ಟಿಆರ್ಪಿ ಯಲ್ಲಿ ಬಾರಿ ಬದಲಾವಣೆ, ಕೆಳಗಡೆ ಇಳಿದ ಸತ್ಯ, ಕನ್ನಡತಿಗಂತೂ ಕೊನೆಗೂ ಸಿಹಿ ಸುದ್ದಿ. ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

ಟಿಆರ್ಪಿ ಯಲ್ಲಿ ಬಾರಿ ಬದಲಾವಣೆ, ಕೆಳಗಡೆ ಇಳಿದ ಸತ್ಯ, ಕನ್ನಡತಿಗಂತೂ ಕೊನೆಗೂ ಸಿಹಿ ಸುದ್ದಿ. ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರತಿ ವಾರವೂ ಕೂಡ ಕನ್ನಡದ ಧಾರಾವಾಹಿಗಳ ಟಿಆರ್ಪಿ ಲಿಸ್ಟ್ ಬಿಡುಗಡೆ ಯಾಗುತ್ತದೆ, ಬಹುತೇಕ ಸಮಯದಲ್ಲಿ ಟಿಆರ್ಪಿ ಲಿಸ್ಟಿನಲ್ಲಿ ನಾವು ಹೆಚ್ಚಿನ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ ಯಾಕೆಂದರೆ ಒಂದುಹಲವಾರು ಧಾರಾವಾಹಿಗಳು ಕಾಯಂ ಜಾಗದಲ್ಲಿ ಕುಳಿತು ಕೊಂಡಿರುವ ಕಾರಣ ಇತರ ಧಾರವಾಹಿಗಳು ಉಳಿದ ಸ್ಥಾನಗಳಿಗೆ ಪೈಪೋಟಿ ನಡೆಸುತ್ತವೆ. ಇನ್ನು ಈ ವಾರದ ಟಿಆರ್ಪಿ ಲಿಸ್ಟಿನಲ್ಲಿ ನಾವು ಹೆಚ್ಚಿನ ಬದಲಾವಣೆಯನ್ನು ಕಾಣಬಹುದು ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೇ ಹೆಚ್ಚಿನ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ, ಅದೇ ಸಮಯದಲ್ಲಿ ಈ ವಾರ ಕೂಡ ಜೀ ಕನ್ನಡ ವಾಹಿನಿಯ ಧಾರವಾಹಿಗಳು ಬಹುತೇಕ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಲರ್ಸ್ ಕನ್ನಡ ಧಾರವಾಹಿಗಳು ಕೂಡ ಕಳೆದ ವಾರ ಗಳಿಗೆ ಉತ್ತಮ ಸಾಧನೆಯನ್ನು ಮಾಡಿದೆ . ಆದರೆ ಇದೇ ಸಮಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಹಲವಾರು ತಿಂಗಳುಗಳ ಬಳಿಕ ಮೊದಲನೇ ಸ್ಥಾನಕ್ಕೆ ಇಷ್ಟು ದಿವಸ ಐದನೇ ಅಥವಾ ಆರನೇ ಸ್ಥಾನ ಪಡೆದು ಕೊಳ್ಳುತ್ತಿದ್ದ ಧಾರಾವಾಹಿಯೊಂದು ಕಾಲಿಟ್ಟಿದೆ.

ಇನ್ನು ಮೊದಲ ದಿನದಿಂದಲೂ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಧಾರವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿ 8 ಹಾಗೂ9 ನೇ ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟು ಕೊಳ್ಳಬೇಕಾಗಿತ್ತು. ಆದರೆ ಈ ವಾರ ಕನ್ನಡತಿಗೆ ಕೊಂಚ ಸಿಹಿ ಸುದ್ದಿ ಸಿಕ್ಕಿದೆ. ಬನ್ನಿ ಹಾಗಿದ್ದರೆ ಒಟ್ಟಾರೆಯಾಗಿ ಈ ವಾರದ ಟಿಆರ್ಪಿ ಲಿಸ್ಟ್ ಹೇಗಿದೆ ಎಂಬುದನ್ನು ನಾವು ನೋಡಿಕೊಂಡು ಬರೋಣ. ಆದರೆ ಇದೇ ಸಮಯದಲ್ಲಿ ಈ ವಾರದ ಟಿಆರ್ಪಿ ಲಿಸ್ಟ್ ನೋಡಿ, ನಂತರ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.

ಸ್ನೇಹಿತರೆರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಷ್ಟು ದಿವಸ ಜೀ ಕನ್ನಡ ವಾಹಿನಿಯ ಪಾರು ಧಾರವಾಹಿ 5 ಅಥವಾ ನಾಲ್ಕನೇ ಸ್ಥಾನವನ್ನು ಪಡೆದು ಕೊಳ್ಳುತ್ತಿತ್ತು. ಆದರೆ ಇದೀಗ ಬಿಡುಗಡೆಯಾದ ಮೊದಲ ಕೆಲವು ದಿನಗಳ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಪಾರು ಧಾರವಾಹಿ ಅಗ್ರಸ್ಥಾನಕ್ಕೇರಿದೆ, ಇನ್ನು ಎರಡನೇ ಸ್ಥಾನದಲ್ಲಿ ಇಷ್ಟು ದಿವಸ ಮೊದಲ ಹಾಗೂ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಗಟ್ಟಿಮೇಳ ಹಾಗೂ ಸತ್ಯ ಧಾರವಾಹಿಗಳು ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.

ಈ ಎರಡು ದಾರವಾಹಿಗಳು ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗಿರುವುದು ಈ ಮೂಲಕ ಖಚಿತವಾಗಿದೆ, ಇನ್ನು ಮೂರನೇ ಸ್ಥಾನದಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿಯು ಸ್ಥಾನ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ, ಆದರೆ ಇಷ್ಟು ದಿವಸ ಜೊತೆ ಜೊತೆಯಲಿ ಧಾರಾವಾಹಿ ಎರಡನೇ ಸ್ಥಾನ ಪಡೆದು ಕೊಳ್ಳುತ್ತಿತ್ತು. ಇನ್ನು ನಾಲ್ಕನೇ ಸ್ಥಾನದ ಕುರಿತು ನಾವು ಮಾತನಾಡುವುದಾದರೇ ಇಷ್ಟು ದಿವಸ ಆರನೇ ಸ್ಥಾನದಲ್ಲಿ ಇದ್ದ ಮಂಗಳ ಗೌರಿ ಧಾರವಾಹಿಯು ಇದೀಗ ಹೆಚ್ಚಿನ ಟಿಆರ್ಪಿ ಪಡೆದುಕೊಂಡು ನಾಲ್ಕನೇ ಸ್ಥಾನಕ್ಕೆ ಏರಿಕೆಯಾಗಿದೆ.

ಇನ್ನು ಐದನೇ ಸ್ಥಾನದಲ್ಲಿ ನಾಗಿಣಿ ಧಾರಾವಾಹಿ ಪಡೆದು ಕೊಂಡಿದ್ದು, ಪ್ರೇಕ್ಷಕರು ಈ ವಾರವೂ ಕೂಡ ನಾಗಿಣಿ ಧಾರವಾಹಿ ಯನ್ನು ಇಷ್ಟ ಪಟ್ಟಿದ್ದಾರೆ. ಇನ್ನು ಎಇಷ್ಟು ದಿವಸ ಹತ್ತನೇ ಸ್ಥಾನದ ಆಸು ಪಾಸಿನಲ್ಲಿದ್ದ ಗೀತಾ ಧಾರಾವಾಹಿ ಇದೇ ಮೊಟ್ಟ ಮೊದಲ ಬಾರಿಗೆ ಉತ್ತಮ ಸಾಧನೆ ಮಾಡಿ ಆರನೇ ಸ್ಥಾನಕ್ಕೆ ಏರಿಕೆಯಾಗಿದೆ. ಇನ್ನು 8 ಹಾಗೂ 9ನೇ ಸ್ಥಾನದಿಂದ ಮೇಲಕ್ಕೆ ಏಳದೆ ಇದ್ದ ಕನ್ನಡತಿ ಧಾರಾವಾಹಿ ಏಳನೇ ಸ್ಥಾನಕ್ಕೆ ಏರಿಕೆ ಯಾಗುವ ಮೂಲಕ ತೃಪ್ತಿ ಪಟ್ಟುಕೊಂಡಿದೆ. ಇನ್ನು ಎಂಟನೇ ಸ್ಥಾನದಲ್ಲಿ ಗಿಣಿರಾಮ ಹಾಗೂ 9ನೇ ಸ್ಥಾನದಲ್ಲಿ ನಮ್ಮನೆ ಯುವರಾಣಿ ಹಾಗೂ ಕೊನೆಯ ಹತ್ತನೇ ಸ್ಥಾನದಲ್ಲಿ ಮುದ್ದುಲಕ್ಷ್ಮಿ ಧಾರವಾಹಿ ಸ್ಥಾನ ಪಡೆದು ಕೊಂಡಿದೆ.