ಬಾಯಲ್ಲಿ ನೀರೂರಿಸುವಂತಹ ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವುದು ಹೇಗೆ ಗೊತ್ತೇ??

ಬಾಯಲ್ಲಿ ನೀರೂರಿಸುವಂತಹ ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.. ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು: 2 ಲೋಟ ಅಕ್ಕಿ, 10 – 12 ಬೆಳ್ಳುಳ್ಳಿ ಎಸಳು, ಸ್ವಲ್ಪ ಶುಂಠಿ, 2 ಹಸಿ ಮೆಣಸಿನಕಾಯಿ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು,2 ಚಮಚ ಎಣ್ಣೆ, 2 ಚಮಚ ತುಪ್ಪ, 2 ಪಲಾವ್ ಎಲೆ, 1 ಚಕ್ಕೆ, 7 ಏಲಕ್ಕಿ, 3 – 4 ಲವಂಗ, 1 ಸ್ಟಾರ್ ಹೂವು ,ಸ್ವಲ್ಪ ಜಾಪತ್ರೆ,

2 ಈರುಳ್ಳಿ, 2 ಟೊಮೇಟೊ, ರುಚಿಗೆ ತಕಷ್ಟು ಉಪ್ಪು, ಕಾಲು ಚಮಚ ಅರಿಶಿನ ಪುಡಿ,ಅರ್ಧ ಚಮಚ ಧನಿಯಾ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಗರಂ ಮಸಾಲ, 1 ಚಮಚ ಅಚ್ಚ ಕಾರದ ಪುಡಿ, 1 ಚಮಚ ಬಿರಿಯಾನಿ ಪುಡಿ, 2 ಚಮಚ ಮೊಸರು, ಸ್ವಲ್ಪ ನಿಂಬೆ ಹಣ್ಣಿನ ರಸ, ಅರ್ಧ ಚಮಚ ಸಕ್ಕರೆ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವ ವಿಧಾನ: ಮೊದಲಿಗೆ 2 ಲೋಟ ಅಕ್ಕಿಯನ್ನು ನೀರಿಗೆ ಹಾಕಿ 30 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ ಎಸಳು, ಸ್ವಲ್ಪ ಶುಂಠಿ, 2 ಹಸಿ ಮೆಣಸಿನಕಾಯಿ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ 2 – 3 ಚಮಚದಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಗೂ 2 ಚಮಚ ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಇದಕ್ಕೆ 2 ಪಲಾವ್ ಎಲೆ, 1 ಚಕ್ಕೆ, 7 ಏಲಕ್ಕಿ, 3 – 4 ಲವಂಗ, 1 ಸ್ಟಾರ್ ಹೂವು, ಸ್ವಲ್ಪ ಜಾಪತ್ರೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮ್ಯಾಟೊವನ್ನು ಹಾಕಿ ಸಾಫ್ಟ್ ಆಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಅರ್ಧ ಚಮಚ ಉಪ್ಪು ಹಾಗೂ ಕಾಲು ಚಮಚ ಅರಿಶಿನ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಧನಿಯಾ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಗರಂ ಮಸಾಲ, 1 ಚಮಚ ಅಚ್ಚ ಕಾರದ ಪುಡಿ, 1 ಚಮಚ ಬಿರಿಯಾನಿ ಪುಡಿಯನ್ನು ಹಾಕಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ ಮೊಸರು , ಮುಕ್ಕಾಲು ಚಮಚ ಉಪ್ಪು, ಅರ್ಧ ಚಮಚ ಸಕ್ಕರೆ ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 4 ಲೋಟ ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಸವಿಯಲು ಸಿದ್ದ.