ರವಿ ಶಾಸ್ತ್ರೀ ರವರ ನಂತರ ಭಾರತದ ಕೋಚ್ ಆಗಬಲ್ಲ ಟಾಪ್ 5 ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತೇ??
ರವಿ ಶಾಸ್ತ್ರೀ ರವರ ನಂತರ ಭಾರತದ ಕೋಚ್ ಆಗಬಲ್ಲ ಟಾಪ್ 5 ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ವರ್ಷದ ಅಂತ್ಯದಲ್ಲಿ ರವಿ ಶಾಸ್ತ್ರಿ ರವರ ಭಾರತೀಯ ಕ್ರಿಕೆಟ್ ತಂಡದ ಕೋಚ್ ನ ಅಧಿಕಾರದ ಅವಧಿ ಒಪ್ಪಂದದ ಪ್ರಕಾರ ಮುಕ್ತಾಯಗೊಳ್ಳಲಿದೆ. ಹಾಗಾದರೆ ಈ ಹುದ್ದೆಗೆ ಬಿಸಿಸಿಐ ಮುಂದೆ ಯಾರನ್ನು ನೇಮಿಸ ಬಹುದ ಎಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಯೋಣ.
ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಹಲವಾರು ಕೋಚ್ ಗಳನ್ನು ಕಂಡಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಸಂದರ್ಭದಲ್ಲಿ ಸೌತ್ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅತ್ಯಂತ ಯಶಸ್ವಿಯಾಗಿ ಕೋಚಿಂಗ್ ಹುದ್ದೆಯನ್ನು ನಿಭಾಯಿಸಿದ್ದರು ಹಾಗೂ ವರ್ಲ್ಡ್ ಕಪ್ ವಿನ್ನಿಂಗ್ ಕೋಚ್ ಆಗಿ ಹೊರಹೊಮ್ಮಿದರು. ನಂತರದ ದಿನಗಳಲ್ಲಿ ರವಿ ಶಾಸ್ತ್ರಿ , ಅನಿಲ್ ಕುಂಬ್ಳೆ ಮತ್ತೆ ರವಿ ಶಾಸ್ತ್ರಿ ಹೀಗೆ ನಡೆದಿತ್ತು. ಈಗ ರವಿ ಶಾಸ್ತ್ರ ರವರ 2 ನೇ ಅವಧಿ ಕೂಡ ಈ ವರ್ಷದ ಅಂತ್ಯಕ್ಕೆ ಮುಗಿಯೋದ್ರಿಂದ . ಈ ಸ್ಥಾನಕ್ಕೆ ಸ್ಪರ್ಧಿಸಬಲ್ಲ ಸಂಭಾವ್ಯರ ಪಟ್ಟಿ ಇಲ್ಲಿದೆ.
ಮೊದಲನೆಯದಾಗಿ ವೀರೇಂದ್ರ ಸೆಹ್ವಾಗ್: ವೀರೇಂದ್ರ ಸಿಂಗ್ ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಹಾಗೂ ವಿಸ್ಪೋ’ಟ’ಕಾರಿ ಶೈಲಿಯ ರೈಟ್ ಹ್ಯಾಂಡ್ ಓಪನಿಂಗ್ ಬ್ಯಾಟ್ಸ್ಮನ್. ಟೆಸ್ಟ್ ನಲ್ಲಿ ಕೂಡ ಟಿ-ಟ್ವೆಂಟಿ ಮಾದರಿಯಲ್ಲಿ ಬ್ಯಾಟಿಂಗ್ ಮಾಡೋ ಮಾಯಾವಿ. ಇವರು ಬ್ಯಾಟಿಂಗ್ ಗೆ ಬಂದರೆ ಎದುರಾಳಿ ತಂಡದ ಕ್ಷೇತ್ರ ರಕ್ಷಕರು ಹಾಗೂ ಬೌಲರ್ಗಳು ಭಯಪಡುತ್ತಿದ್ದ ಕಾಲವೊಂದಿತ್ತು. ಇವರು ಐಪಿಎಲ್ ಪಂಜಾಬ್ ತಂಡದ ಕೋಚಿಂಗ್ ಮಾಡಿದ ಅನುಭವವಿರೋದ್ರಿಂದ ಭಾರತ ತಂಡದ ಮುಂದಿನ ಕೋಚ್ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಎನ್ನಬಹುದು.
ಎರಡನೇಯದಾಗಿ ಆಶೀಶ್ ನೆಹ್ರಾ: ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಪರಿಣಾಮಕಾರಿ ಬೌಲಿಂಗ್ ಮೂಲಕ ಪ್ರಖಾತರಾಗಿದ್ದವರು ಆಶೀಶ್ ನೆಹ್ರಾ. ಆಶಿಶ್ ನೆಹ್ರಾ ಟೆಸ್ಟ್ ನಲ್ಲಿ 17 ಪಂದ್ಯಗಳಲ್ಲಿ 44 ವಿಕೆಟ್ , ಏಕದಿನ ಪಂದ್ಯಗಳಲ್ಲಿ 120 ಮ್ಯಾಚ್ ನಲ್ಲಿ 157 ವಿಕೆಟ್ ಹಾಗೂ ಟಿ-ಟ್ವೆಂಟಿಯಲ್ಲಿ 27 ಪಂದ್ಯಗಳಲ್ಲಿ 34 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಐಪಿಎಲ್ ನಲ್ಲಿ ಕೂಡ 88 ಪಂದ್ಯಗಳಲ್ಲಿ 106 ವಿಕೆಟ್ ಉರುಳಿಸಿದ್ದಾರೆ. ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಕೂಡ ಇದೆ. ನೆಹ್ರಾ ಕೂಡ ಕೋಚ್ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು.
