ಎಬಿಡಿ ಫೀಲ್ಡಿಂಗ್ ಇಷ್ಟ ಆದರೆ ವಿಶ್ವಶ್ರೇಷ್ಠ ಫೀಲ್ಡರ್ ಅವನೊಬ್ಬ ಮಾತ್ರ ಎಂದು ಭಾರತೀಯನನ್ನು ಹೊಗಳಿದ ಜಾಂಟಿ ರೋಡ್ಸ್! ಆ ಆಟಗಾರ ಯಾರು ಗೊತ್ತಾ??
ಎಬಿಡಿ ಫೀಲ್ಡಿಂಗ್ ಇಷ್ಟ ಆದರೆ ವಿಶ್ವಶ್ರೇಷ್ಠ ಫೀಲ್ಡರ್ ಅವನೊಬ್ಬ ಮಾತ್ರ ಎಂದು ಭಾರತೀಯನನ್ನು ಹೊಗಳಿದ ಜಾಂಟಿ ರೋಡ್ಸ್! ಆ ಆಟಗಾರ ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಅಂಗಳದಲ್ಲಿ ಕೇವಲ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಾಕಷ್ಟು ಜನರು ತಿಳಿದುಕೊಂಡಿದ್ದಾರೆ. ಆದರೆ ಫೀಲ್ಡಿಂಗ್ ಕೂಡ ಅಷ್ಟೇ ಮುಖ್ಯ. ಹೌದು ಪಂದ್ಯ ಗೆಲ್ಲಬೇಕಾದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕೊನೆಯ ಎಸೆತಗಳಲ್ಲಿ ಫೀಲ್ಡಿಂಗ್ ಮಿಸ್ ಆದರೆ ಪಂದ್ಯ ಸೋಲಿನ ಹಾದಿ ಹಿಡಿಯುವ ಸಂಭವಗಳು ಹೆಚ್ಚುತ್ತವೆ.
ಆದ್ದರಿಂದ ಕ್ರಿಕೆಟ್ ಅಂಗಳದಲ್ಲಿ ಫೀಲ್ಡಿಂಗ್ ಕೂಡ ಅಷ್ಟೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಇಂತಹ ಫೀಲ್ಡಿಂಗ್ ಗಾಗಿ ಪ್ರಸಿದ್ಧಿಯನ್ನು ಪಡೆದ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್. ಹೌದು ದಕ್ಷಿಣ ಆಫ್ರಿಕಾದ ಆಟಗಾರರ ಇರುವವರು ಕ್ರಿಕೆಟ್ ಮೈದಾನದಲ್ಲಿ ತಮ್ಮ ಫೀಲ್ಡಿಂಗ್ ಮೂಲಕ ಪ್ರಖ್ಯಾತಿಯನ್ನು ಪಡೆದವರು. ಇನ್ನು ಇಂತಹ ಆಟಗಾರ ಮತ್ತು ಆಟಗಾರರನ್ನು ಹೇಳಬೇಕೆಂದರೆ ಅದು ಸುಲಭದ ಮಾತಲ್ಲ. ಹೊಗಳಿಸಿಕೊಳ್ಳುವ ಆಟಗಾರನಲ್ಲಿ ವಿಶೇಷತೆ ಕಂಡುಬಂದಲ್ಲಿ ಮಾತ್ರ ಇಂತಹ ಆಟಗಾರರು ಅವರನ್ನು ಹೊಗಳುತ್ತಾರೆ.
