ರಸ್ತೆ ಬದಿಯಲ್ಲಿ ಪಂಚರ್ ಹಾಕುತ್ತಿದ್ದ ಯುವತಿಯನ್ನು ನೋಡಿ ಪೊಲೀಸ್ ಮಾಡಿದ್ದೇನು ಗೊತ್ತಾ? ನಿಜಕ್ಕೂ ಗ್ರೇಟ್ ಕಣ್ರೀ.

ರಸ್ತೆ ಬದಿಯಲ್ಲಿ ಪಂಚರ್ ಹಾಕುತ್ತಿದ್ದ ಯುವತಿಯನ್ನು ನೋಡಿ ಪೊಲೀಸ್ ಮಾಡಿದ್ದೇನು ಗೊತ್ತಾ? ನಿಜಕ್ಕೂ ಗ್ರೇಟ್ ಕಣ್ರೀ.

ನಮಸ್ಕಾರ ಸ್ನೇಹಿತರೇ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಜನರು ಒಳ್ಳೆಯದನ್ನು ಮಾಡುತ್ತಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ಕೇಳಬಹುದು ಅಥವಾ ನೋಡಬಹುದು. ಹೌದು ಪೊಲೀಸ್ ಇಲಾಖೆಯಲ್ಲಿ ಕೇವಲ ಒಂದೇ ರೀತಿಯ ಜನರು ಮಾತ್ರ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಪೊಲೀಸರು ವಿವಿಧ ಸಂದರ್ಭಗಳಲ್ಲಿ ತಮ್ಮ ಉತ್ತಮವಾದ ವ್ಯಕ್ತಿತ್ವವನ್ನು ತೋರಿಸಿರುತ್ತಾರೆ. ಅದೇ ರೀತಿ ರಸ್ತೆ ಬದಿಯಲ್ಲಿ ಪಂಚರ್ ಹಾಕುತ್ತಿದ್ದ ಯುವತಿಯನ್ನು ನೋಡಿದ ಒಬ್ಬ ಪೊಲೀಸ್ ತನ್ನ ಜೀಪನ್ನು ನಿಲ್ಲಿಸಿ ಮಾಡಿದ ಕೆಲಸ ನೋಡಿ ಸಾಕಷ್ಟು ಜನರು ಆಶ್ಚರ್ಯ ಪಟ್ಟಿದ್ದಾರೆ.

ಹೌದು ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿರುವಾಗ ಯುವತಿಯೊಬ್ಬಳು ದೊಡ್ಡ ದೊಡ್ಡ ಟೈಯರ್ ಗಳಿಗೆ ಪಂಚರ್ ಹಾಕುತ್ತಿರುವುದನ್ನು ಗಮನಿಸಿದ ಅವರು ಜೀಪನ್ನು ನಿಲ್ಲಿಸಿ ಆಕೆಯನ್ನು ಮಾತನಾಡಿಸಿದ್ದಾರೆ. ಇದರಲ್ಲೇನಿದೆ ವಿಶೇಷ ಎಂದು ನೀವು ಕೇಳುತ್ತಿರಬೇಕಲ್ಲವೇ? ಹಾಗಾದರೆ ಆತ ಆಕೆಯೊಂದಿಗೆ ಮಾಡಿದ್ದು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಸ್ನೇಹ ಎಂಬ ಯುವತಿ ರಸ್ತೆ ಬದಿಯಲ್ಲಿ ಪಂಚರ್ ಹಾಕುವ ಅಂಗಡಿಯನ್ನು ಇಟ್ಟುಕೊಂಡಿದ್ದಳು. ಹೀಗೆ ಒಂದು ದಿನ ಆಕೆ ದೊಡ್ಡ ದೊಡ್ಡ ಟೈಯರ್ ಗಳಿಗೆ ಪಂಚರ್ ಹಾಕುತ್ತಿರುವಾಗ ರಸ್ತೆಯಲ್ಲಿ ಹೋಗುವ ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ನೋಡಿದ್ದಾರೆ. ನಂತರ ಅಧಿಕಾರಿಯು ಜೀಪನ್ನು ನಿಲ್ಲಿಸಿ ಕೆಳಗಿಳಿದು ಯುವತಿಯ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಗಾಬರಿಯಿಂದ ತಲೆಯೆತ್ತಿ ನೋಡಿದಾಗ ಆಕೆಗೆ ತಿಳಿಯದಂತಾಗಿದೆ. ಆಗ ಪೊಲೀಸ್ ಅಧಿಕಾರಿಯೂ ಆಕೆಯನ್ನು ಶಾಂತವಾಗಿ ಮಾತನಾಡಿಸಿ ಇಂದು ರಕ್ಷಾಬಂಧನ ಹಬ್ಬ ಇದು ನೀನು ಯಾಕೆ ನಿಮ್ಮ ಸಹೋದರರಿಗೆ ರಾಖಿ ಕಟ್ಟಲು ಹೋಗಿಲ್ಲ.

