ಐಪಿಎಲ್ ತಂಡಕ್ಕೆ ಹಾಗೂ ಆಟಗಾರರಿಗಾಗಿ ಕೋಟಿ ಕೋಟಿ ಸುರಿಯುವುದರಿಂದ ಮಾಲೀಕರಿಗೆ ಹೇಗೆ ಲಾಭ ಬರುತ್ತದೆ ಗೊತ್ತೇ?? ಹಾಗೂ ಎಷ್ಟು ಲಾಭ ಬರುತ್ತದೆ ಗೊತ್ತಾ??

ಐಪಿಎಲ್ ತಂಡಕ್ಕೆ ಹಾಗೂ ಆಟಗಾರರಿಗಾಗಿ ಕೋಟಿ ಕೋಟಿ ಸುರಿಯುವುದರಿಂದ ಮಾಲೀಕರಿಗೆ ಹೇಗೆ ಲಾಭ ಬರುತ್ತದೆ ಗೊತ್ತೇ?? ಹಾಗೂ ಎಷ್ಟು ಲಾಭ ಬರುತ್ತದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಇತಿಹಾಸದಲ್ಲಿ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಹೊರತುಪಡಿಸಿ ಸಾಕಷ್ಟು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳು ಫೇಮಸ್ ಆಗಿವೆ. ಅದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಒಂದು. ಹೌದು ಪ್ರತಿವರ್ಷ ನಡೆಯುವ ಐಪಿಎಲ್ ಪಂದ್ಯಾವಳಿಗಳು ಸಾಕಷ್ಟು ವೀಕ್ಷಕರಿಗೆ ಮನರಂಜನೆ ನೀಡುತ್ತಿವೆ. ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಶ್ರೇಯ ಕೂಡ ಐಪಿಎಲ್ ಗೆ ಸೇರುತ್ತದೆ. ಇನ್ನು ಪ್ರತಿ ವರ್ಷ ನಡೆಯುವ ಈ ಪಂದ್ಯಾವಳಿಗಾಗಿ ದೇಶ-ವಿದೇಶಗಳ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ಪ್ರತಿವರ್ಷ ಕೂಡ ಆಟಗಾರರನ್ನು ಆಯ್ಕೆ ಮಾಡಿಕೊಂಡು ಖರೀದಿಸಲಾಗುತ್ತದೆ. ಇನ್ನು ಐಪಿಎಲ್ ಪಂದ್ಯಾವಳಿಗಳಲ್ಲಿ 8 ತಂಡಗಳಿದ್ದು, ಪ್ರತಿಯೊಂದು ತಂಡ ವಿವಿಧ ಮಾಲೀಕರನ್ನು ಹೊಂದಿದೆ. ಹೌದು ಪ್ರತಿಯೊಂದು ತಂಡ ಹೊಂದಿರುವ ಮಾಲೀಕರು ಪ್ರತಿವರ್ಷ ಕೋಟಿ ಕೋಟಿ ಹಣ ಸುರಿದು ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡದಲ್ಲಿ ಸ್ಥಾನ ನೀಡುತ್ತದೆ. ಇನ್ನು ಐಪಿಎಲ್ ನಲ್ಲಿ ಒಂದು ತಂಡ ಗೆದ್ದರೆ ಅದರ ಸಂಪೂರ್ಣ ಹಣವನ್ನು ಆಟಗಾರರು ಹಂಚಿಕೊಳ್ಳುತ್ತಾರೆ.