ಇದೀಗ ಕ್ಷೇತ್ರ ರಕ್ಷಣೆಯಲ್ಲಿ ಜಾಂಟಿ ರೋಡ್ಸ್ ಅವರು ಭಾರತೀಯ ಆಟಗಾರನನ್ನು ಹೊಗಳಿದ್ದಾರೆ. ಹಾಗಾದರೆ ಆ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಒಂದು ಬಾರಿ ಜಾಂಟಿ ರೋಡ್ಸ್ ಹಾಗೂ ಸುರೇಶ್ ರೈನಾ ಅವರನ್ನು ಒಟ್ಟಿಗೆ ಸಂದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಆ ಇಬ್ಬರು ಆಟಗಾರರಿಗೆ ವಿಶ್ವ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫೀಲ್ಡರ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು. ಇನ್ನು ಈ ಪ್ರಶ್ನೆಗೆ ಸುರೇಶ್ ರೈನಾ ಅವರು ಉತ್ತರಿಸಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಫೀಲ್ಡರ್ ರವೀಂದ್ರ ಜಡೇಜಾ ಎಂದು ಹೇಳಿದರು.
ಹೌದು ಸುರೇಶ್ ರೈನಾ ಅವರ ದೃಷ್ಟಿಯಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಫೀಲ್ಡರ್ ಎಂದು ಸ್ಪಷ್ಟವಾಗಿ ಹೇಳಿದ್ದರು. ಇನ್ನು ಇದೇ ಪ್ರಶ್ನೆಯನ್ನು ಜಾಂಟಿ ರೋಡ್ಸ್ ಅವರಿಗೆ ಪ್ರಶ್ನಿಸಿದಾಗ ಅವರೇನು ಹೇಳಿದರು ಎಂಬುದನ್ನು ಮುಂದೆ ನೋಡಿ. ಹೌದು ಈ ಬಗ್ಗೆ ಉತ್ತರಿಸಿದ ಜಾಂಟಿ ರೋಡ್ಸ್ ಅವರು ನನಗೆ ಬ್ಯಾಟಿಂಗ್ ನಲ್ಲಿ ಎಬಿಡಿ ಇಷ್ಟ. ಇನ್ನು ಫೀಲ್ಡಿಂಗ್ ನಲ್ಲಿ ಕೂಡ ಅವರು ಅತ್ಯುತ್ತಮ ಫೀಲ್ಡರ್. ಅವರು ಬಹಳ ವೇಗವಾಗಿ ಮೈದಾನವನ್ನು ಕವರ್ ಮಾಡುತ್ತಾರೆ ಅಷ್ಟೇ ಅಲ್ಲ ಉತ್ತಮವಾದ ಮಾಡುತ್ತಾರೆ.
ಆದರೆ ಭಾರತ ತಂಡದ ರವೀಂದ್ರ ಜಡೇಜಾ ಅವರ ಫೀಲ್ಡಿಂಗ್ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಏಕೆಂದರೆ ಇವರು ಮೈದಾನದಲ್ಲಿ ವೇಗವಾಗಿ ಓಡುತ್ತಾ ಯಾವುದೇ ಕ್ಲಿಷ್ಟಕರವಾದ ಕ್ಯಾಚ್ ಇದ್ದರೂ ಕೂಡ ಅವರು ಬಿಡುವುದಿಲ್ಲ. ಇನ್ನು ಕೆಲವು ವೇಳೆ ಅವರು ಫೀಲ್ಡಿಂಗ್ ಮಾಡುವಾಗ ಅವರ ಕೈಯಲ್ಲಿ ಬಾಲ್ ಬಂದರೆ ಸಾಕು ತಕ್ಷಣ ಅವರು ಅದನ್ನು ಕೀಪರ್ ಅಥವಾ ಬೌಲರ್ ಕಡೆಗೆ ಎಸೆದುಬಿಡುತ್ತಾರೆ. ಹೀಗಿರುವಾಗ ಎಬಿಡಿ ಶ್ರೇಷ್ಠ ಎಂದು ಹೇಗೆ ಹೇಳಲಿ. ಎಬಿಡಿನೂ ಇಷ್ಟ ಆದರೆ, ರವೀಂದ್ರ ಜಡೇಜಾ ಶ್ರೇಷ್ಠ ಫೀಲ್ಡರ್ ಎಂದು ಹೇಳಿದರು. ಇನ್ನು ಇವರ ಅಭಿಪ್ರಾಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.