ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ ಹಿಂದಿಕ್ಕಲು ಕೇವಲ ಒಬ್ಬ ಕನ್ನಡಿಗ ಮಾತ್ರ ಕಾರಣವಂತೆ! ಆ ಕನ್ನಡಿಗ ಯಾರು ಗೊತ್ತಾ?

ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ ಹಿಂದಿಕ್ಕಲು ಕೇವಲ ಒಬ್ಬ ಕನ್ನಡಿಗ ಮಾತ್ರ ಕಾರಣವಂತೆ! ಆ ಕನ್ನಡಿಗ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ ಇದೀಗ ಭಾರತ ದೇಶ ಉಳಿದ ಕ್ರೀಡೆಗಳಂತೆ ಕ್ರಿಕೆಟ್ ಕ್ರೀಡೆಯಲ್ಲಿ ಕೂಡ ಅತ್ಯದ್ಭುತವಾದ ಸಾಧನೆಯನ್ನು ಮಾಡುತ್ತಿದೆ. ಹೌದು ಇದೀಗ ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಕಣಕ್ಕಿಳಿದಿದ್ದು, ಬ್ಯಾಟ್ ಹಾಗೂ ಬಾಲ್ ಗಳ ಮೂಲಕ ತಮ್ಮ ಕೈಚಳಕವನ್ನು ಸಾಬೀತುಪಡಿಸುತ್ತಿದ್ದಾರೆ. ಹೌದು ಇದೀಗಾಗಲೇ ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯುವ ಆಟಗಾರರನ್ನು ಸೇರಿಸಲಾಗಿದದ್ದು, ಎಲ್ಲ ದೇಶಗಳ ಕ್ರಿಕೆಟ್ ತಂಡಗಳಲ್ಲಿ ಉತ್ತಮವಾದ ತಂಡ ಎಂದು ಹೆಸರು ಪಡೆದಿದೆ.

ಇನ್ನು ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡು ಭಾರತ ಕ್ರಿಕೆಟ್ ತಂಡವು ಇತಿಹಾಸ ಸೃಷ್ಟಿಸಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಇತ್ತೀಚಿಗಷ್ಟೆ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವಣ ಟೆಸ್ಟ್ ಸರಣಿಯಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಹೌದು ಇದುವರೆಗೂ ಆಸ್ಟ್ರೇಲಿಯಾ ನೆಲದಲ್ಲಿ ತಂಡವನ್ನು ಇನ್ನುಳಿದ ಯಾವ ತಂಡವು ಕೂಡ ಸರಣಿಯನ್ನು ಗೆದ್ದಿರಲಿಲ್ಲ. ಆದರೆ ಭಾರತ ಕ್ರಿಕೆಟ್ ತಂಡ ಯುವ ಆಟಗಾರರೊಂದಿಗೆ ಕಣಕ್ಕಿಳಿದು ಇತಿಹಾಸ ಸೃಷ್ಟಿಸಿತು. ಇನ್ನು ಇದೀಗ ಇತಿಹಾಸ ಸೃಷ್ಟಿಸಲು ಒಬ್ಬ ಕನ್ನಡಿಗ ಕಾರಣರಾಗಿದ್ದಾರೆ.

ಭಾರತ ತಂಡ ಯುವ ಆಟಗಾರರೊಂದಿಗೆ ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದು ವಿಜಯ ಸಾಧಿಸಲು ಒಬ್ಬ ಕನ್ನಡಿಗ ಕಾರಣರಾಗಿದ್ದು, ಕನ್ನಡಿಗರ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹಾಗಾದರೆ ಆ ಕನ್ನಡಿಗ ಯಾರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ. ಹೌದು ಭಾರತ ಕ್ರಿಕೆಟ್ ತಂಡದಲ್ಲಿ ಯುವ ಆಟಗಾರರನ್ನು ಸೇರಿಸಿ ಇದೀಗ ವಿಶ್ವದ ವಿವಿಧ ದೇಶಗಳ ಕ್ರಿಕೆಟ್ ತಂಡಗಳಲ್ಲಿ ಭಾರತ ದೇಶದ ಕ್ರಿಕೆಟ್ ತಂಡ ಅತ್ಯುನ್ನತ ಸ್ಥಾನದಲ್ಲಿದೆ. ಇನ್ನು ಇದಕ್ಕೆಲ್ಲ ಕಾರಣರಾದವರು ನಮ್ಮ ಕರ್ನಾಟಕದ ಅತ್ಯದ್ಭುತ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್.

