ಕಿರುತೆರೆಯಲ್ಲೂ ಸೈ, ಉದ್ಯಮದಲ್ಲೂ ಸೈ ಎನಿಸಿಕೊಂಡಿರುವ ಕನ್ನಡ ಕಿರುತೆರೆಯ ಖ್ಯಾತ ನಟ-ನಟಿಯರು ಯಾರು ಗೊತ್ತಾ??

ಕಿರುತೆರೆಯಲ್ಲೂ ಸೈ, ಉದ್ಯಮದಲ್ಲೂ ಸೈ ಎನಿಸಿಕೊಂಡಿರುವ ಕನ್ನಡ ಕಿರುತೆರೆಯ ಖ್ಯಾತ ನಟ-ನಟಿಯರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಣ್ಣದ ಲೋಕದಲ್ಲಿ ಸಾಕಷ್ಟು ಜನರು ಕೇವಲ ಬಣ್ಣವನ್ನು ಮಾತನಾಡುತ್ತದೆ ಹಲವಾರು ರೀತಿಯ ವ್ಯವಹಾರಗಳನ್ನು ಕೂಡ ಮಾಡುತ್ತಾರೆ. ಹೌದು ಕಿರುತೆರೆ ಹಾಗೂ ಚಿತ್ರರಂಗದಲ್ಲಿ ನಟಿಸುತ್ತಿರುವ ಹಲವಾರು ಕಲಾವಿದರು ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೆ ಉದ್ಯಮದಲ್ಲಿ ಕೂಡ ತಮ್ಮ ಚಾಚುತ್ತಿದ್ದಾರೆ. ಇನ್ನು ಅವರು ಉದ್ಯಮದಲ್ಲಿ ಯಶಸ್ವಿಯಾಗಿದ್ದಾರಾ ಎಂದು ನೀವು ಕೇಳಬಹುದು. ಹೌದು ಕನ್ನಡ ಕಿರುತೆರೆಯ ನಟ ಹಾಗೂ ನಟಿಯರು ನಟನೆಯಲ್ಲಿ ಮೆಚ್ಚುಗೆ ಪಡೆದಿದ್ದು, ಇದೀಗ ಉದ್ಯಮದಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. ನಟನೆ ಜೊತೆಗೆ ಉದ್ಯಮದ ವ್ಯವಹಾರವನ್ನು ಕೂಡ ಸರಿದೂಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹಾಗಾದರೆ ಅವರು ಯಾರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಶೈನ್ ಶೆಟ್ಟಿ: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮೀರಾ ಮಾಧವ ಎಂಬ ಧಾರಾವಾಹಿಯಲ್ಲಿ ನಾಯಕನಟ ಮಾಧವನ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಟ ಶೈನ್ ಶೆಟ್ಟಿ. ಅಷ್ಟೇ ಅಲ್ಲದೇ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕನ್ನಡ ಕಿರುತೆರೆಯ ಪ್ರಮುಖವಾದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ರಲ್ಲಿ ಕೂಡ ಅವರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಈ ಸೀಸನ್ ಏಳರ ವಿನ್ನರ್ ಕೂಡ ಅವರೇ. ಲಕ್ಷ್ಮೀ ಬಾರಮ್ಮ ಧಾರವಾಹಿ ಮುಗಿದ ಬಳಿಕ ನಟ ರಾಜ್ ಚಿತ್ರದಿಂದ ದೂರವುಳಿದ ಶೆಟ್ಟಿ ಅವರು ಅವರು ಫುಡ್ ಟ್ರಕ್ ಆರಂಭಿಸಿದ್ದರು. ಹೌದು ಗಲ್ಲಿ ಕಿಚನ್ ಎಂಬ ಫುಡ್ ಟ್ರಕ್ ಉದ್ಯಮ ಪ್ರಾರಂಭಿಸಿದ್ದಾರೆ.

ಶ್ವೇತಾ ಪ್ರಸಾದ್: ಶ್ವೇತಾ ಪ್ರಸಾದ್ ಅವರು ಶ್ರೀರಸ್ತು ಶುಭಮಸ್ತು ಎಂಬ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ರಾಧಾರಮಣ ಧಾರವಾಹಿಯಲ್ಲಿ ರಾಧಾ ಮಿಸ್ ಆಗಿ ಎಲ್ಲರ ಮೆಚ್ಚುಗೆ ಪಡೆದರು. ಇದೀಗ ಶ್ವೇತಾ ಅವರು ಪ್ರೀತಿ ಮದುವೆ ಇತ್ಯಾದಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿಕೊಂಡು ಇದೀಗ ನಟಿ ಶ್ವೇತಾ ಪ್ರಸಾದ್ ಅವರು ಚರ್ಮದ ಕಾಳಜಿಗೆ ಅಗತ್ಯವಿರುವಂತಹ ವಸ್ತುಗಳೊಂದಿಗೆ ದಿನನಿತ್ಯ ಬಳಸುವ ವಸ್ತುಗಳಿಗಾಗಿ ‘ವಿತ್ ಲವ್ ಸ್ಟೋರ್ಸ್’ ಎಂಬ ತಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ.

