ಬಿಗ್ ನ್ಯೂಸ್: ಬದಲಾಯಿತು ಟೆಸ್ಟ್ ನಿಯಮ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಡ್ರಾ ಆದರೇ, ಕಪ್ ಗೆಲ್ಲೋರು ಯಾರು ಗೊತ್ತಾ??

ಬಿಗ್ ನ್ಯೂಸ್: ಬದಲಾಯಿತು ಟೆಸ್ಟ್ ನಿಯಮ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಡ್ರಾ ಆದರೇ, ಕಪ್ ಗೆಲ್ಲೋರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದೇ ಜೂನ್ 18 ರಿಂದ ಜೂನ್ 22 ರವರೆಗೆ ನಡೆಯುತ್ತಿದೆ. ಜೂನ್ 23 ನ್ನ ಐಸಿಸಿ ಅದಾಗಲೇ ಮೀಸಲು ದಿನ ಎಂದು ಘೋಷಿಸಿದೆ. ನಿಯಮಗಳ ಪ್ರಕಾರ ಟೆಸ್ಟ್ ಕ್ರಿಕೇಟ್ ನಲ್ಲಿ ಪ್ರತಿ ದಿನವೂ 90 ಓವರ್ ಗಳ ಆಟ ನಡೆಯಬೇಕು. ಅಂದರೇ 5 ದಿನಕ್ಕೆ ಒಟ್ಟು 450 ಓವರ್ ಗಳ ಆಟ ಆಡಬೇಕು. ಒಂದು ವೇಳೆ ಮಳೆ, ಹವಾಮಾನ ವೈಪರಿತ್ಯ, ಮಂದ ಬೆಳಕು ಮುಂತಾದ ಕಾರಣಗಳಿಂದ ಆಟಕ್ಕೆ ಅಡಚಣೆಗೊಂಡಾಗ, ಆ ಒವರ್ ಗಳನ್ನು ಮೀಸಲು ದಿನದಲ್ಲಿ ಆಟವಾಡಿಸುವಬಹುದು ಎಂದು ಐಸಿಸಿ ಸ್ಪಷ್ಟಪಡಿಸಿತ್ತು.

ಆದರೇ ಒಂದು ವೇಳೆ 450 ಒವರ್ ಗಳ ಆಟವಾಡಿಯೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೇ ಯಾರನ್ನ ವಿಜೇತರನ್ನಾಗಿ ಘೋಷಿಸುತ್ತಿರಿ ಎಂಬ ಪ್ರಶ್ನೆಯನ್ನ ಪ್ರಪಂಚಾದಾದ್ಯಂತ ಇರುವ ಕ್ರಿಕೇಟ್ ಅಭಿಮಾನಿಗಳು ಕೇಳಿದ್ದರು. ಭಾರತೀಯ ರಣಜಿ ಕ್ರಿಕೇಟ್ ನಲ್ಲಿ ಇರುವ ನಿಯಮದಂತೆ ಪ್ರಥಮ ಇನ್ನಿಂಗ್ಸ್ ನಲ್ಲಿ ಯಾರಿಗೆ ಲೀಡ್ ಬಂದಿರುತ್ತದೆಯೋ, ಅವರೇ ವಿಜೇತರಾಗುತ್ತಾರಾ ಎಂಬ ಪ್ರಶ್ನೆ ಕೇಳಿದ್ದರು. ಆದರೇ ಅದಕ್ಕೆಲ್ಲಾ ಉತ್ತರವೆಂಬಂತೆ ಐಸಿಸಿ ಈಗ ತನ್ನ ನಿಯಮವನ್ನ ಸ್ಪಷ್ಟಪಡಿಸಿದೆ.

ಐಸಿಸಿ ಹೇಳಿರುವ ಪ್ರಕಾರ 450 ಒವರ್ ಗಳ ಆಟ ನಡೆದೂ, ಒಂದು ವೇಳೆ ಪಂದ್ಯ ನೀರಸ ಡ್ರಾ ದಲ್ಲಿ ಅಂತ್ಯಗೊಂಡರೇ, ಅಂತಹ ಸನ್ನಿವೇಶದಲ್ಲಿ ಎರಡು ತಂಡಗಳು ವಿಜೇತರು ಎಂದು ಘೋಷಿಸುತ್ತೆವೆ ಎಂದು ಸ್ಪಷ್ಟಪಡಿಸಿದೆ. ಆದರೇ ಇದಕ್ಕೆ ಹಲವು ಕ್ರಿಕೇಟ್ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಟ್ರೋಫಿ ಹಂಚಿಕೊಳ್ಳುವುದಕ್ಕೆ ಇಷ್ಟು ದೀರ್ಘ ಸರಣಿಯನ್ನ ಒಂಬತ್ತು ದೇಶಗಳು ಆಡಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಪಂದ್ಯ ಡ್ರಾ ಆದರೂ ಯಾರಾದರೂ ಒಬ್ಬರನ್ನ ಮಾತ್ರ ವಿಜೇತರು ಎಂದು ಘೋಷಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಟೆಸ್ಟ್ ನಲ್ಲಿ ಯಾರು ಹೆಚ್ಚು ಸೆಷನ್ ಗಳನ್ನ ಗೆಲ್ಲುತ್ತಾರೋ ಅದರ ಅನುಸಾರ ವಿಜೇತರನ್ನು ಘೋಷಿಸಿ. ಪ್ರತಿ ದಿನವೂ 3 ಸೆಷನ್ ಇರುತ್ತದೆ. 5 ದಿನಕ್ಕೆ 15 ಸೆಷನ್ ಆಗುತ್ತದೆ. ಆ 15 ರಲ್ಲಿ ಯಾರು ಹೆಚ್ಚು ಸೆಷನ್ ಗೆಲ್ಲುತ್ತಾರೋ ಅವರನ್ನ ಪಂದ್ಯ ಡ್ರಾ ವಾದರೇ ವಿಜೇತರು ಎಂದು ಘೋಷಿಸಿ ಎಂಬ ಸಲಹೆ ನೀಡಿದ್ದಾರೆ. ಪಂದ್ಯ ಒಂದು ವೇಳೆ ಡ್ರಾ ಆದರೇ ವಿಜೇತರನ್ನು ಹೇಗೆ ಘೋಷಿಸಬೇಕೆಂದು ನಿಮ್ಮ ಸಲಹೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.