ನಮ್ಮ ಕರ್ನಾಟಕದ ಆಟಗಾರರಾಗಿರುವ ರಾಹುಲ್ ದ್ರಾವಿಡ್ ಅವರು ಇದೀಗ ಈ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇನ್ನು ಈ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಗ್ರೇಗ್ ಚಾಪೆಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಭಾರತದಲ್ಲಿ ಆಸ್ಟ್ರೇಲಿಯಾಗಿಂತ ಉತ್ತಮ ಪ್ರತಿಭೆಗಳನ್ನು ಗುರುತಿಸುವುದಕ್ಕೆ ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾದ ಮೆದುಳನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ದೇಶದಲ್ಲಿ ಯುವ ಆಟಗಾರರ ಅಭಿವೃದ್ಧಿಪಡಿಸುವಲ್ಲಿ ಕೊರತೆ ಇದೆ ಎಂದು ಕೂಡ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಯುವ ಪ್ರತಿಭೆಗಳನ್ನು ಗುರುತಿಸುವುದರಲ್ಲಿ ಆಗುವವರಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವ ವಿಚಾರದಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದ್ದಾರೆ ಎಂದು ಕೂಡ ಹೇಳಿದ್ದಾರೆ.

ಇನ್ನು ಮಾತು ಮುಂದುವರಿಸಿದ ಚಾಪೆಲ್ ಅವರು ರಾಹುಲ್ ದ್ರಾವಿಡ್ ಅವರು ತಾವು ಈ ಹಿಂದೆ ಏನು ಮಾಡುತ್ತಿದ್ದೆವು ಎಂಬುವುದನ್ನು ಅರಿತುಕೊಂಡಿದ್ದ ಅವರು ಭಾರತದಲ್ಲಿ ಪುನರಾವರ್ತಿಸಿ ಯಶಸ್ವಿಯಾಗಿದ್ದಾರೆ ಎಂದು ಕ್ರಿಕೆಟ್ ಡಾಟ್ ಕಾಮ್ ಗೆ ಹೇಳಿದ್ದಾರೆ. ಇನ್ನು ಐತಿಹಾಸಿಕವಾಗಿ ನಾವು ಯುವ ಆಟಗಾರರನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವಲ್ಲಿ ಅತ್ಯುತ್ತಮವಾಗಿದ್ದೇವು. ಆದರೆ ಕಳೆದ ಎರಡು ವರ್ಷಗಳಿಂದ ಅದು ಬದಲಾಗಿದೆ. ಇದೀಗ ಸಾಕಷ್ಟು ಸಾಮರ್ಥ್ಯ ಹೊಂದಿರುವ ಯುವ ಆಟಗಾರರನ್ನು ನಾನು ನೋಡುತ್ತಿದ್ದೇನೆ. ಅಂತಹ ಒಬ್ಬ ಆಟಗಾರರನ್ನು ಕಳೆದುಕೊಳ್ಳುವುದು ಒಮ್ಮತವನ್ನು ಎಂದು ಕೂಡ ಅವರು ಹೇಳಿದ್ದಾರೆ.

ಇನ್ನು ಮಾತು ಮುಂದುವರಿಸಿದ ಚಾಪೆಲ್ ಅವರು ಭಾರತ ತಂಡ ಮೂರರಿಂದ ನಾಲ್ಕು ಯುವ ಆಟಗಾರರನ್ನು ಸೇರಿಸಿಕೊಂಡರೆ ಅದನ್ನು ಎಲ್ಲರೂ ಭಾರತ ಬಿ ತಂಡ ಎಂದು ಗುರುತಿಸಿದ್ದರು. ಆದರೆ ಅವರು ಬ್ರಿಸ್ಬೇನ್ ಟೆಸ್ಟ್ ಸರಣಿಯಲ್ಲಿ ಆಡಿದ ರೀತಿ ಎಲ್ಲರನ್ನು ಒಂದು ಕ್ಷಣ ಆಶ್ಚರ್ಯ ಗಳಿಸಿತ್ತು. ಆ ತಂಡದಲ್ಲಿದ್ದ ಆಟಗಾರರು ಭಾರತ ತಂಡಕ್ಕೆ ಆಡಿದವರಾಗಿದ್ದರು ಎಂದು ಅವರು ಭಾರತ ಕ್ರಿಕೆಟ್ ತಂಡ ಹಾಗೂ ಭಾರತದ ಯುವ ಆಟಗಾರರ ಬಗ್ಗೆ ಅಷ್ಟೇ ಅಲ್ಲದೆ ದ್ರಾವಿಡ್ ಅವರ ಸೃಜನಾತ್ಮಕ ಚಿಂತನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.