ಇನ್ಮುಂದೆ ಟಿಕೇಟ್ ಇಲ್ಲದಿದ್ದರೂ ರೈಲಿನಲ್ಲಿ ಪ್ರಯಾಣ ಮಾಡಬಹುದು. ಹೇಗೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.
ಇನ್ಮುಂದೆ ಟಿಕೇಟ್ ಇಲ್ಲದಿದ್ದರೂ ರೈಲಿನಲ್ಲಿ ಪ್ರಯಾಣ ಮಾಡಬಹುದು. ಹೇಗೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.
ನಮಸ್ಕಾರ ಸ್ನೇಹಿತರೇ ಟಿಕೇಟ್ ಕೌಂಟರ್ ನಲ್ಲಿ ರಶ್ ಕಾರಣ ನೀವು ಟಿಕೇಟ್ ತೆಗೆದುಕೊಳ್ಳದೇ ರೈಲು ಹತ್ತಿದ್ದರೇ, ಎಲ್ಲಿ ಟಿ.ಸಿ ನಮ್ಮನ್ನು ಹಿಡಿದುಕೊಂಡು ದಂಡ ಹಾಕಿಬಿಡುತ್ತಾರೋ ಎಂಬ ಭಯದಲ್ಲಿ ನೀವು ಎಂದಾದರೂ ಪ್ರಯಾಣಿಸಿದ್ದರೇ, ಇನ್ನು ಮುಂದೆ ಅಂತಹ ಭಯ ಬೇಡ. ಕೌಂಟರ್ ನಲ್ಲಿ ನೀವು ಟಿಕೇಟ್ ತೆಗೆದುಕೊಳ್ಳದಿದ್ದರೂ, ಪ್ಲಾಟ್ ಫಾರ್ಮ್ ಟಿಕೇಟ್ ನೊಂದಿಗೆ ನೀವು ಚಿಂತೆ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವ ಸೌಲಭ್ಯವನ್ನ ಭಾರತೀಯ ರೈಲ್ವೇ ಈಗ ನೀಡಿದೆ. ಆದರೇ ಕೆಲವೊಂದು ಷರತ್ತುಗಳನ್ನು ಹಾಕಿದೆ. ಆ ಷರತ್ತುಗಳನ್ನು ತಿಳಿಯೋಣ ಬನ್ನಿ.
ನೀವು ರೈಲು ಹತ್ತುವ ಮುನ್ನ ಕಡ್ಡಾಯವಾಗಿ ಪ್ಲಾಟ್ ಫಾರ್ಮ್ ಟಿಕೇಟ್ ಪಡೆದುಕೊಂಡಿರಬೇಕು. ನಂತರ ರೈಲು ಹತ್ತಿ ತಕ್ಷಣ ಅಲ್ಲಿನ ಟಿ.ಟಿ.ಇ ಯನ್ನು ಸಂಪರ್ಕಿಸಿ ಅವರಿಂದ ಖಾತ್ರಿ ಪಡೆದುಕೊಳ್ಳಬೇಕು. ನೀವು ಎಲ್ಲಿಂದ ಹತ್ತಿಲುತ್ತಿರೋ ಅಲ್ಲಿಂದ ನೀವು ತಲುಪುವ ಸ್ಥಳದವರೆಗಿನ ಚಾರ್ಜನ್ನು ಟಿ.ಟಿ.ಇ ಪಡೆಯುತ್ತಾರೆ. ನೀವು ಯಾವ ಬೋಗಿ ಹತ್ತಿರುತ್ತಿರೋ ಆ ಬೋಗಿ ಅಥವಾ ಆ ಕ್ಲಾಸ್ ನ ಚಾರ್ಜ್ ಕೊಡಬೇಕಾಗುತ್ತದೆ. ಒಂದು ವೇಳೆ ನೀವು ಜನರಲ್ ಬದಲು ತಪ್ಪಾಗಿ ಎಸಿ ಬೋಗಿ ಹತ್ತಿಕೊಂಡಿದರೇ, ಟಿ.ಟಿ.ಇ ನಿಮ್ಮಿಂದ ಎಸಿ ಕ್ಲಾಸ್ ನ ಚಾರ್ಜ್ ನ್ನು ತೆಗೆದುಕೊಳ್ಳುತ್ತಾರೆ.
ಈ ವೇಳೆ ನಿಮಗೆ ಟಿಕೇಟ್ ಪಡೆಯುವ ಅವಕಾಶವಿದ್ದು, ಟಿಕೇಟ್ ಪಡೆಯದೇ ಪ್ಲಾಟ್ ಫಾರ್ಮ್ ಟಿಕೇಟ್ ಪಡೆದು ಪ್ರಯಾಣಿಸಿದ್ದರೇ, ಅಂತಹ ಸಂದರ್ಭದಲ್ಲಿ ಟಿ.ಟಿ.ಇ ನಿಮಗೆ ದಂಡ ಹಾಕುವ ಸಂಭವವೂ ಇರುತ್ತದೆ. ಹಾಗಾಗಿ ಬಹಳ ಜಾಗರೂಕರಾಗಿರಬೇಕು. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದು, ನೀವು ಭಾರತೀಯ ರೈಲ್ವೇ ಇಲಾಖೆಯ ಅಧೀಕೃತ ಆಪ್ ಆದ ಐ.ಸಿ.ಆರ್.ಟಿ.ಸಿ ನ್ನು ಬಳಸುತ್ತಿದ್ದರೇ ಈ ವಿಧಾನ ಸುಲಭ. ಆ ಆಪ್ ಮೂಲಕವೇ ನೀವು ಟಿಕೇಟ್ ಪಡೆಯಬಹುದು. ರೈಲ್ವೇ ಟಿಕೇಟ್ ಕೌಂಟರ್ ನಲ್ಲಿ ಕೊನೆ ಕ್ಷಣದಲ್ಲಿ ಉಂಟಾಗುವ ರಶ್ ನಿಂದ ಹಲವಾರು ಪ್ರಯಾಣಿಕರು ಟಿಕೇಟ್ ತೆಗೆದುಕೊಳ್ಳಲಾಗದೇ ಹಲವಾರು ಭಾರಿ ರೈಲನ್ನು ತಪ್ಪಿಸಿಕೊಂಡಿದ್ದರಂತೆ. ಅವರೆಲ್ಲರ ಒಕ್ಕೋರಲಿನ ದೂರಿನ ಮೇಲೆ ರೈಲ್ವೇ ಇಲಾಖೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ರೈಲ್ವೇ ಇಲಾಖೆಯ ಈ ಹೊಸ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.