ಫ್ರಿಡ್ಜ್ ಇಲ್ಲದೇ ಕೂಡ ಟೊಮ್ಯಾಟೊ ವನ್ನು ತಿಂಗಳುಗಟ್ಟಲೆ ಕೆಡದ ಹಾಗೆ ಫ್ರೆಶ್ ಆಗಿ ಇಡುವುದು ಹೇಗೆ ಗೊತ್ತೇ??
ಫ್ರಿಡ್ಜ್ ಇಲ್ಲದೇ ಕೂಡ ಟೊಮ್ಯಾಟೊ ವನ್ನು ತಿಂಗಳುಗಟ್ಟಲೆ ಕೆಡದ ಹಾಗೆ ಫ್ರೆಶ್ ಆಗಿ ಇಡುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇಂದು ನಾವು ಟೊಮ್ಯಾಟೊವನ್ನು ತಿಂಗಳುಗಟ್ಟಲೆ ಕೆಡದ ಹಾಗೆ ಫ್ರೆಶ್ ಆಗಿ ಸ್ಟೋರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಹಾಗೂ 2 ಚಮಚದಷ್ಟು ವಿನೆಗರ್ ನನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ನೀರಿನಿಂದ ಟೊಮ್ಯಾಟೊವನ್ನು ತೊಳೆದುಕೊಳ್ಳಿ. ಈ ನೀರಿನಲ್ಲಿ ಟೊಮ್ಯಾಟೊವನ್ನು ತೊಳೆಯುವುದರಿಂದ ಟೊಮೇಟೊ ಮೇಲಿರುವ ಕೀಟನಾಶಕ ಹೋಗುತ್ತದೆ. ಅಲ್ಲದೇ ವಿನೆಗರ್ ನಲ್ಲಿರುವ ಅಂಶವು ಟೊಮೇಟೊವನ್ನು ಹೆಚ್ಚು ದಿನ ಫ್ರೆಶ್ ಆಗಿರುವಂತೆ ಮಾಡುತ್ತದೆ. ನಂತರ ಒಂದು ಕಾಟನ್ ಬಟ್ಟೆಯಿಂದ ಪ್ರತಿಯೊಂದು ಟೊಮ್ಯಾಟೊವನ್ನು ಒರೆಸಿಕೊಳ್ಳಿ. ಯಾವುದೇ ಕಾರಣಕ್ಕೂ ಟೊಮೇಟೊ ಮೇಲೆ ನೀರಿನ ಅಂಶ ಇಲ್ಲದ ಹಾಗೆ ಒಂದು ಬಾರಿ ನೋಡಿಕೊಳ್ಳಿ.
ಸ್ಟೋರ್ ಮಾಡುವ ಮೊದಲನೆಯ ವಿಧಾನ: ಮೊದಲಿಗೆ ಗಾಳಿ ಹಾಡದ ಒಂದು ಡಬ್ಬದ ತಳಭಾಗಕ್ಕೆ ನ್ಯೂಸ್ ಪೇಪರ್ ಅಥವಾ ಟಿಶ್ಯೂ ಪೇಪರ್ ನನ್ನು ಹಾಕಿಕೊಳ್ಳಿ. ನಂತರ ಅದರ ಟೊಮ್ಯಾಟೊವನ್ನು ನಿಧಾನವಾಗಿ ಜೋಡಿಸಿಕೊಳ್ಳಿ. ನಂತರ ಇದರ ಮೇಲೆ ಮತ್ತೆ ನ್ಯೂಸ್ ಪೇಪರ್ ಅಥವಾ ಟಿಶ್ಯೂ ಪೇಪರ್ ನನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಇಟ್ಟರೆ 3 – 4 ತಿಂಗಳುಗಳ ಕಾಲ ಟೊಮೇಟೊ ಫ್ರೆಶ್ ಆಗಿ ಇರುತ್ತದೆ.
ಸ್ಟೋರ್ ಮಾಡುವ ಎರಡನೆಯ ವಿಧಾನ: ಮೊದಲಿಗೆ ಟೊಮ್ಯಾಟೊವನ್ನು ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ನಂತರ ಒಂದು ಡಬ್ಬವನ್ನು ತೆಗೆದುಕೊಂಡು ಅದರ ತಳ ಭಾಗಕ್ಕೆ ಪ್ಲಾಸ್ಟಿಕ್ ಕವರ್ ನನ್ನು ಹಾಕಿಕೊಳ್ಳಿ. ನಂತರ ಕತ್ತರಿಸಿದ ಟೊಮ್ಯಾಟೊವನ್ನು ಜೋಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಒಂದರ ಮೇಲೆ ಒಂದು ಇಡಬೇಡಿ. ನಂತರ ಮತ್ತೆ ಒಂದು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿ ಡಬ್ಬದ ಮುಚ್ಚಳವನ್ನು ಮುಚ್ಚಿ ಫ್ರೆಜಿರ್ ನಲ್ಲಿ ಇಟ್ಟರೆ ಟೊಮೇಟೊ ಫ್ರೆಶ್ ಆಗಿ ಇರುತ್ತದೆ.
ಹಣ್ಣಾದ ಟೊಮ್ಯಾಟೊವನ್ನು ಸ್ಟೋರ್ ಮಾಡುವ ವಿಧಾನ: ಮೊದಲಿಗೆ ಹಣ್ಣಾದ ಟೊಮೇಟೊವನ್ನು ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹಚ್ಚಿದ ಟೊಮೇಟೊ ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ನಂತರ ಇದನ್ನು ಐಸ್ ಕ್ಯೂಬ್ ಮಾಡುವ ಮೊಲ್ಟ್ ಗಳಿಗೆ ಹಾಕಿ 5 – 6 ಗಂಟೆಗಳ ಕಾಲ ಫ್ರಿಜರ್ ನಲ್ಲಿ ಇಡಿ. ನಂತರ ಒಂದು ಪ್ಲಾಸ್ಟಿಕ್ ಪೌಚ್ ಅಂದರೆ ಜಿಪ್ ಇರುವ ಕವರ್ ಗೆ ಹಾಕಿ ಮತ್ತೆ ಫ್ರಿಜರ್ ನಲ್ಲಿ ಇದ್ದರೆ ತಿಂಗಳುಗಟ್ಟಲೆ ಟೊಮ್ಯಾಟೊವನ್ನು ಉಪಯೋಗಿಸಬಹುದು.
ಫ್ರಿಡ್ಜ್ ಇಲ್ಲದೇ ಸ್ಟೋರ್ ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಗೂ ಸ್ವಲ್ಪ ವಿನೆಗರ್ ನನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮ್ಯಾಟೊವನ್ನು ಹಾಕಿ ಇಡಿ. 2 ದಿನಕೊಮ್ಮೆ ನೀರನ್ನು ಬದಲಿಸಿ. ಈ ರೀತಿ ಇಡುವುದರಿಂದ ಟೊಮೇಟೊ ಫ್ರೆಶ್ ಆಗಿ ಇರುತ್ತದೆ.