ದೀಪಿಕಾ ದಾಸ್: ದೀಪಿಕಾ ದಾಸ್ ಅವರು ದೂದ್ ಸಾಗರ್ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಇವರಿಗೆ ಕೀರ್ತಿ ಮತ್ತು ಹೆಸರನ್ನು ತಂದುಕೊಟ್ಟಿದ್ದು ನಾಗಿಣಿ ಧಾರಾವಾಹಿ. ಹೌದು ನಾಗಿಣಿ ಧಾರಾವಾಹಿಯಲ್ಲಿ ಇ-ಚ್ಚಾ-ದಾರಿ ನಾಗಿಣಿಯಾಗಿ ಕಾಣಿಸಿಕೊಂಡ ದೀಪಿಕ ದಾಸ್ ಅವರು ಜನರ ಮನಸ್ಸನ್ನು ಗೆದ್ದರು. ಇನ್ನು ಇವರು ಮೊದಲಿನಿಂದಲೂ ಫ್ಯಾಶನ್ ಬಗ್ಗೆ ಆಸಕ್ತಿ ಹೊಂದಿದ್ದು, ಇದೀಗ ‘ದಿ ದಾಸ್ ಫ್ಯಾಶನ್ಸ್’ ಎಂಬ ಕ್ಲೋತಿಂಗ್ ಬ್ರಂಡ್ ಆರಂಭಿಸಿದ್ದಾರೆ. ಇಲ್ಲಿ ದೀಪಿಕಾ ದಾಸ್ ಅವರು ಸಂಪ್ರದಾಯದ ಹಾಗೂ ವೆಸ್ಟರ್ನ್ ಡಿಸೈನ್ ಮಾಡುತ್ತಾರೆ.

ಶ್ವೇತ ಚಂಗಪ್ಪ: ಕನ್ನಡದ ಕಿರುತೆರೆಯಲ್ಲಿ ಸುಮತಿ, ಕಾದಂಬರಿ, ಸುಕನ್ಯಾ, ಸೌಂದರ್ಯ, ಬಾ ನನ್ನ ಸಂಗೀತ ಎಂಬ ಸಾಕಷ್ಟು ಧಾರಾವಾಹಿಗಳಲ್ಲಿ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ಇವರು ಜನಪ್ರಿಯತೆ ಪಡೆದಿದ್ದು ಸೃಜನ್ ಲೋಕೇಶ್ ಅವರು ನಿರೂಪಕರಾಗಿರುವ ಮಜಾ ಟಾಕೀಸ್ ಎಂಬ ರಿಯಾಲಿಟಿ ಶೋ ಮೂಲಕ. ಹೌದು ಈ ಶೋದಲ್ಲಿ ಶ್ವೇತಾ ಅವರು ರಾಣಿ ಪಾತ್ರದಲ್ಲಿ ಮಿಂಚಿದ್ದರು. ಇನ್ನೂ ಶ್ವೇತಾ ಅವರು ಕೂಡ ಫ್ಯಾಶನ್ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದು ಡಿಸೈನರ್ ಕ್ಲೋತಿಂಗ್ ಬ್ಯಾಂಡ್ ಎಂಬ ಉದ್ಯಮವನ್ನು ಆರಂಭಿಸಿದ್ದರು. ಇತ್ತೀಚಿಗಷ್ಟೇ ಈ ಉದ್ಯಮಕ್ಕೆ ಮರು ನಾಮಕರಣ ಮಾಡಿದ್ದು ‘ತಾರಾ ಡಿಸೈನರ್ ಕ್ಲೋತಿಂಗ್ ಬ್ಯಾಂಡ್’ ಎಂಬ ಹೆಸರಿಟ್ಟಿದ್ದಾರೆ.

ಶ್ರುತಿ ನಾಯ್ಡು: ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಹಾಗೂ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು ಅವರು ಕೂಡ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೌದು ಇದೀಗ ಕಿರುತೆರೆಯ ಜೊತೆಗೆ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಇವರು ಮೈಸೂರಿನಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದು, ಈ ಉದ್ಯಮಕ್ಕೆ ‘ಮೈಸೂರು ಮಿರ್ಚಿ’ ಎಂಬ ಹೆಸರಿಟ್ಟಿದ್ದಾರೆ. ಹೀಗೆ ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು ನಟನೆ ಮಾತ್ರವಲ್ಲದೆ ಉದ್ಯಮದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇವರಿಗೆ ಎರಡು ಕ್ಷೇತ್ರಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ನಾವು ಈ ಮೂಲಕ ಹಾರೈಸೋಣ.