ಪ್ರತಿನಿತ್ಯ ಇದೆ ಕೆಲಸ ಮಾಡುತ್ತೀಯಾ?. ಎಂದು ಪ್ರಶ್ನಿಸಿದ್ದಾರೆ. ಆಗ ಈ ಪ್ರಶ್ನೆಗೆ ಮಾತು ಮೌನವಾಗಿ ಯುವತಿ ಕೆಲವು ಕ್ಷಣ ಕಣ್ಣೀರು ಸುರಿಸಿದ್ದಾಳೆ. ನಂತರ ಯುವತಿ ನನಗೆ ಸಹೋದರ ಅಂತ ಯಾರು ಇಲ್ಲ. ನನ್ನ ಜೀವನದಲ್ಲಿ ಇದುವರೆಗೂ ಯಾರಿಗೂ ಕೂಡ ರಾಖಿ ಕಟ್ಟಿಲ್ಲ. ತಂದೆ ತಾಯಿಗೆ ನಾನೊಬ್ಬಳೇ ಮಗಳು.. ಅವರನ್ನು ನೋಡಿಕೊಳ್ಳಲು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಪಂಚರ್ ಹಾಕುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಇನ್ನು ಆ ಯುವತಿಯ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿ ಮನಸ್ಸು ಒಂದು ಕ್ಷಣ ಕರಗಿಹೋಗಿತ್ತು.

ಆಗ ಆ ಪೊಲೀಸ್ ಅಧಿಕಾರಿಯೂ ಜೀಪಿನಲ್ಲಿದ್ದ ಸ್ವಿಚ್ ಬಾಕ್ಸ್ ತೆಗೆದುಕೊಂಡು ಯುವತಿಯ ಕೈಯಲ್ಲಿಟ್ಟು ಅದನ್ನು ತಮಗೆ ಕಟ್ಟಲು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ನಾನು ನಿನಗೆ ಅಣ್ಣ ಎಂದು ಕೂಡ ಅವರು ಹೇಳಿದರು. ಇನ್ನು ಪೊಲೀಸ್ ಅಧಿಕಾರಿಯ ಈ ಮಾತನ್ನು ಕೇಳಿದ ಸ್ನೇಹ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾಳೆ. ನಂತರ ಸಂತೋಷದಿಂದ ಪೊಲೀಸ್ ಅಧಿಕಾರಿಗೆ ರಾಖಿಯನ್ನು ಕಟ್ಟಿದ್ದಾಳೆ.

ನಂತರ ಆ ಪೊಲೀಸ್ ಅಧಿಕಾರಿಯು ನಿನಗೆ ನಿನ್ನ ಜೀವನದಲ್ಲಿ ಏನಾದರೂ ಸಮಸ್ಯೆ ಬಂದರೆ ನನಗೆ ಹೇಳು ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಭರವಸೆಯನ್ನು ನೀಡುತ್ತಾ ಪೊಲೀಸ್ ಅಧಿಕಾರಿಯೂ ಆ ಯುವತಿಗೆ ತನ್ನ ಮೊಬೈಲ್ ನಂಬರ್ ಅನ್ನು ಕೊಟ್ಟು ಬಂದಿದ್ದಾರಂತೆ. ಇನ್ನು ಇವರ ಈ ಮಾನವೀಯತೆಯ ಗುಣಕ್ಕೆ ನಮ್ಮದೊಂದು ಸಲಾಂ. ಇನ್ನು ಇಂತಹ ಅಧಿಕಾರಿಗಳು ನಮ್ಮ ಪೊಲೀಸ್ ಇಲಾಖೆಗೆ ಮತ್ತಷ್ಟು ಬರಲಿ ಎಂದು ನಾವು ಈ ಮೂಲಕ ಹಾರೈಸೋಣ.