ಮಂಡ್ಯ ರಮೇಶ್ ರವರ ಮಗಳು ಕೂಡ ಖ್ಯಾತ ಕಲಾವಿದೆ, ಈಗ ಹೇಗಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಗೊತ್ತಾ??

ಮಂಡ್ಯ ರಮೇಶ್ ರವರ ಮಗಳು ಕೂಡ ಖ್ಯಾತ ಕಲಾವಿದೆ, ಈಗ ಹೇಗಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಲೆ ಯಾರಪ್ಪನ ಸ್ವತ್ತಲ್ಲಾ ಎಲ್ಲರಿಗೂ ಬಂದೇ ಬರುತ್ತೆ ಅವರಲ್ಲಿ ಪ್ರತಿಭೆಯಿದ್ದರೆ ಎಂಬುದನ್ನು ಸಾರ್ವಕಾಲಿಕವಾಗಿ ನಂಬಿಕೊಂಡು ಬರಲಾಗಿದೆ. ಪ್ರತಿಭೆಯಿದ್ದವರಿಗೆ ಮೊದಲ ಪ್ರಾಶಸ್ತ್ಯ ಎಂಬ ನಿಯಮವನ್ನು ಈ ಜಗತ್ತು ಅಳವಡಿಸಿಕೊಂಡಿದೆ. ಹಾಗಾಗಿ ಈಗ ಜಗತ್ತು ಸಾಮಾನ್ಯ ಜಗತ್ತಿಗಿಂತ ಹೆಚ್ಚಾಗಿ ‌ಸ್ಪರ್ಧಾತ್ಮಕ ಜಗತ್ತಾಗಿ ರೂಪುಗೊಂಡಿದೆ. ಅಲ್ಲದೇ ಇಲ್ಲಿ ಒಮ್ಮೆ ಗೆದ್ದವರ ಮಕ್ಕಳೂ ಸಹ ಅವರಂತೆ ಅವರ ಗೆಲ್ಲುವ ಗುಣವನ್ನು ಹೊಂದಿರುತ್ತಾರೆ ಎಂದಲ್ಲ.

ಅವರ ಮಕ್ಕಳಲ್ಲೂ ಸಹ ಗೆಲ್ಲೋ ಛಲ ಕಲಿಯೋ ಆಸಕ್ತಿ ಇದ್ದರಷ್ಟೇ ಈ ವೇಗವಾಗಿ ಓಡುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ರೇಸ್ ವಿನ್ನರ್ ಆಗೋಕೆ ಸಾಧ್ಯ. ಕನ್ನಡ ಚಿತ್ರರಂಗದಲ್ಲಿ ಮಂಡ್ಯ ರಮೇಶ್ ರವರ ಹೆಸರು ಆವಾಗಾವಾಗ ಮೇಲೆ ಬರ್ತಾನೆ ಇರುತ್ತೆ. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಅವರ ಕೊಡುಗೆ ಅಪಾರ. ನಾಯಕ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ರಂಗ ಭೂಮಿ ಕಲಾವಿದನಾಗಿ, ರಂಗ ಭೂಮಿ ನಿರ್ಮಾಪಕನಾಗಿ, ತಜ್ಞನಾಗಿ ಶಿಕ್ಷಕನಾಗಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಮಂಡ್ಯ ರಮೇಶ್ ವಹಿಸಿಕೊಳ್ಳದ ಜವಾಬ್ದಾರಿಯಿಲ್ಲ ಎಂಬಂತೆ ತಮ್ಮ ಅಮೂಲ್ಯ ಕೊಡುಗೆಯನ್ನು ಈ ಸಿನಿ ಜಗತ್ತಿಗೆ ನೀಡಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದಲೇ ಬಂದಿರುವ ರಮೇಶ್ ತಮ್ಮ ಮಂಡ್ಯ ಸ್ಲಾಂಗ್ ನಲಿ ಮಾತಾಡಿ ಚಿತ್ರಗಳಲ್ಲಿ ತಮ್ಮ ಬ್ರ್ಯಾಂಡ್ ಡೈಲಾಗ್ ಗಳನ್ನು ಮೂಡಿಸಿದರು. ಯಾವುದೇ ಪಾತ್ರವನ್ನು ಸುಲಲಿತವಾಗಿ ಮಾಡುವ ಚಾಕ ಚಕ್ಯತೆ ಮಂಡ್ಯ ರಮೇಶ್ ರವರಿಗಿತ್ತು. ಇದಕ್ಕಾಗಿಯೇ ಆ ದಿನಗಳಲ್ಲಿ ಮಂಡ್ಯ ರಮೇಶ್ ರವರ ಬೇಡಿಕೆ ಗಗನಕ್ಕೇರಿತ್ತು. ಪ್ರತಿಯೊಂದು ಚಿತ್ರಗಳಲ್ಲಿ ಅವರ ದರ್ಶನವನ್ನು.ಸಿನಿರಸಿಕರು ಚಿತ್ರಮಂದಿರಗಳಲ್ಲಿ ಪಡೆಯುತ್ತಿದ್ದರು.

