ಪ್ರಪಂಚದ ಕೆಲವು ದೇಶಗಳಲ್ಲಿ ನಿಷೇಧ ಗೊಂಡಿರುವ ಕೆಲವು ವಿಚಿತ್ರ ವಿಷಯಗಳ ಬಗ್ಗೆ ನಿಮಗೆ ಗೊತ್ತಾ??

ಪ್ರಪಂಚದ ಕೆಲವು ದೇಶಗಳಲ್ಲಿ ನಿಷೇಧ ಗೊಂಡಿರುವ ಕೆಲವು ವಿಚಿತ್ರ ವಿಷಯಗಳ ಬಗ್ಗೆ ನಿಮಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಲವೊಂದು ವಿಚಾರಗಳು ಜಗತ್ತಿನಲ್ಲಿ ನಡೆಯುವುದು ನಮಗೆ ವಿಚಿತ್ರವಾಗಿ ಕಾಣಿಸಬಹುದು ಅದು ಜಗತ್ತಿನ ಆ ಭಾಗದಲ್ಲಿರುವ ಜನರಿಗೆ ದಿನನಿತ್ಯದ ಕರ್ಮ ಎಂಬುದು ಆಗಿರುತ್ತದೆ. ನಮ್ಮಲ್ಲಿ ಸಹಜಕ್ರಿಯೆ ಅಲ್ಲಿನ ಜನರಿಗೆ ವಿಚಿತ್ರವಾಗಿ ಕಾಣಿಸಬಹುದು. ಹೀಗೆ ಜಗತ್ತು ಒಂತರ ಉಳಿದವರು ಕಂಡಂತೆ ಅನ್ನಬಹುದು. ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಜಗತ್ತಿನ ಈ ಕೆಲವು ದೇಶಗಳಲ್ಲಿ 5 ಆಶ್ಚರ್ಯಕರ ಸಂಗತಿಗಳು ನಿಷೇಧವಾಗಿದೆ. ಬನ್ನಿ ಆ ದೇಶಗಳು ಯಾವುವು ಹಾಗೂ ನಿಷೇಧ ಗೊಂಡಿರುವ ವಸ್ತುಗಳು ಅಥವಾ ಕ್ರಿಯೆಗಳು ಏನು ಎಂಬುದನ್ನು ತಿಳಿಸುತ್ತೇವೆ ಬನ್ನಿ.

ಮೊದಲಿಗೆ ಆಸ್ಟ್ರೇಲಿಯದಲ್ಲಿ ಮೀಮ್ಸ್ ನಿಷೇಧ ಅತ್ಯಂತ ಚಿಕ್ಕ ಖಂಡ ವಾಗಿರುವ ಹಾಗೂ ದೇಶವಾಗಿರುವ ಆಸ್ಟ್ರೇಲಿಯಾ ದಲ್ಲಿ ಯಾರಾದರೂ ಮೀಮ್ಸ್ ಮಾಡುವುದು ಹಾಗೂ ಶೇರ್ ಮಾಡೋದು ಇಲ್ಲಿ ಅಪರಾಧ. ಇದನ್ನು ಅಲ್ಲಿನ ನಿಯಮಗಳು ಎತ್ತಿ ಹಿಡಿದಿದೆ. ಇಲ್ಲಿ ಮೀಮ್ಸ್ ಶೇರ್ ಹಾಗೂ ಕ್ರಿಯೇಟ್ ಮಾಡುವುದು ನಿಷೇಧವಾಗಿದ್ದರೂ ಸಹ ಹಲವಾರು ಯುವಜನರು ಇದನ್ನು ಇದನ್ನು ಮೀರಿ ಸಹ ಬೇರೆಯವರ ಕುರಿತಂತೆ ತಮಾಷೆಯ ಹಾಗೂ ಕೆಲವೊಂದು ವಿಷಯ ಪೂರ್ಣ ಉಳ್ಳ ಪೋಸ್ಟ್ಗಳನ್ನು ಮೀಮ್ಸ್ ಗಳನ್ನು ಕ್ರಿಯೇಟ್ ಹಾಗೂ ಶೇರ್ ಮಾಡುವುದು ಇಲ್ಲಿಯವರೆಗೂ ನಿಂತಿಲ್ಲ. ಆದರೆ ನಿಯಮಾನುಸಾರ ಇಲ್ಲಿ ಈ ತರಹದ ಕೆಲಸ ಮಾಡುವುದು ಅಪರಾಧವೇ ಸರಿ.

