‘ನನ್ನ ಜೀವನದಲ್ಲಿ ಇಂತಹ ಆಟಗಾರನನ್ನು ಎಂದಿಗೂ ನೋಡಿಲ್ಲ’ ಎಂದ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್! ಆ ಕನ್ನಡಿಗನ್ಯಾರು ಯಾರು ಗೊತ್ತೆ??

‘ನನ್ನ ಜೀವನದಲ್ಲಿ ಇಂತಹ ಆಟಗಾರನನ್ನು ಎಂದಿಗೂ ನೋಡಿಲ್ಲ’ ಎಂದ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್! ಆ ಕನ್ನಡಿಗನ್ಯಾರು ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರು ಹಲವಾರು ರೆಕಾರ್ಡ್ ಗಳನ್ನು ಮಾಡಿದ್ದಾರೆ. ಇನ್ನೂ ಸಾಕಷ್ಟು ಆಟಗಾರರು ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಭಾರತ ತಂಡಕ್ಕೆ ಹಲವಾರು ಬಾರಿ ಜಯವನ್ನು ಕೂಡ ತಂದುಕೊಟ್ಟಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡದ ಹಲವಾರು ಆಟಗಾರರ ಬಗ್ಗೆ ದೇಶ ವಿದೇಶದ ಆಟಗಾರರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಮಾಜಿ ನಾಯಕ ಎಂ. ಎಸ್. ಧೋನಿ, ಅನಿಲ್ ಕುಂಬ್ಳೆ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಜನರು ಇದೀಗ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಕೂಡ ಅವರ ಆಟದ ಕೌಶಲ್ಯವು ಜನರಿಗೆ ಕಣ್ಣು ಕಟ್ಟಿದಂತಿದೆ.

ಇನ್ನು ಇದೀಗ ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್ ಗ್ರೇಮ್ ಸ್ವಾನ್ ಅವರು ಇಂತಹ ಖ್ಯಾತ ಭಾರತದ ಕ್ರಿಕೆಟ್ ತಂಡದ ಆಟಗಾರರೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅಂತಹ ಆಟಗಾರನನ್ನು ಜೀವನದಲ್ಲಿಯೇ ನೋಡಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಅವರು ಯಾವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ. ಇಂಗ್ಲೆಂಡ್ ದೇಶದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಜನರು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ತಮ್ಮ ಆಟದ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಇನ್ನೂ ಹೆಚ್ಚಾಗಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಗಳು ಸಾಕಷ್ಟು ಸಾಧನೆಗಳನ್ನು ಕೂಡ ಮಾಡಿದ್ದಾರೆ.

ಏಕೆಂದರೆ ಇಂಗ್ಲೆಂಡ್ ದೇಶದಲ್ಲಿ ಕ್ರಿಕೆಟ್ ಅಂಗಳ ವೇಗದ ಬೌಲರ್ ಗಳಿಗೆ ಅನುಕೂಲವಾಗಿದೆ. ಇಂತಹ ಅಂಗಳದಲ್ಲಿ ಸ್ಪಿನ್ ಮೂಲಕ ಜನರ ಮೆಚ್ಚಿಗೆ ಪಡೆದ ಬಾಲರ್ ಗ್ರೇಮ್ ಸ್ವಾನ್. ಹೌದು ತಮ್ಮ ಹದಿಮೂರು ವರ್ಷಗಳ ಕಾಲ ಕ್ರಿಕೆಟ್ ವೃತ್ತಿಯಲ್ಲಿ ಅವರು ಇಂಗ್ಲೆಂಡ್ ತಂಡದ ಶ್ರೇಷ್ಠ ಸ್ಪಿನ್ ಬೌಲರ್ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಇಂಗ್ಲೆಂಡ್ ದೇಶದ ಬೌಲರ್ ಇದೀಗ ಭಾರತ ಕ್ರಿಕೆಟ್ ತಂಡದ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದೆ. ಇನ್ನು ನಿಮಗೆ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರಬೇಕಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ.

ಹೌದು ಇತ್ತೀಚಿಗೆ ಕೆಲದಿನಗಳ ಹಿಂದೆ ಗ್ರೇಮ್ ಸ್ವಾನ್ ಅವರು ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರರೊಬ್ಬರ ಬಗ್ಗೆ ಮಾತನಾಡಿದ್ದು ಅಂತಹ ಆಟಗಾರನನ್ನು ನನ್ನ ಜೀವನದಲ್ಲಿ ಎಲ್ಲಿಯೂ ನೋಡಿಲ್ಲ ಎಂದು ಹೇಳಿದ್ದಾರೆ. ಭಾರತದ ಆಟಗಾರ ಬೇರೆ ಯಾರು ಅಲ್ಲ ‘ಕ್ರಿಕೆಟ್ ನ ಮಹಾಗೋಡೆ’ ಎಂಬ ಬಿರುದನ್ನು ಹೊಂದಿರುವ ಕರ್ನಾಟಕದ ರಾಹುಲ್ ದ್ರಾವಿಡ್. ಇದೀಗ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿರುವ ಗ್ರೇಮ್ ಸ್ವಾನ್ ಅವರು ನಾನು ಅವರೊಂದಿಗೆ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದೇನೆ. ಆಗ ಅವರ ಬ್ಯಾಟಿಂಗ್ ನೋಡಿ ಇದು ಅಸಾಧ್ಯ ಎಂದು ನನಗೆ ಅನಿಸಿತ್ತು.

ಕೌಂಟಿ ಕ್ರಿಕೆಟ್ನಲ್ಲಿ ಔಟು ಆಗುವುದು ತೀರ ವಿರಳ. ಅಂತಹ ಕೊನೆಯ ಪಂದ್ಯದಲ್ಲಿ ನಾನು ಅವರಿಗೆ ಬೌಲಿಂಗ್ ಮಾಡಿದ್ದೆ. ಇನ್ನು ವಿಶೇಷವೇನೆಂದರೆ ಅವರು ನನ್ನ ಮೊದಲ ಬೌಲ್ ನಲ್ಲಿ ಔಟ್ ಆಗಿದ್ದರು. ಇನ್ನು ಬೌಲ್ ಉತ್ತಮ ಎಂದು ನೀವು ಅಂದುಕೊಳ್ಳಬಹುದು. ಆದರೆ ಒಂದು ಸಣ್ಣ ತಪ್ಪಿನಿಂದಾಗಿ ಅವರು ಔಟ್ ಆಗಿದ್ದರು. ಅವರಂತಹ ಮತ್ತೊಬ್ಬ ಆಟಗಾರನನ್ನು ನಾನು ಇಂದಿನವರೆಗೂ ಕೂಡ ನೋಡಿಲ್ಲ ಎಂದು ಹೇಳಿ ರಾಹುಲ್ ದ್ರಾವಿಡ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ವಿಕೆಟ್ ಪಡೆದಿರುವುದು ನನ್ನ ಅದೃಷ್ಟವೆಂದು ಕೂಡ ಗ್ರೇಮ್ ಸ್ವಾನ್ ಹೇಳಿದ್ದಾರೆ.