ಇಡೀ ಪ್ರಪಂಚವನ್ನೇ ಗೆಲ್ಲುವಷ್ಟು ಸಾಧಿಸಿದ್ದ, ರತನ್ ಟಾಟಾ ಪ್ರೀತಿಸಿದ ಹುಡುಗಿಯ ಕೈಹಿಡಿಯಲಿಲ್ಲ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತ ದೇಶ ಯಾವಾಗೆಲ್ಲ ಕಷ್ಟ ಸಮಯವನ್ನು ಕಾಣುತ್ತೋ ಆವಾಗೆಲ್ಲಾ ಒಬ್ಬ ದೇಶದ ಜನರ ರಕ್ಷಣೆಗಾಗಿ ಸದಾ ನಿಲ್ಲುತ್ತಾನೆ ಎಂಬುದು ಇಂದಿಗೂ ಸಾಬೀತಾಗಿದೆ. ಹೌದು ನಾವು ಮಾತನಾಡುತ್ತಿರುವುದು ದೇಶ ಕಂಡ ಧೀಮಂತ ವ್ಯಕ್ತಿ ರತನ್ ಟಾಟಾರವರ ಬಗ್ಗೆ. ದೇಶಕ್ಕಾಗಿ ತಮ್ಮ ಆದಾಯದ ಬಹುಪಾಲನ್ನು ವಿನಿಯೋಗಿಸುತ್ತಿರುವ ಇವರು ದೇವರಿಗೆ ಸಮಾನ ಎಂದರು ತಪ್ಪಿಲ್ಲ.

ರತನ್ ಟಾಟಾ ರವರು ದೇಶದ ಜನರಿಗಾಗಿ ಮಾಡಿರುವ ಒಳ್ಳೆಯ ಕೆಲಸ ಒಂದೇ ಎರಡೇ. ರತನ್ ಟಾಟಾ ಅವರು ಇತರರಂತೆ ಶ್ರೀಮಂತರಾಗುವ ಕನಸುಕಂಡಿದ್ದರೆ ಇಂದು ಅವರು ವಿಶ್ವದ ನಂಬರ್ 1 ಶ್ರೀಮಂತರಾಗಿ ಕಾಣಿಸುತ್ತಿದ್ದರು. ಆದರೆ ಅವರು ತಮ್ಮ ಶ್ರೀಮಂತಿಕೆ ಗಿಂತ ದೇಶದ ಜನರ ಉತ್ತಮ ಭವಿಷ್ಯಕ್ಕಾಗಿ ತಮ್ಮ ಆದಾಯವನ್ನು ವಿನಿಯೋಗಿಸುವ ಅಲ್ಲಿ ಸಫಲರಾದರು. ಇದಕ್ಕಾಗಿ ಅವರನ್ನು ಎಲ್ಲರೂ ಇಂದಿಗೂ ಪ್ರೀತಿ ಹಾಗೂ ಗೌರವದಿಂದ ಕಾಣುವ ಏಕೈಕ ವ್ಯಕ್ತಿ.

ಭಾರತ ದೇಶದ ಹಾಗೂ ಪರದೇಶಿಗಳಿಗೂ ಸಹ ಅಜಾತಶತ್ರುವಿನಂತೆ ಕಾಣುವ ಮೇರುವ್ಯಕ್ತಿತ್ವ ರತನ್ ಟಾಟಾರವರ ದ್ದು. ರತನ್ ಟಾಟಾ ರವರು ಮಾಡಿದ ಮಾಡಿರುವ ಒಳ್ಳೆಯ ಕೆಲಸದ ಲಿಸ್ಟ್ ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ. ಮಧ್ಯಮ ವರ್ಗದ ಜನರು ಕೂಡ ಕಾರಿನಲ್ಲಿ ಓಡಾಡುವಂತೆ ಮಾಡಲು ಒಂದು ಲಕ್ಷದಲ್ಲಿ ನ್ಯಾನೊ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದರಿಂದ ಅವರಿಗೆ ಲಾಭವಿಲ್ಲದಿದ್ದರೂ ಮಧ್ಯಮವರ್ಗದ ಜನರ ಕನಸನ್ನು ತನ್ನ ಕನಸೆಂದು ಪೂರ್ಣಗೊಳಿಸಿದರು.