ತುರ್ಕ್ಮೇನಿಸ್ಥಾನ್ ದಲ್ಲಿ ಲಿಪ್ ಸಿಂಕ್ ಮಾಡೋಹಾಗಿಲ್ಲ ಕೇಳಿದರೆ ಆಶ್ರಯ ಅಂತ ಅನಿಸಿದರೂ ಸಹ ಇದು ಅಲ್ಲಿನ ನಿಯಮಗಳಲ್ಲಿ ಕೂಡ ಒಂದು. ಈ ನಿಯಮವನ್ನು ಆ ದೇಶದ ಮುಖ್ಯಸ್ಥರು 2005 ರಲ್ಲಿ ಮಾಡಿದಂತ ನಿಯಮ. ಇದು ಆ ದೇಶದ ಸಂಸ್ಕೃತಿ ಹಾಗೂ ಆಚರಣೆಗೆ ವಿರುದ್ಧವಾದದ್ದು ಎಂಬುದು ಅವರ ನಂಬಿಕೆ. ಹಾಗಾಗಿ ಆದೇಶದಲ್ಲಿ ಯಾವುದೇ ಹಾಡಿಗೆ ಆಗಲಿ ವಿಡಿಯೋಗ ಲಿಪ್ ಸಿಂಕ್ ಮಾಡುವ ಹಾಗಿಲ್ಲ.

ಕೆನಡಾದ ಕರೆನ್ಸಿ ವಹಿವಾಟು ಕೆನಾಲ ದೇಶದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಮ್ಮ ಭಾರತೀಯ ದೇಶದ ಪಂಜಾಬ್ ಪ್ರಾಂತ್ಯದ ಯುವಕರು ಹೆಚ್ಚು ಹೋಗಿ ಸೆಟಲ್ ಆಗುವ ಜಾಗ ಅಂದರೆ ಅದು ಕೆನಡಾ. ಇನ್ನು ಕೆನಡಾದಲ್ಲಿ 25 ಪೆನ್ನಿಸ್ (ಒಂದು ರೀತಿಯ ರೂಪಾಯಿ ಅಥವಾ ಪೈಸೆ) ಗಿಂತ ಜಾಸ್ತಿ ಟ್ರಾನ್ಸಾಕ್ಷನ್ ಮಾಡೋ ಹಾಗಿಲ್ಲ. ಅದಕ್ಕಿಂತ ಜಾಸ್ತಿ ಯಾಕೆ ಹಣದ ಟ್ರಾನ್ಸಾಕ್ಷನ್ ಮಾಡುವುದಾದರೆ ನೀವು ಕೆನಡಾದ ಅಧಿಕೃತ ಡಾಲರ್ ಕರೆನ್ಸಿಯನ್ನು ಉಪಯೋಗಿಸ ಬೇಕಾಗುತ್ತದೆ. ಇದು ಕನ್ನಡ ದೇಶದಲ್ಲಿರುವ ಕಟ್ಟುನಿಟ್ಟಿನ ನಿಯಮ ಹಾಗೂ ಎಲ್ಲರೂ ಪಾಲಿಸುತ್ತಿರುವ ಅಂತಹ ನಿಯಮ.

