ಮಲಗುವ ಮುಂಚೆ ಇದನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ತಿನ್ನಿರಿ 70 ವರ್ಷ ವಯಸ್ಸಾದರೂ, ಸದೃಢವಾಗಿ, ಗಟ್ಟಿಮುಟ್ಟಾಗಿ ಇರುತ್ತೀರ.
ಮಲಗುವ ಮುಂಚೆ ಇದನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ತಿನ್ನಿರಿ 70 ವರ್ಷ ವಯಸ್ಸಾದರೂ, ಸದೃಢವಾಗಿ, ಗಟ್ಟಿಮುಟ್ಟಾಗಿ ಇರುತ್ತೀರ.
ನಮಸ್ಕಾರ ಸ್ನೇಹಿತರೆ, ಇಂದು ನಾವು ಮನುಷ್ಯನಿಗೆ ಕ್ಯಾಲ್ಸಿಯಂ ಎಷ್ಟು ಮುಖ್ಯ ಮತ್ತು ಅದನ್ನು ಹೇಗೆ ನೈಸರ್ಗಿಕವಾಗಿ ದೇಹಕ್ಕೆ ಒದಗಿಸಬಹುದು ಎಂದು ತಿಳಿದುಕೊಳ್ಳೋಣ ಬನ್ನಿ,, ಒಂದು ಮನೆ ಕಟ್ಟಲು ಪಿಲ್ಲರ್ ಎಷ್ಟು ಮುಖ್ಯವಾಗಿರುತ್ತದೋ, ಮನುಷ್ಯ ನ ದೇಹ ನಿರ್ಮಾಣವಾಗಲು ಮೂಳೆಗಳು ಸಹ ಅಷ್ಟೇ ಮುಖ್ಯ ವಾಗಿರುತ್ತವೆ, ಹಾಗೂ ಪಿಲ್ಲರ್ ನಂತೆ ಕೆಲಸ ಮಾಡುತ್ತವೆ ಮತ್ತು ದೇಹಕ್ಕೆ ಭದ್ರತೆಯನ್ನು ಒದಗಿಸುತ್ತವೆ, ಅದೆಲ್ಲ ಸರಿ ಇದೆಲ್ಲ ನಮಗ್ಯಾಕೆ ಹೇಳ್ತೀರಾ ಅಂತೀರಾ?? ಹೌದು ರೀ ಇದು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ, ನಾವು ಒಂದು ಬಿಲ್ಡಿಂಗ್ ಕಟ್ಟುವಾಗ ಪಿಲ್ಲರ್ ಗೆ, ಜಲ್ಲಿ ಕಲ್ಲು ಸಿಮೆಂಟು ನೀರು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಕಟ್ಟಿದ ನಂತರ ನೀರನ್ನು ಹಾಯಿಸಿದಾಗ ಮಾತ್ರ ಅದು ಪೂರ್ಣಪ್ರಮಾಣದಲ್ಲಿ ಪ್ರಬಲ ವಾಗುವುದು ಹಾಗೂ ನೂರಾರು ವರ್ಷಗಳ ಕಾಲ ಬಾಳಿಕೆ ಬರುವುದು ಅಲ್ಲವೇ.