ರತನ್ ಟಾಟಾರವರ ಟಾಟಾ ಸಮೂಹ ಸಂಸ್ಥೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ದೊಡ್ಡ-ದೊಡ್ಡ ಕಂಪನಿಗಳನ್ನು ಹಾಗೂ ಉಪ ಕಂಪನಿಗಳನ್ನು ಹೊಂದಿವೆ. ಅದರಿಂದ ಬರುವ ಆದಾಯ ಇಂದಿನ ವಿಶ್ವದ ಶ್ರೀಮಂತ ವ್ಯಕ್ತಿಗಳ ಆದಾಯಕ್ಕಿಂತಲೂ ದುಪ್ಪಟ್ಟು. ಆದರೂ ಸಹ ರತನ್ ಟಾಟಾ ಅವರು ತಮಗೆ ಬರುವ ಟೋಟಲ್ ಆದಾಯದಲ್ಲಿ 65% ಅಧಿಕ ಬಡ ಜನರ ಏಳಿಗೆಗಾಗಿ ತಮ್ಮ ಟಾಟಾ ಟ್ರಸ್ಟ್ ನ ಮೂಲಕ ವಿನಿಯೋಗಿಸುತ್ತಿದ್ದಾರೆ.

ಇಂದಿಗೂ ನಮ್ಮ ದೇಶದಲ್ಲಿ ಬಡಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಏಕೈಕ ಶ್ರೀಮಂತ ವ್ಯಕ್ತಿಯೆಂದರೆ ಅದು ರತನ್ ಟಾಟಾ ಎಂದು ನಿಸ್ಸಂದೇಹವಾಗಿ ಹೇಳಬಹುದು. ರತನ್ ಟಾಟಾರವರ ಟಾಟಾ ಸಮೂಹ ಸಂಸ್ಥೆಯ ಅಡಿಯಲ್ಲಿ ಅದೆಷ್ಟೋ ಉಪ ಕಂಪನಿ ಗಳಿದ್ದು ಅದರಿಂದ ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ ನಮ್ಮ ನೆಚ್ಚಿನ ರತನ್ ಟಾಟಾ.

ಅವರು ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ಬ್ರಿಟಿಷರು ಒಂದು ಹೋಟೆಲ್ನಲ್ಲಿ ನಾಯಿಗಳಿಗೆ ಹಾಗೂ ಭಾರತೀಯರಿಗೆ ಒಳಗೆ ಬರಲು ಅವಕಾಶವಿಲ್ಲವೆಂದು ಬೋರ್ಡ್ ಹಾಕಿದ್ದರು. ಇದನ್ನು ನೋಡಿ ಕುಪಿತಗೊಂಡ ಟಾಟಾರವರು ಛಲದಿಂದ ಇಂದು ಮುಂಬೈನಲ್ಲಿ ಅತ್ಯಂತ ದೊಡ್ಡ ತಾಜ್ ಹೋಟೆಲ್ ಕಟ್ಟಿ ಇಂದು ಭಾರತೀಯರ ಗತ್ತೇನೆಂದು ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ಆದರೆ ಇಂದು ನಾವು ರತನ್ ಟಾಟಾರವರ ಬಗ್ಗೆ ಹೇಳಲು ಹೊರಟಿರುವ ವಿಷಯ ಬೇರೇನೇ ಇದೆ.

ಹೌದು ನಮಗೆಲ್ಲಾ ತಿಳಿದಂತೆ ರತನ್ ಟಾಟಾ ರವರು ಈಗ 90+ ವಯಸ್ಸಾಗಿದ್ದರೂ ಮದುವೆ ಆಗಿಲ್ಲ ಎಂಬುದು ಗೊತ್ತೇ ಇದೆ. ಆದರೆ ಇದು ಅವರ ತಂದುಕೊಂಡ ನಿರ್ಧಾರವಲ್ಲ ವಿಧಿಯ ಅವರಿಗೆ ಮಾಡಿದ್ದೆಂದು ಅನ್ನ ಬಹುದು. ಹೌದು ಅವರು ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರಬೇಕಾದರೆ ಅಲ್ಲಿನ ಹುಡುಗಿಯೊಬ್ಬಳನ್ನು ಪ್ರೀತಿಸಿದರು ಹುಡುಗಿ ಕೂಡ ಇವರನ್ನು ಪ್ರೀತಿಸಿದಳು. ಇವರಿಬ್ಬರ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು.

