ಭಾರತ ತಂಡದ ಪ್ಲೇ ಬಾಯ್ ಕೆ ಎಲ್ ರಾಹುಲ್ ರವರು, ಡೇಟ್ ಮಾಡುತ್ತಿರುವ 5 ಬಾಲಿವುಡ್ ನಟಿಯರು ಯಾರ್ಯಾರು ಗೊತ್ತಾ??

ಭಾರತ ತಂಡದ ಪ್ಲೇ ಬಾಯ್ ಕೆ ಎಲ್ ರಾಹುಲ್ ರವರು, ಡೇಟ್ ಮಾಡುತ್ತಿರುವ 5 ಬಾಲಿವುಡ್ ನಟಿಯರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ರಂಗದ ನ್ಯೂ ಸೂಪರ್ ಸ್ಟಾರ್ ಎಂದೇ ಹೇಳಬಹುದು. ಭಾರತೀಯ ಕ್ರಿಕೆಟ್ ತಂಡ ಯಾವಾಗೆಲ್ಲ ಸೋಲಿನತ್ತ ಮುಖ ಮಾಡಿದಾಗ ರಕ್ಷಿಸುವ ಆಪತ್ಭಾಂಧವ ಕೆ.ಎಲ್. ರಾಹುಲ್. ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ, ಡೇಟಿಂಗ್ ವಿಷಯದಲ್ಲಿ ಕೂಡ ಕೆ.ಎಲೊ. ರಾಹುಲ್ ಆಲ್ ರೌಂಡರ್ ಪ್ರದರ್ಶನವನ್ನು ತೋರಿದ್ದಾರೆ. ಈಗಾಗಲೇ ರಾಹುಲ್ 5 ಜನ ನಟಿಮಣಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಎಂದು ನೋಡೋಣ.

ಮೊದಲನೆಯದಾಗಿ ಆಕಾಂಕ್ಷ ರಂಜನ್ ಕಪೂರ್: ಬಾಲಿವುಡ್ ನ ಹಿಟ್ ಸಿನಿಮಾಗಳಾದಂತಹ ಬತ್ತಿ ಗುಲ್ ಮೀಟರ್ ಚಾಲು , ವೆಡ್ಡಿಂಗ್ ಪುಲಾವ್ ಹಾಗೂ ಇತ್ತೀಚಿಗಷ್ಟೇ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಗಿಲ್ಟಿ ವೆಬ್ ಸೀರಿಸ್ ನಲ್ಲಿ ನಟಿಸಿ ಪ್ರಖ್ಯಾತಿ ಪಡೆದಿರುವ ನಟಿ ಆಕಾಂಕ್ಷ ರಂಜನ್ ಕಪೂರ್ ರವರೊಂದಿಗಿನ ಕೆ.ಎಲ್. ರಾಹುಲ್ ರವರ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದನ್ನು ಮಾಡಿತ್ತು. ಈ ಫೋಟೋ ವೈರಲ್ ಆದ ನಂತರ ಇವರಿಬ್ಬರ ಸಂಬಂಧದ ಕುರಿತಂತೆ ಹಲವಾರು ಊಹಾಪೋಹಗಳು ಎದ್ದು ನಂತರದ ದಿನಗಳಲ್ಲಿ ತಣ್ಣಗಾಗಿತ್ತು. ನಟಿ ಆಕಾಂಕ್ಷ ರಂಜನ್ ಕಪೂರ್ ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ಆಪ್ತ ಬಳಗದಲ್ಲಿರುವ ನಟಿ.

ಎರಡನೆಯದಾಗಿ ನಿಧಿ ಅಗರ್ವಾಲ್: ಬಾಲಿವುಡ್ ನ ಟೈಗರ್ ಶ್ರಾಫ್ ನಟನೆಯ ಮುನ್ನಾ ಮೈಕೆಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ತೆಲುಗಿನ ಟಾಲಿವುಡ್ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಮಿಂಚುತ್ತಿರುವ ನಿಧಿ ಅಗರ್ವಾಲ್ ರವರೊಂದಿಗೆ ಕೆ.ಎಲ್. ರಾಹುಲ್ ರವರ ಹೆಸರು ಹಲವಾರು ಬಾರಿ ತಳುಕು ಹಾಕಿಕೊಂಡಿತ್ತು. ಇಬ್ಬರು ಒಟ್ಟಿಗೆ ಡಿನ್ನರ್ ಗೆ ಹೋಗಿದ್ದಾಗಿ ಕೂಡ ಒಪ್ಪಿಕೊಂಡಿದ್ದರು. ಅಂದ ಹಾಗೇ ನಿಧಿ ಅಗರ್ವಾಲ್ ಕೂಡ ಬೆಂಗಳೂರು ಮೂಲದವರು. ಇವರಿಬ್ಬರ ಲವ್ ಕಹಾನಿಯ ಸುದ್ದಿಗಳು ಮೀಡಿಯಾ ದಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಲು ಸಿಗುತ್ತಿದ್ದಿದಂತೂ ನಿಜ.