ಇನ್ನು ಈ ಸಂದರ್ಭದಲ್ಲಿ ಬರುವ ಪ್ರಶ್ನೆಯೇನೆಂದರೆ ಕೋಟಿಕೋಟಿ ಹಣ ಕೊಟ್ಟು ಆಟಗಾರರನ್ನು ಖರೀದಿಸುವ ಮಾಲೀಕರು ಇದರಿಂದ ಏನು ಲಾಭ ಗಳಿಸುತ್ತಾರೆ ಎಂಬುದು. ಹಾಗಾದರೆ ಐಪಿಎಲ್ ತಂಡಗಳ ಮಾಲೀಕರು ಯಾವುದರಿಂದ ಲಾಭ ಪಡೆಯುತ್ತಾರೆ? ಎಷ್ಟು ಲಾಭ ಪಡೆಯುತ್ತಾರೆ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಐಪಿಎಲ್ ತಂಡಗಳ ಮಾಲೀಕರು ಪ್ರತಿವರ್ಷ ಕೋಟಿ ಕೋಟಿ ಹಣವನ್ನು ಆಟಗಾರರಿಗಾಗಿ ನೀಡುತ್ತಲೇ ಇರುತ್ತಾರೆ. ಇನ್ನು ಇವರಿಗೆ ಪ್ರತಿವರ್ಷ ಟಿವಿಯಲ್ಲಿ ಪ್ರಸಾರವಾಗುವುದರಿಂದ ಅವರಿಗೆ ಲಾಭ ಬರುತ್ತದೆ. ಹೌದು ಪ್ರತಿವರ್ಷ ಐಪಿಎಲ್ ಪಂದ್ಯಾವಳಿಗಳು ಪ್ರಾರಂಭವಾದರೆ ಸಾಕು ಸಾಕಷ್ಟು ವೀಕ್ಷಕರು ಈ ಪಂದ್ಯಾವಳಿಗಳನ್ನು ವೀಕ್ಷಿಸುತ್ತಾರೆ. ಇದರಿಂದ ಟಿವಿ ವಾಹಿನಿಗೆ ಅಲ್ ಲಾಭವಾಗುವುದರಿಂದ ಅವರು ತಂಡದ ಮಾಲೀಕರಿಗೆ ಹಣ ನೀಡುತ್ತಾರೆ.

ಇನ್ನೂ ಒಂದು ಟಿವಿ ವಾಹಿನಿಯ ಸುಮಾರು ಏಳು ಕೋಟಿ ರೂಪಾಯಿಯನ್ನು ಕೊಟ್ಟು ಪ್ರಸಾರದ ಹಕ್ಕನ್ನು ಪಡೆದುಕೊಂಡಿರುತ್ತದೆ. ಇನ್ನು ಈ ಪ್ರಸಾರ ಹಕ್ಕು ಸುಮಾರು ಹತ್ತು ವರ್ಷಗಳ ಕಾಲ ಒಪ್ಪಂದವಾಗಿರುತ್ತದೆ. ಈ ಮೊತ್ತದಲ್ಲಿ ಒಂದು ಪಾಲನ್ನು ಐಪಿಎಲ್ ತಂಡದ ಮಾಲೀಕರಿಗೆ ನೀಡಲಾಗುತ್ತದೆ.

ಇನ್ನು ಎರಡನೆಯದಾಗಿ ಐಪಿಎಲ್ ತಂಡದ ಪೋಷಕದ ಮೇಲೆ ಇರುವ ಜಾಹೀರಾತುಗಳು. ಅಷ್ಟೇ ಅಲ್ಲದೆ ಐಪಿಎಲ್ ಪಂದ್ಯದ ವೇಳೆ ಮಧ್ಯದಲ್ಲಿ ಬರುವ ಅನೇಕ ಜಾಹೀರಾತುಗಳಲ್ಲಿ ತಂಡದ ಆಟಗಾರರು ಭಾಗಿಯಾಗಿರುತ್ತಾರೆ. ಇದರಿಂದ ಕೂಡ ಜಾಹೀರಾತು ಕಂಪನಿಗಳು ಒಂದು ಪಾಲನ್ನು ಆ ತಂಡಕ್ಕೆ ನೀಡುತ್ತದೆ. ಮತ್ತೊಂದು ಕಡೆ ಪಂದ್ಯಾವಳಿಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರು ಟಿಕೆಟ್ ಮೊತ್ತದ ಶೇಕಡ ಎಂಬತ್ತರಷ್ಟು ಹಣವನ್ನು ತಂಡದ ಮಾಲೀಕರಿಗೆ ನೀಡಲಾಗುತ್ತದೆ.

