ವಿಶ್ವಟೆಸ್ಟ್ ಚಾಂಪಿಯನಶಿಪ್ ಗೆ ಮುನ್ನ ಕೊಹ್ಲಿಗೆ ಟೆನ್ಷನ್ ಕೊಡುತ್ತಿರುವ, ತನ್ನದೇ ತಂಡದ ಬೌಲರ್ ಯಾರು ಗೊತ್ತಾ??
ವಿಶ್ವಟೆಸ್ಟ್ ಚಾಂಪಿಯನಶಿಪ್ ಗೆ ಮುನ್ನ ಕೊಹ್ಲಿಗೆ ಟೆನ್ಷನ್ ಕೊಡುತ್ತಿರುವ, ತನ್ನದೇ ತಂಡದ ಬೌಲರ್ ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಮಹತ್ವದ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆ ಕೇವಲ 48 ಘಂಟೆ ಮಾತ್ರ ಬಾಕಿ ಇದೆ. ಎರಡು ತಂಡಗಳು ತಮ್ಮ 15 ಆಟಗಾರರ ಪಟ್ಟಿ ಬಿಡುಗಡೆ ಮಾಡಿ, ಆಡುವ 11 ಆಟಗಾರರು ಯಾರು ಎಂಬ ಹುಳವನ್ನ ಅಭಿಮಾನಿಗಳ ತಲೆಗೆ ಬಿಟ್ಟಿವೆ. ಈ ಮಧ್ಯೆ ಭಾರತೀಯ ತಂಡದ ನಾಯಕ ವಿರಾಟ್ ಕೋಹ್ಲಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಇಂಗ್ಲೆಂಡ್ ಪಿಚ್ ಗಳು ಬೌನ್ಸ್ ಹಾಗೂ ವೇಗಕ್ಕೆ ಹೆಸರುವಾಸಿಯಾಗಿವೆ. ಕೊಂಚ ಫುಟ್ ವರ್ಕ್ ಮಿಸ್ ಆದರೇ ಎಲ್ ಬಿ ಬಲೆಗೆ ಬೀಳುವ ಸಾಧ್ಯತೆಯಿರುತ್ತದೆ. ಅಥವಾ ಶಾಟ್ ಸೆಲೆಕ್ಷನ್ ನಲ್ಲಿ ಕೊಂಚ ಬ್ಯಾಟ್ ಮಿಸ್ ಆದರೇ ಸ್ಲಿಪ್ ಫಿಲ್ಡರ್ ಗೆ ಬಾಲ್ ನ್ನ ಗಿಫ್ಟ್ ಕೊಡುವ ಸಾಧ್ಯತೆ ಇರುತ್ತದೆ. ಆದರೇ ಈಗ ವಿರಾಟ್ ಗೆ ಚಿಂತೆ ಇರುವುದು ತನ್ನ ತಂಡದ ಆಟಗಾರನ ಬಗ್ಗೆ. ಹೇಳಿಕೇಳಿ ಈ ಟೆಸ್ಟ್ ಗೆ ಬಳಸುತ್ತಿರುವುದು ಡ್ಯೂಕ್ ಚೆಂಡುಗಳನ್ನು. ವಿರಾಟ್ ಈ ಹಿಂದೆ ಬೌಲ್ಟ್, ಸೌಥಿ ಹಾಗೂ ವಾಗ್ನರ್ ಎಸೆತಗಳನ್ನು ಎದುರಿಸಿರುವ ಅನುಭವ ಇದೆ. ಆದರೇ ತಮ್ಮದೇ ತಂಡದ ಈ ಬೌಲರ್ ನ ಎಸೆತವನ್ನ ಎದುರಿಸದೇ ಇರುವುದೇ ಈಗ ವಿರಾಟ್ ಕೊಹ್ಲಿಯ ಟೆನ್ಷನ್ ಗೆ ಕಾರಣವಂತೆ.
ಬರೋಬ್ಬರಿ ಆರು ಅಡಿ, ಎಂಟು ಇಂಚು ಇರುವ ಈ ಬೌಲರ್ ಸಾಧಾರಣ ಪಿಚ್ ಗಳಲ್ಲಿ ಬೌಲಿಂಗ್ ಮಾಡಿದರೆ ಬೌನ್ಸ್ ಸಿಗುತ್ತದೆ. ಇನ್ನು ಸೌತಾಂಪ್ಟನ್ ನಂತಹ ಪಿಚ್ ನಲ್ಲಿ ಬೌಲ್ ಮಾಡಿದರೇ ಹೇಗಪ್ಪಾ ಎದುರಿಸೋದು ಎನ್ನುವ ಚಿಂತೆ ವಿರಾಟ್ ಕೊಹ್ಲಿಗೆ ಕಾಡುತ್ತಿದೆ. ಅಷ್ಟಕ್ಕೂ ವಿರಾಟ್ ತಂಡದ ಆ ಬೌಲರ್ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ ಕೈಲ್ ಜೇಮಿಸನ್. ಹೌದು ಕೈಲ್ ಜೇಮಿಸನ್ ವಿರಾಟ್ ಕೊಹ್ಲಿಯವರ ಆರ್ಸಿಬಿ ತಂಡದ ಪ್ರಮುಖ ಸದಸ್ಯ. ನೆಟ್ಸ್ ನಲ್ಲಿ ಕೈಲ್ ಜೇಮಿ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿರಲಿಲ್ಲವಂತೆ. ಈಗ ನೇರವಾಗಿ ವಿರಾಟ್ ಲಂಬೂ ವೇಗಿಯನ್ನ ಎದುರಿಸುತ್ತಿರುವುದೇ ಅಸಲಿ ಟೆನ್ಷನ್ ಗೆ ಕಾರಣವಾಗಿದೆ.
ಹರಾಜಿನಲ್ಲಿ 15 ಕೋಟಿ ಕೊಟ್ಟು ಖರೀದಿಸಿದ್ದ ಆರ್ಸಿಬಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ಕೈಲ್ ಜೇಮಿಸನ್ ತಮ್ಮ ಖರೀದಿಯನ್ನ ಸಮರ್ಥಿಸಿಕೊಂಡಿದ್ದರು. ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ವಿರಾಟ್ ಕೊಹ್ಲಿಗೆ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದೇ ಸದ್ಯ ಎಲ್ಲರ ಮುಂದಿರುವ ಕುತೂಹಲವಾಗಿದೆ.