ಅದೇ ರೀತಿ ಮನುಷ್ಯನ ಮೂಳೆಗಳು ಗಟ್ಟಿಯಾಗಬೇಕಾದರೆ,, ಮೂಳೆಗಳಿಗೆ ಕ್ಯಾಲ್ಸಿಯಂ ಬಹಳ ಆವಶ್ಯಕವಾಗಿರುತ್ತದೆ,, ನಮಗೆ 35 ವರ್ಷ ವಯಸ್ಸಾಗುತ್ತಿದ್ದಂತೆ, ಮೂಳೆ ಸ್ರವಿಸುವಿಕೆ, ಎಂಬ ಕಾಯಿಲೆ ಬರುತ್ತದೆ, ಕಾಯಿಲೆಯೆಂದು ಭಯ ಬೀಳಬೇಡಿ ಇದು ಎಲ್ಲರಲ್ಲಿ ಆಗುವ ಸಹಜ ಗುಣ ಇದನ್ನು ಮೆಡಿಕಲ್ ಭಾಷೆಯಲ್ಲಿ “ಆಸ್ಟಿಯೋಪೋರೋಸಿಸ್” ಎಂದು ಕರೆಯುತ್ತಾರೆ,, ಆಸ್ಟಿಯೋಪೋರೋಸಿಸ್ ಎಂದರೆ ಮೂಳೆ ಸ್ರವಿಸುವುದು ಎಂದು ಅರ್ಥ, ಪೂರ್ಣಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳುವುದಾದರೆ ಮೂಳೆಯಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತಾ ಬರುವುದು ಎಂದು ಅರ್ಥ,, ಆದಕಾರಣ ಮೂಳೆಗೆ ವಿಟಮಿನ್ ಡಿ3 ಅವಶ್ಯಕ ಅಂದರೆ ಇದನ್ನು ಮೆಡಿಕಲ್ ಭಾಷೆಯಲ್ಲಿ ಕೊಲೆ ಕ್ಯಾಲ್ಸಿ ಫಿರೋಲ್ ಎಂದು ಕರೆಯುತ್ತಾರೆ,, ಮನುಷ್ಯನ ದೇಹದಲ್ಲಿ ಅಂದರೆ ಮೂಳೆಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆಯಾದರೆ ಮೂಳೆ ಮುರಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಹೌದು ಸ್ನೇಹಿತರೆ ನಾವೇನೋ ಪ್ರತಿದಿನ ಹಾಲನ್ನ ಕುಡಿಯುತ್ತೇವೆ, ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಹೀರಲು ಬೇಕಾಗಿರುವುದು ವಿಟಮಿನ್-ಡಿ3, ಇದು ಸಾಮಾನ್ಯವಾಗಿ ಸೂರ್ಯನ ಶಾಖದಿಂದ ಸಿಗುತ್ತದೆ ಹಾಗಾಗಿ ನೀವು ಪ್ರತಿದಿನ 30 ನಿಮಿಷದಿಂದ 60 ನಿಮಿಷಗಳವರೆಗೆ ಸೂರ್ಯನಿಗೆ ಮೈ ತೋರಿಸುವುದು ಒಳ್ಳೆಯದು,, ಇನ್ನು ಕೆಲವರಿಗೆ ಮುಟ್ಟು ನಿಲ್ಲುವ ಸಮಯದಲ್ಲಿ, ಹಾರ್ಮೋನ್ ಗಳಲ್ಲಿ ವ್ಯತ್ಯಾಸ ವಾಗಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ,, ಇನ್ನು ಥೈರಾಯ್ಡ್ ಹಾರ್ಮೋನ್ ಸ್ರವಿಕೆಯಲ್ಲಿ ವ್ಯತ್ಯಾಸವಾದರೆ, ಕ್ಯಾಲ್ಸಿಯಂ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ,, ಇನ್ನು ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಅದನ್ನು ” ರಿಕೆಟ್ಸ್” ಎಂದು ಕರೆಯುತ್ತಾರೆ, ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ಸಾಮಾನ್ಯವಾಗಿ ಉಂಟಾಗಲು ಕಾರಣ ತಾಯಿಯ ಎದೆ ಹಾಲಿನಲ್ಲಿ ಪೋಷಕಾಂಶಗಳು ಸರಿಯಾಗಿ ದೊರೆಯದಿದ್ದಾಗ.