ಮೂರನೆಯದಾಗಿ ಜಹೀರ್ ಖಾನ್: ಜಹೀರ್ ಅಂದಾಕ್ಷಣ ನೆನಪಾಗೋದು 2011 ರ ವರ್ಲ್ಡ್ ಕಪ್ ಸರಣಿ. ಪ್ರತಿಯೊಂದು ಪಂದ್ಯದಲ್ಲಿ ಇವರ ಇನ್ ಸ್ವಿಂಗ್ ಎಸೆತಗಳಿಗೆ ತಲೆಬಾಗದ ಎದುರಾಳಿ ಆಟಗಾರನೇ ಇರಲಿಲ್ಲ. ಐರ್ಲೆಂಡ್ ತಂಡದ ವಿರುದ್ಧವಂತೂ ಮೊದಲ ಓವರ್ ನಲ್ಲೇ 2 ವಿಕೆಟ್ ಉದುರಿಸಿ ತಾನು ಖತರ್ನಾಕ್ ಬೌಲರ್ ಎಂದು ಸಾಬೀತುಪಡಿಸಿದ್ದರು. ಬಾರತದ ಟಾಪ್ ಸ್ವಿಂಗ್ ಫಾಸ್ಟ್ ಬೌಲರ್ ಗಳ ಹೆಸರಲ್ಲಿ ಜಹೀರ್ ಖಾನ್ ಅಗ್ರಶ್ರೇಣಿಯಲ್ಲಿ ನಿಲ್ಲುತ್ತಾರೆ. ಈಗಾಗಲೇ ಐಪಿಎಲ್ ನಲ್ಲಿ ಜಹೀರ್ ಖಾನ್ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇವರು ಕೂಡ ಸಮರ್ಥ ಅಭ್ಯರ್ಥಿ ಎಂದೇ ಹೇಳಬಹುದು.
ಇನ್ನು ನಾಲ್ಕನೆಯದಾಗಿ ವಿ.ವಿ.ಎಸ್ ಲಕ್ಷ್ಮಣ್: ಮುತ್ತಿನ ನಗರಿ ಹೈದರಾಬಾದ್ ನ ಸಾಲಿಡ್ ಬ್ಯಾಟ್ಸ್ಮನ್ ಲಕ್ಷ್ಮಣ್ . ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ , ಅದರಲ್ಲೂ ವಿಶೇಷವಾಗಿ ಟೆಸ್ಟ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಖ್ಯಾತರಾದವರು. ಪ್ರತಿಯೊಂದು ಬಾರಿ ತಂಡ ಸಂಕಷ್ಟಕ್ಕೆ ಬಿದ್ದ ಸಂದರ್ಭದಲ್ಲಿ ಜವಬ್ದಾರಿಯನ್ನು ತಮ್ಮ ಹೆಗಲ ಮೇಲಿಟ್ಟು ಮೇಲೆತ್ತಿದರವು , ಈ ಕೋಚ್ ಜವಾಬ್ದಾರಿಯನ್ನು ಕೂಡ ಲಕ್ಷ್ಮಣ್ ಯಶಸ್ವಿಯಾಗಿ ಹೊರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಕೊನೆಯದಾಗಿ ರಾಹುಲ್ ದ್ರಾವಿಡ್: ಇತ್ತೀಚಿನ ದಿನಗಳಲ್ಲಿ ಇಂದಿರಾ ನಗರ್ ಕಾ ಗುಂಡಾ ಅಂತ ಎಲ್ಲರಿಂದ ಪ್ರೀತಿಯಿಂದ ಕರೆಯಲ್ಪಡುವ ಭಾರತ ಕ್ರಿಕೆಟ್ ತಂಡದ ವಾಲ್ , ಎಲ್ಲರ ನೆಚ್ಚಿನ ಜ್ಯಾಮಿ ” ರಾಹುಲ್ ದ್ರಾವಿಡ್ ” ಈ ಸ್ಥಾನಕ್ಕೆ ಎಲ್ಲರಿಗಿಂತ ಬೆಸ್ಟ್ ಆಯ್ಕೆ ಎಂದರೂ ತಪ್ಪಾಗಲಾರದು. ಯಾಕೆಂದರೆ ಇವರ ಕೋಚಿಂಗ್ ನ ಮೇಲೆಯೇ ಅಂಡರ್ 19 ವರ್ಲ್ಡ್ ಕಪ್ ದೊರಕಿದೆ. ಮಾತ್ರವಲ್ಲದೇ ಈಗ ಭಾರತ ತಂಡಕ್ಕಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ , ರಿಶಭ್ ಪಂತ್ , ಪೃಥ್ವಿ ಶಾ, ಹೀಗೆ ಹಲವಾರು ಯುವ ಆಟಗಾರರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಈ ಸಾಧನೆಯನ್ನು ಸಾಧಿಸಿದವರು. ಹಾಗಾಗಿ ರಾಹುಲ್ ದ್ರಾವಿಡ್ ಕೂಗ ಈ ರೇಸ್ ನಲ್ಲಿ ಪ್ರಬಲ ಪ್ರತಿಸ್ಪರ್ಧಿ. ಇನ್ನು ನಿಮ್ಮ ಪ್ರಕಾರ ಈ ಐವರಲ್ಲಿ ಯಾರು ಕೋಚ್ ಆಗಬಹುದು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.