ಆದರೆ ಒಮ್ಮೆ ಭಾರತ ಹಾಗೂ ಚೀನಾ ನಡುವೆ ಸಮರದ ಕಾರ್ಮೋಡ ಉದ್ಭವವಾದಾಗ ರತನ್ ಟಾಟಾ ರವರು ಭಾರತಕ್ಕೆ ಮರಳುವ ಪ್ರಮೇಯ ಒದಗಿ ಬಂತು. ಆಗ ಅಮೆರಿಕದ ಹುಡುಗಿ ನೀವು ಹೋಗಬೇಡಿ ನಾವಿಬ್ಬರು ಮದುವೆಯಾಗಿ ಇಲ್ಲೇ ಇರೋಣ ಎಂದರು. ಆದರೆ ಹುಡುಗಿ ಹಾಗೂ ಭಾರತ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಿದಾಗ ರತನ್ ಟಾಟಾ ರವರಿಗೆ ತಮ್ಮ ದೇಶದ ಕೂಗು ಜಾಸ್ತಿಯಾಗಿ ಕೇಳಿದ್ದು. ಹೆತ್ತ ನಾಡು ನನಗಾಗಿ ಕರೆಯುತ್ತಿದೆ ನಾನು ಹೋಗಲೇಬೇಕು ಎಂದು ಅಲ್ಲಿ ಹೋಗಿ ಬಂದಮೇಲೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಅವರು ಭಾರತಕ್ಕೆ ಮರಳಿದರು.

ಇತ್ತ ರತನ್ ಟಾಟಾ ರವರು ಅವರು ಭಾರತಕ್ಕೆ ಮರಳುತ್ತಿದ್ದಂತೆ ಅತ್ತ ಅಮೆರಿಕಾದ ಹುಡುಗಿ ಇನ್ನೊಬ್ಬರನ್ನು ಮದುವೆಯಾಗಿಬಿಟ್ಟಳು. ರತನ್ ಟಾಟಾ ರವರು ಇಂದಿಗೂ ಕೂಡ ತಮ್ಮ ಪ್ರೀತಿಯನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ಆದರೆ ರತನ್ ಟಾಟಾ ರವರನ್ನು ನಾವು ಮೆಚ್ಚಲೇಬೇಕಾದ ಒಂದು ವಿಷಯವೇನೆಂದರೆ ತಮ್ಮ ಜೀವಕ್ಕೆ ಜೀವವಾಗಿದ್ದ ಪ್ರೀತಿಯ ಮುಂದೆ ತಮ್ಮ ದೇಶವೇ ಮಹಾನ್ ಎಂದು ಪ್ರೀತಿಯನ್ನು ತೊರೆದು ಬಂದವರು. ಇದರಲ್ಲಿ ತಿಳಿಯುತ್ತಿದೆ ನೋಡಿ ರತನ್ ಟಾಟಾ ರವರು ಎಂತಹ ದೇಶಭಕ್ತರಾಗಿದ್ದರು ಎಂದು.

ರತನ್ ಟಾಟಾ ರವರು ನಮ್ಮ ದೇಶದ ಯುವಕರಿಗೆ ಹಾಗೂ ಅದೆಷ್ಟು ಶ್ರೀಮಂತರಿಗೆ ಸ್ಪೂರ್ತಿ ಆಗಿದ್ದಾರೆ. ಇಂದಿಗೂ ಸಹ ಟಾಟಾರವರು ತಾನು ಮದುವೆಯಾಗಿಲ್ಲ ಎಂಬ ದುಃಖವನ್ನು ಕಿಂಚಿತ್ತು ಮನದಲ್ಲಿ ಉಳಿಸಿಕೊಂಡಿಲ್ಲ ಅದರ ಬದಲಾಗಿ ಜನರಿಗೆ ತನ್ನ ಶಕ್ತಿಗೂ ಮೇರಿ ಸೇವೆ ಮಾಡುವುದರಲ್ಲಿ ತೊಡಗಿದ್ದಾರೆ ಅದರಲ್ಲೇ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ. ರತನ್ ಟಾಟಾರವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav