ಯಪ್ಪಾ, ಪುಷ್ಪ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಕೇಳಿದ ಸಂಭಾವನೆ ಎಷ್ಟು ಗೊತ್ತಾ?? ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿ ಈಗ ತಮ್ಮ ಸಿನಿಜೀವನದ ಉತ್ತುಂಗದಲ್ಲಿ ನಿಂತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಕ್ಯೂಟ್ ನೆಸ್ ನ ಛಾಪನ್ನು ಮೂಡಿಸಿದ್ದು , ಬಾಲಿವುಡ್ ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಅದರಲ್ಲಿ ಒಂದು ಚಿತ್ರ ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ರವರ ಜೊತೆ ಕೂಡ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣನವರು ಇಷ್ಟು ಬ್ಯುಸಿ ಹಾಗೂ ಮೋಸ್ಟ್ ವಾಂಟೆಡ್ ನಟಿಯಾಗಿರೋದ್ರಿಂದ ಅವರ ಸಂಪಾದನೆಯ ಕುರಿತಂತೆ ಹಲವಾರು ಕುತೂಹಲಗಳು ಈಗಾಗಲೇ ಅಭಿಮಾನಿಗಳಿಗೆ ಹುಟ್ಟಿರೋದು ಸಹಜ.

ಟಾಲಿವುಡ್ ನ ಸ್ಟೈಲಿಶ್ & ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ , ಏಸ್ ಡೈರೆಕ್ಟರ್ ಸುಕುಮಾರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಪುಷ್ಪ ಚಿತ್ರದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಕಾಡಿನಲ್ಲಿ ದೊರಕುವ ಬಹುಮೂಲ್ಯ ಸ್ಯಾಂಡೆಲ್ವುಡ್ ಮರದ ಸಾಗಾಣೆಕಾರ ಪುಷ್ಪ ರಾಜನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಪಕ್ಕಾ ರಾ & ಮಾಸ್ ಲುಕ್ ಈಗಾಗಲೇ ಎಲ್ಲರ ಮನಗೆದ್ದಿತ್ತು.
ಹಿಂದಿಯಲ್ಲಿ ಈವರೆಗೂ ಯಾವ ಅಲ್ಲು ಅರ್ಜುನ್ ಚಿತ್ರಗಳೂ ಬಿಡುಗಡೆಯಾಗದಿದ್ದರೂ ಈಗಾಗಲೇ ಉತ್ತರ ಭಾರತದಲ್ಲಿ ಅವರ ಜನಪ್ರಿಯತೆ ಹೆಚ್ಚಿದೆ ಅದರ ಜೊತೆಗೆ ರಶ್ಮಿಕಾ ಮಂದಣ್ಣರವರಿಗೆ ಇರೋ ನಾರ್ತ್ ಫ್ಯಾನ್ ಫಾಲೋವಿಂಗ್ ಪುಷ್ಪ ಚಿತ್ರಕ್ಕೆ ಈಗಾಗಲೇ ಭರ್ಜರಿ ಓಪನಿಂಗ್ ಭರವಸೆ ನೀಡಿದೆ.

ಈ ಚಿತ್ರದಲ್ಲಿ ಇನ್ನೊಂದು ಕನ್ನಡ ಪ್ರತಿಭೆ ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರ ದೇಶಾದ್ಯಂತ ಟೀಸರ್ ನ ಮೂಲಕ ಸಿನಿಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿದ್ದು. ಈಗಾಗಲೇ ಜನರು ಜಾತಕ ಪಕ್ಷಿಯಂತೆ ಲಾಕ್ ಡೌನ್ ನ ನಂತರ ಚಿತ್ರದ ಅದ್ಧೂರಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಈಗಾಗಲೇ ಭಾರತೀಯ ಚಿತ್ರರಂಗದಾದ್ಯಂತ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಸಂಭಾವನೆ 1 ಕೋಟಿ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ರಶ್ಮಿಕಾ ಮಂದಣ್ಣ ನವರ ಸಂಭಾವನೆ 2ಕೋಟಿ ಎಂದು ಹೇಳಲಾಗುತ್ತಿದೆ. ಹೌದು ರಶ್ಮಿಕಾ ಮಂದಣ್ಣನವರ ಮುಂದಿನ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಕ್ಕೆ ನಟಿ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಕೆಲ ಮೂಲಗಳಿಂದ ಖಚಿತಗೊಂಡಿದೆ.

Post Author: Ravi Yadav