯ ಪಾತ್ರಕ್ಕೆ ಆಯ್ಕೆ ಮಾಡುವುದು ಬೇಡ ಎಂದು ಹಲವಾರು ಜನರು ಧ್ವನಿ ಎತ್ತಿದ್ದಾರೆ. ಈ ಸಮಯದಲ್ಲಿ ಈ ವಿಷಯಕ್ಕೆ ಸಾತ್ ನೀಡಿರುವ ಟಾಪ್ ನಿರ್ದೇಶಕ ರಾಜಮೌಳಿ ರವರ ತಂದೆ ಕೂಡ ಅದೇ ರೀತಿಯ ಮಾತುಗಳನ್ನು ಆಡಿದ್ದು, ಕರೀನಾ ಕಪೂರ್ ರವರಿಗೆ ಸೀತಾ ಪಾತ್ರ ನೀಡುವ ಬದಲು ಬಾಲಿವುಡ್ ಚಿತ್ರರಂಗದ ಮತ್ತೊಬ್ಬರು ನಟಿಯಾಗಿರುವ ಕಂಗನಾ ರಾವತ್ ರವರಿಗೆ ಈ ಪಾತ್ರ ನೀಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇವರ ಈ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Facebook Comments

Post Author: Ravi Yadav