ಈಗಲೂ ಸಹ ಮಂಡ್ಯ ರಮೇಶ್ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಶೋ ನಲ್ಲಿ ಮುದ್ದೇಶ ಎಂಬ ಪಾತ್ರದ ಮೂಲಕ ಈಗಾಗಲೇ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದ್ದಾರೆ. ಈಗಲೂ ಕೂಡ ಅವರ ನಟನೆ ಹಾಗೂ ಹಾಸ್ಯ ಶೈಲಿ ಹಚ್ಚ ಹಸಿರು ಎನಿಸುವಂತಿದೆ. ಯಾಕೆಂದರೆ ಎಷ್ಟಾದರೂ ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಕಲಾವಿದರಲ್ಲವೇ ಅವರಲ್ಲಿ ಮನೋರಂಜನೆಯ ತಿನಿಸು ಸದಾ ತಾಜಾವಾಗಿರುತ್ತದೆ.

ಇನ್ನು ಮಂಡ್ಯ ರಮೇಶ್ ರವರ ಕುಟುಂಬದ ವಿಚಾರಕ್ಕೆ ಬರೋದಾದ್ರೆ, ಮಂಡ್ಯ ರಮೇಶ್ ರವರಿಗೆ 2 ಮಕ್ಕಳನ್ನು ಹೊಂದಿದ ಸುಂದರ ಕುಟುಂಬ. ಮಂಡ್ಯ ರಮೇಶ್ ರವರ ಮುದ್ದಿನ ಮಗಳು ದಿಶಾ ರಮೇಶ್ ತಂದೆಯಂತೆ ರಂಗಭೂಮಿ ಕುರಿತಂತೆ ಅಪಾರವಾಗಿ ಒಲವನ್ನು ಹೊಂದಿರುವಾಕೆ. ಈಗಾಗಲೇ ರಂಗಭೂಮಿ ಕುರಿತಂತೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಲ್ಲದೇ ಈಗಾಗಲೇ ಹಲವಾರು ನಾಟಕಗಳಲ್ಲಿ ಕೂಡ ಭಾಗಿಯಾಗಿದ್ದಾರೆ. ಇನ್ನು ದಿಶಾ ರಮೇಶ್ ಅವರೇ ನಟಿಸಿದ್ದ ‘ಚೋರ ಚರಣ ದಾಸ’ ಇವರಿಗೆ ಅತೀ ದೊಡ್ಡ ಹೆಸರನ್ನೇ ತಂದುಕೊಟ್ಟಿದೆ. ತಂದೆಯ ಹಾದಿಯಲ್ಲಿ ಮಗಳು ಸಾಗುತ್ತಿದ್ದು ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿ ತನ್ನ ತಂದೆಯ ಹೆಸರನ್ನು ಇನ್ನಷ್ಟು ಬೆಳಗಬೇಕೆಂಬ ಆಸೆ ದಿಶಾ ರಮೇಶ್ ರವರದ್ದು.

ಇಷ್ಟೆಲ್ಲಾ ಸಾಧನೆಗೆ ತಮ್ಮ ತಂದೆಯವರೇ ಸ್ಪೂರ್ತಿ ಎನ್ನುವ ದಿಶಾ, ತಾನು ಕೂಡ ಅಪ್ಪನ ಹಾದಿಯನ್ನೇ ತುಳಿಯುವುದಾಗಿ ಹೇಳಿದ್ದಾರೆ. ಇನ್ನು ಇದೇ ಮಾದರಿಯಲ್ಲಿ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ದಿಶಾ ರಮೈಶ್. ಹೌದು ಇದೇ 2019 ರಲ್ಲಿ ಅವರು ನಟಿಸಿದ್ದ ದೇವರ ನಾಡಲ್ಲಿ ಎಂಬ ಚಿತ್ರ ರಿಲೀಸ್ ಆಗಿ ಸದ್ದು ಮಾಡಿತ್ತು. ತನ್ನ ತಂದೆಯಂತೆ ರಂಗಭೂಮಿ ಕ್ಷೇತಕ್ಕೆ ಹಾಗೂ ಸಿನಿಕ್ಷೇತಕ್ಕೆ ತನ್ನದೆ ಆದ ಕೊಡುಗೆ ನೀಡಬೇಕೆಂದು ಆಸೆ ಪಟ್ಟಿದ್ದಾರೆ ಮಂಡ್ಯ ರಮೇಶ್ ರವರ ಪುತ್ರಿ ದಿಶಾ ರಮೇಶ್. ಇವರ ಆಸೆ ಫಲಿಸಲಿ ಗಂದು ಆಶಿಸೋಣ. ದಿಶಾ ರಮೇಶ್ ರವರ ಹಾಗೂ ಅವರ ಧ್ಯೇಯದ ಕುರಿತಂತೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.