ಸಿಂಗಾಪುರದ ವಿಚಿತ್ರ ನಿಯಮ ಅದು ನಮ್ಮ ಭಾರತೀಯರು ಹಾಲಿಡೇ ಪ್ಲಾನ್ ಮಾಡಿದಾಗ ಸಿಂಗಾಪುರ ದೇಶದ ಹೆಸರು ಕೂಡ ಹಲವಾರು ಬಾರಿ ಬರುತ್ತದೆ. ಸಿಂಗಾಪುರ ದಲ್ಲಿರುವ ವಿಚಿತ್ರ ನಿಯಮದ ಕುರಿತಂತೆ ನೀವು ಕೇಳಿದರೆ ಹೈರಾಣು ಆಗೋದು ಗ್ಯಾರಂಟಿ. ಇಲ್ಲಿ ಚುವಿಂಗ್ ಗಮ್ಮನ್ನು ತಿನ್ನೋ ಹಾಗಿಲ್ಲ. ಇದು ಎಷ್ಟರಮಟ್ಟಿಗೆ ಅಪರಾಧವೆಂದರೆ ನೀವು ಒಂದೊಮ್ಮೆ ಚುವಿಂಗ್ ಗಮ್ ಅನ್ನು ತಿಂದರೆ ನಿಮಗೆ ಒಂದು ಲಕ್ಷ ಸಿಂಗಾಪುರ ಡಾಲರ್ ಫೈನ್ ವಿಧಿಸಲಾಗುತ್ತದೆ. ನೀವು ಸಿಂಗಾಪುರಕ್ಕೆ ಹೋದರೆ ಚುಯಿಂಗಮ್ ನಿಂದ ಸ್ವಲ್ಪ ದೂರವನ್ನು ಮೇನ್ಟೇನ್ ಮಾಡೋದು ಒಳ್ಳೆಯದು. ಇದು ನಿಮ್ಮ ಆರೋಗ್ಯ ದೊಂದಿಗೆ ನಿಮ್ಮ ಜೀವನಕ್ಕೂ ಕೂಡ ಸಹಾಯಕ.

ಇನ್ನು ಜಪಾನ್ ದೇಶದ ದೈಹಿಕ ಗಾತ್ರದ ವಿಶೇಷ ನಿಯಮ ಜಪಾನ್ ದೇಶದಲ್ಲಿ 45ರಿಂದ ಇಪ್ಪತ್ತರ ವಯಸ್ಸಿನ ಒಳಗಡೆ ಇರುವವರು ತಮ್ಮ ಸೊಂಟದ ಭಾಗದಲ್ಲಿರುವ ಹೊಟ್ಟೆಯ ಬೊಜ್ಜು ಗಾತ್ರದಲ್ಲಿ ದಪ್ಪ ಆಗಿರಬಾರದು ಅದು ಸ್ಲಿಮ್ ಆಗಿರಬೇಕೆಂಬುದು ಅಲ್ಲಿನ ನಿಯಮ. ಒಂದೊಮ್ಮೆ ಏನಿಲ್ಲವೆಂದರೂ ಅಧಿಕ ಗಾತ್ರ ಅಥವಾ ತೂಕದ ಕುರಿತಂತೆ ಅವರಿಗೆ ಅಥವಾ ಅದನ್ನು ಕಡಿಮೆ ಮಾಡಿಕೊಳ್ಳಲು ಅವರನ್ನು ಟ್ರೈನಿಂಗ್ ಸೆಂಟರಿಗೆ ಕಳಿಸಲಾಗುತ್ತದೆ.

ನೋಡಿದ್ರಲ್ಲ ಸ್ನೇಹಿತರೇ ಎಂತೆಂತಹ ವಿಚಿತ್ರ ನಿಯಮಗಳು ಈ ಭೂಮಿಯ ದೇಶದ ಬಾಗಗಳಲ್ಲಿ ಇವೆಯೆಂದು. ಈ ನಿಯಮಗಳನ್ನು ನೋಡಿ ನೀವು ಕೂಡ ಆಶ್ಚರ್ಯಚಕಿತರಾಗಿ ಇರುತ್ತೀರ. ನೀವು ಆಶ್ಚರ್ಯಪಟ್ಟರು ಈ ದೇಶಗಳಲ್ಲಿ ವಿಚಿತ್ರ ನಿಯಮಗಳು ಇರುವುದಂತೂ ನಿಜ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.