ಇದರಿಂದ ಪಂದ್ಯಾವಳಿಗಳನ್ನು ವೀಕ್ಷಿಸಲು ಬಂದ ಪ್ರೇಕ್ಷಕರ ಹೆಚ್ಚು ಸಂಖ್ಯೆ ತಂಡದ ಮಾಲೀಕರಿಗೆ ಹೆಚ್ಚು ಮೊತ್ತವನ್ನು ನೀಡುತ್ತದೆ. ಆದರೆ ಈ ಬಾರಿಯ ಐಪಿಎಲ್ ಪಂದ್ಯಾವಳಿಗಳಲ್ಲಿ ಪ್ರೇಕ್ಷಕರಿಂದ ತಂಡದ ಮಾಲೀಕರಿಗೆ ಯಾವುದೇ ರೀತಿಯ ಲಾಭಗಳು ಒದಗಿ ಬಂದಿಲ್ಲ. ಈ ರೀತಿಯಾಗಿ ಐಪಿಎಲ್ ಪಂದ್ಯದ ಆಟಗಾರರನ್ನು ಖರೀದಿಸಲು ಸಾಕಷ್ಟು ಮಾಲೀಕರು ಕೋಟಿಕೋಟಿ ಹಣ ಸುರಿಸಿದರೆ ಅವರು ಹಲವಾರು ಮೂಲಗಳ ಮೂಲಕ ಲಾಭವನ್ನು ಗಳಿಸುತ್ತಾರೆ. ಇನ್ನು ಲಾಭ ಪ್ರತಿವರ್ಷ ಬರುತ್ತದೆ ಎಂದು ಹೇಳಲು ಆಗುವುದಿಲ್ಲ.

ಇನ್ನು ತಂಡದ ಮಾಲೀಕರಿಗೆ ಕೆಲವು ಬಾರಿ ನಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ. ಇನ್ನು ತಂಡದ ಮಾಲೀಕರ ಮೇಲೆ ಬೀಳುವ ಹೊರ ಎಂದರೆ ಅದು ತಂಡದ ಆಟಗಾರರಿಗೆ ನೀಡುವ ಹಣ ಹಾಗೂ ಸರಕಾರಕ್ಕೆ ಕಟ್ಟುವ ತೆರಿಗೆ. ಈ ರೀತಿಯಾಗಿ ಪ್ರತಿವರ್ಷ ಐಪಿಎಲ್ ತಂಡಗಳ ಮಾಲೀಕರಿಗೆ ವಿವಿಧ ಮೂಲಗಳಿಂದ ಹಣ ಬರುತ್ತದೆ. ಆದರೆ ಈ ಬಾರಿಯ ಐಪಿಎಲ್ ನಿಂದ ಯಾವುದೇ ಲಾಭಗಳು ಯಾವುದೇ ತಂಡದ ಮಾಲೀಕರಿಗೆ ಲಭಿಸಿಲ್ಲ. ಏಕೆಂದರೆ ಕರುನಾ ಇರುವ ಕಾರಣ ಇದೀಗಾಗಲೇ ಐಪಿಎಲ್ ಪಂದ್ಯಾವಳಿಗಳು ಮಧ್ಯದಲ್ಲಿ ತಡೆಹಿಡಿಯಲಾಗಿದ್ದು, ಪ್ರೇಕ್ಷಕರಿಗೆ ವೀಕ್ಷಿಸುವ ಅವಕಾಶಗಳನ್ನು ನೀಡಿಲ್ಲ. ಇದರಿಂದಾಗಿ ಈ ಬಾರಿ ಐಪಿಎಲ್ ತಂಡದ ಮಾಲೀಕರಿಗೆ ಲಾಭ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ.