ಹೊಸ ಉದ್ಯಮವನ್ನು ಆರಂಭಿಸಿದ ಸ್ಯಾಂಡೆಲ್ವುಡ್ ನ ಜೋಡಿ ನಿಖಿಲ್ ಹಾಗೂ ರೇವತಿ ದಂಪತಿಗಳು ಏನು ಗೊತ್ತಾ??

ಹೊಸ ಉದ್ಯಮವನ್ನು ಆರಂಭಿಸಿದ ಸ್ಯಾಂಡೆಲ್ವುಡ್ ನ ಜೋಡಿ ನಿಖಿಲ್ ಹಾಗೂ ರೇವತಿ ದಂಪತಿಗಳು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಟಾಪ್ ಸೆಲೆಬ್ರೆಟಿ ಜೋಡಿಗಳಲ್ಲಿ ಒಬ್ಬರಾಗಿರುವ ನಿಖಿಲ್ ಹಾಗೂ ರೇವತಿ ರವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಈ ಜೋಡಿಯು ಸಾಮಾಜಿಕ ಜಾಲತಾಣಗಳನ್ನು ಸದ್ದು ಮಾಡುತ್ತಿರುತ್ತದೆ. ವಿಶೇಷವೇನು ಎಂದರೆ ಈ ಜೋಡಿಗೆ ಸಾಕಷ್ಟು ಲಕ್ಷಗಳ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಇದ್ದಾರೆ. ಕೆಲವೊಂದು ಅಭಿಮಾನಿಗಳು ಫೇಸ್ಬುಕ್ ನಲ್ಲಿ ಪೇಜ್ ಗಳನ್ನೂ ಕೂಡ ಸೃಷ್ಟಿ ಮಾಡಿಕೊಂಡು ತಮ್ಮ ಜೋಡಿಯ ಕುರಿತು ಪ್ರತಿಯೊಂದು ಅಪ್ಡೇಟ್ ಗಳನ್ನೂ ಜನರಿಗೆ ತಿಳಿಸುತ್ತಿರುತ್ತಾರೆ.

ಹೀಗೆ ಈ ಜೋಡಿಯು ಒಂದಲ್ಲ ಒಂದು ರೀತಿಯಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ, ಇವರ ಜನ ಪ್ರಿಯತೆ ಹೇಗಿದೆ ಎಂದರೆ ರೇವತಿ ರವರು ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಬೇಕು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಈ ಕುರಿತು ಇಲ್ಲಿಯವರೆಗೂ ರೇವತೀರವರ ಕಡೆಯಿಂದ ಈ ಕುರಿತು ಯಾವುದೇ ಸಿಹಿ ಸುದ್ದಿ ಕೇಳಿ ಬಂದಿಲ್ಲ. ಹಾಗೆಂದು ನಾನು ಸಿನೆಮಾಗೆ ಪ್ರವೇಶ ಮಾಡುವುದಿಲ್ಲ ಎಂದು ಕೂಡ ಎಲ್ಲಿಯೂ ಹೇಳಿಲ್ಲ.

ಇನ್ನು ಇಂದಿನ ವಿಚಾರದ ಕುರಿತು ಮಾತನಾಡುವುದಾದದರೆ ರೇವತಿ ಹಾಗೂ ನಿಖಿಲ್ ಜೋಡಿಯು ಇದೀಗ ಹೊಸ ಉದ್ಯಮವನ್ನು ಆರಂಭಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಸುದ್ದಿ ಕೇಳಿ ಬಂದ ತಕ್ಷಣ ಈ ನವ ಜೋಡಿಯ ಹೊಸ ಕಾರ್ಯಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಹೌದು ಸ್ನೇಹಿತರೇ, ಇದೀಗ ನಿಖಿಲ್ ಹಾಗೂ ಅವರ ಪತ್ನಿ ರೇವತಿ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ದವಾಗಿದ್ದು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಸ್ಥಾಪಿಸುವ ಮೂಲಕ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಈ ಕುರಿತು ಇದೀಗ ಅದ್ಭಿಕೃತ ಆರಂಭ ಮಾತ್ರ ಬಾಕಿ ಉಳಿದಿದೆ.