ಇನ್ನು ಮಕ್ಕಳಿಗೆ ನಾವು ಚಿಕ್ಕ ವಯಸ್ಸಿನಲ್ಲಿದ್ದಾಗಲೆ,, ಕೋಕೋ ಕೋಲಾ ಪೆಪ್ಸಿ ಚಾಕ್ಲೇಟ್ ಗಳು ಮತ್ತು ಮುಂತಾದ ಕಾರ್ಬನ್ ಕಂಟೆಂಟ್ ಇರುವ ಆಹಾರಗಳನ್ನು ಕೊಡುತ್ತೇವೆ ಇದರಿಂದ ಮಕ್ಕಳಿಗೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇರುತ್ತದೆ,, ಇನ್ನು ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸಬೇಕು ಎಂದರೆ ಮತ್ತು ಮೂಳೆಗಳು ಬಲಿಷ್ಠವಾಗಬೇಕು ಎಂದರೆ ನೀವು ಪ್ರತಿದಿನ ವ್ಯಾಯಾಮವನ್ನು ಮಾಡುವುದು ಒಳ್ಳೆಯದು,, ಅದರ ಜೊತೆಗೆ ನಾವು ಹೇಳುವ ಈ ಒಂದು ಸಣ್ಣ ಕೆಲಸವನ್ನು ಮಾಡಿ ಸಾಕು ನಿಮ್ಮ ಮೂಳೆಗಳು ಬಲಿಷ್ಠವಾಗುತ್ತವೆ,, ನಿಮಗೆ “ಬಿಳಿ ಎಳ್ಳು” ಗೊತ್ತಿರಬೇಕು ಅಲ್ಲವೇ, ಸರಿ ಪ್ರತಿದಿನ ರಾತ್ರಿ ಮಲಗುವ ಮುಂಚೆ, 1 ಸ್ಪೂನ್ ಎಳ್ಳನ್ನು ನೀರಿಗೆ ನೆನಸಿ ಮಲಗಿಕೊಳ್ಳಿ, ಬೆಳಿಗ್ಗೆ ಎದ್ದ ನಂತರ ಅದನ್ನು ಸೇವಿಸಿ, ಹಾಗೆಯೇ ಒಂದು ಹಿಡಿಯಷ್ಟು ಶೇಂಗಾ ಬೀಜವನ್ನು ನೆನೆಸಿ, ನಂತರ ನಾಲ್ಕರಿಂದ ಐದು ಬಾದಾಮಿ ಬೀಜಗಳನ್ನು ಕೂಡ ನೆನೆಸಿ, ಇವಿಷ್ಟನ್ನು ಕೆಂಪು ಕಲ್ಲು ಸಕ್ಕರೆಯೊಂದಿಗೆ ಪ್ರತಿದಿನ ಸತತವಾಗಿ ಮೂರು ತಿಂಗಳು ಸೇವಿಸುತ್ತ ಬರಬೇಕು.
ಇನ್ನು ಬಿಳಿ ಎಳ್ಳನ್ನು ಹಾಗೆಯೇ ಸೇವಿಸಬಾರದು ಇದು ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುವುದರಿಂದ ದೇಹ ಬೇಗ ಉಷ್ಣಾಂಶವನ್ನು ಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಿಳಿ ಎಳ್ಳನ್ನು, ನೀರಿನಲ್ಲಿ ನೆನೆಸಿ ಸೇವಿಸಬೇಕು, ಬಿಳಿ ಎಳ್ಳಿನಲ್ಲಿ ಕ್ಯಾಲ್ಸಿಯಂ ಪಾಸ್ಪರಸ್ ಸೆಲೇನಿಯಂ, ಹಾಗೂ ಸಾಕಷ್ಟು ಕಬ್ಬಿಣಾಂಶ ಇರುವುದರಿಂದ ಮೂಳೆಯನ್ನು ಬಿಗಿ ಗೊಳಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ,, ಇನ್ನು ಶೇಂಗಾ ಬೀಜ ದಿಂದ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರೆಯುವುದರಿಂದ ಇದನ್ನು ಸಹ ನೀವು ಬಿಳಿ ಎಳ್ಳಿನ ಜೊತೆ ಸೇವಿಸ ತಕ್ಕದ್ದು,, ಇನ್ನೂ ಒಂದು ಸ್ಪೂನ್ ಎಳ್ಳಿನಲ್ಲಿ 100 ಮಿಲಿಗ್ರಾಂ ಕ್ಯಾಲ್ಸಿಯಂ ಇರುವುದರಿಂದ ಇದು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ… ಅಂದಾಗೆ ನೆನಪಿರಲಿ ಸ್ನೇಹಿತರೆ ಇದನ್ನು ಬೆಳಿಗ್ಗೆ ನೀವು ತಿಂಡಿ ತಿನ್ನುವ ಮುಂಚೆ ತಿನ್ನಬೇಕು… ನೋಡಿದ್ರಲ್ಲ ಸ್ನೇಹಿತರೆ ಎಳ್ಳು, ಬಾದಾಮಿ ಬೀಜ ಮತ್ತು ಶೇಂಗಾ ಅದರ ಜೊತೆಗೆ ಒಂದಿಷ್ಟು ಕೆಂಪು ಕಲ್ಲು ಸಕ್ಕರೆ ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯೆಂದು, ತಪ್ಪದೇ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮರೆಯಬೇಡಿ…