ಯೋ-ಯೋ ಟೆಸ್ಟ್ ನಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಆ ಮೂವರು ಭಾರತೀಯ ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಕ್ರೀಡೆಯಲ್ಲಿಯೂ ಫಿಟ್ ನೆಸ್ ಆಟಗಾರರಿಗೆ ಅತ್ಯವಶ್ಯಕ . ಆಟಗಾರ ದೈಹಿಕನಾಗಿ ಸಾಮರ್ಥ್ಯ ಹೊಂದಿರದಲ್ಲಿ, ಅದೆಂತಹದೇ ಕೌಶಲ್ಯ ಆತ ಹೊಂದಿದ್ದರೂ, ಫಲಿತಾಂಶ ಋಣಾತ್ಮಕವಾಗಿ ಬರುತ್ತದೆ. ಭಾರತೀಯ ಕ್ರಿಕೇಟ್ ತಂಡದಲ್ಲಿಯೂ ಸಹ ಆಟಗಾರರ ಫಿಟ್ ನೆಸ್ ಪರೀಕ್ಷೆ ಮಾಡಲು ಯೋ-ಯೋ ಟೆಸ್ಟ್ ಎಂಬ ಪರೀಕ್ಷೆ ಇದೆ. ಯಾವುದೇ ಆಟಗಾರ ರಣಜಿ ಅಥವಾ ಅಂತರಾಷ್ಟ್ರೀಯ ಕ್ರಿಕೇಟ್ ಆಡಲು ಆತ ಕಡ್ಡಾಯವಾಗಿ ಯೋ-ಯೋ ಟೆಸ್ಟ್ ನಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ.

ಅಷ್ಟಕ್ಕೂ ಈ ಯೋ-ಯೋ ಟೆಸ್ಟ್ ಎಂದರೇ ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ,ಎರಡು ಪೋಲ್ ಗಳನ್ನ 20 ಮೀಟರ್ ಅಂತರದಲ್ಲಿ ನಿಲ್ಲಿಸುತ್ತಾರೆ. ಆಟಗಾರ ಸೀಟಿ ಊದಿದ ತಕ್ಷಣ ಜೋರಾಗಿ ಉಸಿರೆಳೆದುಕೊಂಡು ಒಂದು ಪೋಲ್ ನಿಂದ ಇನ್ನೊಂದು ಪೋಲ್ ಮುಟ್ಟಿ, ಮತ್ತೊಂದು ಸೀಟಿ ಹೊಡೆದ ನಂತರ ಮೊದಲ ಸ್ಥಾನಕ್ಕೆ ವಾಪಸ್ ಆಗಬೇಕು. ನಂತರ ಸೀಟಿ ಹೊಡೆದ ನಂತರ ಮತ್ತೆ ಅದೇ ಸ್ಥಳಕ್ಕೆ ಹೋಗಬೇಕು. ಸದ್ಯ ಯೋ-ಯೋ ಟೆಸ್ಟ್ ನಲ್ಲಿ ಅತ್ಯುತ್ತಮ ಸಾಧನೆಗೈದ ಟಾಪ್ -7 ಆಟಗಾರರ ಮಾಹಿತಿ ನಮಗೆ ಸಿಕ್ಕಿದೆ ಅದು ಈ ಕೆಳಗಿನಂತಿದೆ.

ಟಾಪ್ 7 ನೇ ಸ್ಥಾನದಲ್ಲಿ ರಿಷಭ್ ಪಂತ್ – ಇವರು ಯೋ-ಯೋ ಟೆಸ್ಟ್ 17.3 ಅಂಕಗಳನ್ನು ಪಡೆದಿದ್ದಾರೆ. ಟಾಪ್ 6 ನೇ ಸ್ಥಾನದಲ್ಲಿ ಆಶಿಶ್ ನೆಹ್ರಾ – ಹಿರಿಯ ವೇಗದ ಬೌಲರ್ ನೆಹ್ರಾ 18.5 ಅಂಕಗಳನ್ನು ಪಡೆದಿದ್ದಾರೆ. ಟಾಪ್ 5 ನೇ ಸ್ಥಾನದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 19 ಅಂಕಗಳನ್ನು ಪಡೆದಿದ್ದಾರೆ. ಟಾಪ್ 4 ನೇ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಸಹ 19 ಅಂಕಗಳನ್ನು ಪಡೆದಿದ್ದಾರೆ. ಟಾಪ್ 3 ನೇ ಸ್ಥಾನದಲ್ಲಿ ಕನ್ನಡಿಗ ಮನೀಶ್ ಪಾಂಡೆ ನಾಯಕ ಕೊಹ್ಲಿಯನ್ನ ಹಿಂದಿಕ್ಕಿ 19.2 ಅಂಕಗಳನ್ನು ಪಡೆದಿದ್ದಾರೆ. ಟಾಪ್ 2 ನೇ ಸ್ಥಾನದಲ್ಲಿ ಮಯಾಂಕ್ ದಾಗರ್ – ಹಿಮಾಚಾಲ ಪ್ರದೇಶದ ಬ್ಯಾಟ್ಸಮನ್ ಮಯಾಂಕ್ ದಾಗರ್ 19.3 ಅಂಕಗಳನ್ನು ಪಡೆದು ಏರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೊದಲನೇ ಸ್ಥಾನದಲ್ಲಿರುವುದು ಅಹಮದ್ ಬಾಂಡೆ – ಕ್ರಿಕೇಟ್ ಜಗತ್ತಿನಲ್ಲಿ ಅಷ್ಟೇನೂ ಪರಿಚಯವಿಲ್ಲದ ಅಹಮದ್ 19.4 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ. ರಣಜಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸುವ ಅಹಮದ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದಾರೆ.

Post Author: Ravi Yadav