ಮೂರನೆಯದಾಗಿ ಸೋನಮ್ ಬಜ್ವಾ: ಪಂಜಾಬ್ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ನಟಿಯರಲ್ಲಿ ಸೋನಮ್ ಬಾಜ್ವ ಕೂಡ ಒಬ್ಬರು . ಹಿಂದಿ ಚಿತ್ರರಂಗದಲ್ಲಿ ಕೂಡ ಸೋನಮ್ ಖ್ಯಾತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರರಂಗದ ಹಲವಾರು ಸಿನಿಮಾಗಳಲ್ಲಿ ಕಕಡ ಕಾಣಿಸಿಕೊಂಡಿದ್ದಾರೆ. ಒಮ್ಮೆ ಈಕೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸೂರ್ಯಾಸ್ತದ ಫೋಟೋ ಹಾಕಿದ್ದಾಗ ಕೆ.ಎಲ್. ರಾಹುಲ್ ರವರ ಕಾಮೆಂಟ್ ಮೀಡಿಯಾಗಳಲ್ಲಿ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಇದೆ ಎಂದು ಗುಲ್ಲೆಬ್ಬಿಸಿತ್ತು.

ನಾಲ್ಕನೆಯದಾಗಿ ಸೋನಲ್ ಚೌಹಾಣ್: ಬಾಲಿವುಡ್ ನ ಕಿಸ್ಸಿಂಗ್ ಲೆಜೆಂಡ್ ಇಮ್ರಾನ್ ಹಶ್ಮಿರವರ ಜನ್ನತ್ ಚಿತ್ರದ ಮೂಲಕ 2008 ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿ ಆ ಚಿತ್ರದ ಮೂಲಕ ಜಗತ್ತಿನಾದ್ಯಂತ ಉತ್ತಮ ಪ್ರಶಂಸೆಯನ್ನು ಗಳಿಸಿ ಬಾಲಿವುಡ್ ನ ಖ್ಯಾತ ನಟಿಯರ ಸಾಲಿನಲ್ಲಿ ಶಾಮೀಲಾಗಿದ್ದವರು ನಟಿ ಸೋನಲ್ ಚೌಹಾಣ್. 2018ರ ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಕೆ.ಎಲ್. ರಾಹುಲ್ ಭಾರತೀಯ ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಒದ್ದಾಡುತ್ತಿರುವ ಸಂದರ್ಭದಲ್ಲಿ, ರಾಹುಲ್ ಸ್ಥಾನ ಪಡೆಯಲು ಯಶಸ್ವಿಯಾದ ಸಂದರ್ಭದಲ್ಲಿ ಟ್ವೀಟ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದರು. ಈ ಟ್ವೀಟ್ ನ ನಂತರ ಮಾಧ್ಯಮಗಳಲ್ಲಿ ಇವರಿಬ್ಬರ ಬಗ್ಗೆ ಬಹಳಷ್ಟು ಗುಸುಗುಸು ಚರ್ಚೆಯಾಗಿತ್ತು.

ಐದನೆಯದಾಗಿ ಅಥಿಯಾ ಶೆಟ್ಟಿ: ಕನ್ನಡ ಮಣ್ಣಿನ ನ ಹುಡುಗ , ಕರಾವಳಿಯ ಪುತ್ರ , ಬಾಲಿವುಡ್ ಅಂಗಳದಲ್ಲಿ ಎಲ್ಲರಿಂದ ಪ್ರೀತಿಯಿಂದ ಅಣ್ಣ ಕರೆಯಲ್ಪಡುವ ನಟ ಸುನಿಲ್ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಸದ್ಯಕ್ಕೆ ಕೆ.ಎಲ್. ರಾಹುಲ್ ರವರ ಗರ್ಲ್ ಫ್ರೆಂಡ್ ಆಗಿ ಗುರುತಿಹಿಕೊಂಡಿದ್ದಾರೆ. ಅಥಿಯಾ ನಟಿಯಾಗಿ ಯಾವುದೇ ಗಮನಾರ್ಹ ಸಾಧನೆ ಮಾಡಿಲ್ಲದಿದ್ದರೂ ಕೆ.ಎಲ್. ರಾಹುಲ್ ರವರೊಂದಿಗಿನ ಸಂಬಂಧದಿಂದಾಗಿ ಈಗಾಗಲೇ ಮಾಧ್ಯಮಗಳ ಚರ್ಚೆಯಲ್ಲಿ ಆಗಾಗಾ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರು ಜೊತೆಯಿರುವ ಫೋಟೋಗಳು ಆಗಾಗ್ಗೆ ಇವರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿರುವುದು ಇವರಿಬ್ಬರು ಖಂಡಿತವಾಗಿಯೂ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ದೃಢಗೊಂಡಿವೆ. ಮುಂದಿನ ದಿನಗಳಲ್ಲಿ ರಾಹುಲ್ ಯಾರೊಂದಿಗೆ ಕಾಣಿಸಿಕೊಳ್ಳುತ್ತಾರೆ ಅಥವಾ ಅಥಿಯಾ ಶೆಟ್ಟಿಯವರನ್ನೇ ವಿವಾಹ ಆಗುತ್ತಾರಾ ಕಾದು ನೋಡಬೇಕಾಗಿದೆ.