ಸ್ಯಾಂಡೆಲ್ವುಡ್ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬುವ ಸೂಚನೆ ನೀಡುತ್ತಿರುವ ನಟಿ, ಯಾರು ಗೊತ್ತೆ??
ಸ್ಯಾಂಡೆಲ್ವುಡ್ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬುವ ಸೂಚನೆ ನೀಡುತ್ತಿರುವ ನಟಿ, ಯಾರು ಗೊತ್ತೆ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಂಗದಲ್ಲಿ ಹಲವರು ಸ್ಟಾರ್ ನಟಿಯರು ತಮ್ಮ ಅಭಿನಯದ ಮೂಲಕ ಹಾಗೂ ತಮ್ಮ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನೂ ಕನ್ನಡ ಚಿತ್ರಗಳ ಇಂತಹ ನಟಿಯರಲ್ಲಿ ನಟಿ ರಮ್ಯಾ ಕೂಡ ಒಬ್ಬರು. ಹೌದು ಕನ್ನಡ ಚಿತ್ರರಂಗದಲ್ಲಿ ಹಲವರು ಸ್ಟಾರ್ ನಟರೊಂದಿಗೆ ಶನಿ ಪರದೆಯನ್ನು ಹಂಚಿಕೊಳ್ಳುವ ಮೂಲಕ ನಟಿ ರಮ್ಯಾ ಅವರು ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.
ನಟಿ ರಮ್ಯಾ ಅವರು ಪುನೀತ್ ರಾಜಕುಮಾರ್ ಅಭಿನಯದ 2003ರಲ್ಲಿ ತೆರೆಕಂಡ ‘ಅಭಿ’ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ಇವರು ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದು 2004ರಲ್ಲಿ ತೆರೆಕಂಡ ಕುತ್ತು ಎಂಬ ತಮಿಳು ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನು ಈ ಚಿತ್ರಗಳ ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರಿಗೆ ಕನ್ನಡದ ಆಕಾಶ್, ಗೌರಮ್ಮ ಹಾಗೂ ಅಮೃತದಾರೆ ಸಿನಿಮಾಗಳು ಕನ್ನಡದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟವು. ಹೌದು ಈ ಸಿನಿಮಾಗಳು ಹಿಟ್ ಆದ ನಂತರ ನಟಿ ರಮ್ಯಾ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.
ಹೌದು ನಟಿ ರಮ್ಯಾ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಸ್ಯಾಂಡಲ್ ವುಡ್ ಕ್ವೀನ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಇನ್ನು ನಟಿ ರಮ್ಯಾ ಅವರು ಜೊತೆ ಜೊತೆಯಲಿ, ತನನಂ ತನನಂ, ಮುಸ್ಸಂಜೆ ಮಾತು, ಅರಸು, ರಂಗ ಎಸ್ ಎಸ್ ಎಲ್ ಸಿ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ರಂಗಕ್ಕೆ ಕೂಡ ಕಾಲಿಟ್ಟರು.
ಹೌದು 2012ರಲ್ಲಿ ಯುವ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು, 2013ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಪರ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಆದರೆ 2014ರ ಜನರಲ್ ಎಲೆಕ್ಷನ್ ನಲ್ಲಿ ಸೋಲನ್ನು ಅನುಭವಿಸಿದರು. ಹೀಗೆ ಅವರು ಸಿನಿಮಾರಂಗ ಹಾಗೂ ರಾಜಕೀಯ ರಂಗ ಎರಡು ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದು ಇದೀಗ ಮತ್ತೋರ್ವ ನಟಿ ಅವರ ಸ್ಥಾನವನ್ನು ತುಂಬಲು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಹಾಗಾದರೆ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಇದೀಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬಲು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು ನೋಡಲು ದುಂಡಾಗಿ ಮುದ್ದಾದ ಮುಖ ಹೊಂದಿರುವ ನಟಿ ಸಂಜನಾ ಆನಂದ್ ಇದೀಗ ರಮ್ಯಾ ಅವರ ಸ್ಥಾನವನ್ನು ತುಂಬಲಿದ್ದಾರೆ. ಈಗಾಗಲೇ ಅವರು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಂತರ ಅವರು ಮಳೆಬಿಲ್ಲು ಎಂಬ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.
ಅಷ್ಟೇ ಅಲ್ಲದೆ ದುನಿಯಾ ವಿಜಯ್ ಅವರ ಸಲಗ, ಅಜಯ್ ರಾವ್ ಅವರೊಂದಿಗೆ ಶೋಕಿವಾಲ, ಇನ್ನು ಚಿರಂಜೀವಿ ಸರ್ಜಾ ಅವರೊಂದಿಗೆ ಕುಷ್ಕ ಮತ್ತು ಕ್ಷತ್ರಿಯ ಎಂಬ ಸಿನಿಮಾಗಳಲ್ಲಿ ಕೂಡ ನಟಿಸಿದ್ದು ತೆರೆ ಕಾಣಬೇಕಾಗಿದೆ ಅಷ್ಟೇ. ಇನ್ನೂ ಅವರು ಹನಿಮೂನ್ ಎಂಬ ವೆಬ್ ಸಿರೀಸ್ ನಲ್ಲಿ ಕೂಡ ನಟಿಸಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಸಂಜನಾ ಆನಂದ್ ಅವರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ.